ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ‘ಕನಕ ಸಂಭ್ರಮ’ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆಯಿತು.
ಇನ್ನರ್ ವ್ಹೀಲ್ ಕ್ಲಬ್ ಜಿಲ್ಲೆ 318 ರ ಜಿಲ್ಲಾ ಚೆಯರ್ ಮ್ಯಾನ್ ವಿಶಾಲಾಕ್ಷಿ ಕುಡ್ವ ದೀಪ ಬೆಳಗಿಸಿ, ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ನೇಹ ಮತ್ತು ಸೇವೆಯೇ ನಮ್ಮ ಕ್ಲಬ್‌ನ ಗುರಿ. ತಮ್ಮ ಸೇವಾ ಚಟುವಟಿಕೆಯನ್ನು ಮತ್ತೆ ಸರಕಾರವೇ ಮುಂದುವರಿಸಿರುವುದು ಸಂತೋಷದ ವಿಚಾರ. ಅವೆಲ್ಲ ಕೇವಲ ಮಹಿಳೆಯರ ಸಾಧನೆಯಲ್ಲ, ಇದರ ಜೊತೆಗೆ ಮಹಿಳೆಯರ ಗಂಡಂದಿರ ಸಹಕಾರವೂ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಯಾಕೆಂದರೆ ಸೇವಾ ಚಟುವಟಿಕೆಗೆ ಆರ್ಥಿಕ ಕ್ರೋಢೀಕರಣಕ್ಕೆ ಗಂಡಂದಿರ ನೆರವು ಅಗತ್ಯ. ಈ ನಿಟ್ಟಿನಲ್ಲಿ ಅನಗತ್ಯ ಖರ್ಚಿಗಿಂತ ಮನಸ್ಸಿಗೆ ಸಮಾಧಾನ, ನೆಮ್ಮದಿ ತರುವ ಸೇವೆ ಮಾಡಿ ಎಂದರು.
ಗೌರವ ಉಪಸ್ಥಿತರಿದ್ದ ಬೆಂಗಳೂರಿನ ಪಿಲಂತ್ರೋಪಿಸ್ಟ್, ಪರಿಸರವಾದಿ ರೇವತಿ ಕಾಮತ್ ಮಾತನಾಡಿ, ಯಾವುದೇ ಒಂದು ಸಂಸ್ಥೆ 50 ವರ್ಷಗಳನ್ನು ಪೂರೈಸುವುದು ಸುಲಭದ ಕೆಲಸವಲ್ಲ. ಯಾವುದೇ ಸಂಸ್ಥೆ ಬೆಳೆಯಲು ಆರ್ಥಿಕ ಕ್ರೋಢೀಕರಣ ಅಗತ್ಯ. ಅಂತಹ ಶಕ್ತಿ ಮಹಿಳೆಯಲ್ಲಿರಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು, ಇಂದು ಇಂದು ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ತುಂಬಾ ಅವಕಾಶವಿದೆ. ಮನೆಯಲ್ಲೇ ಕುಳಿತು ಸಾಕಷ್ಟು ಹಣ ಗಳಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಕಡೆಯಿಂದ ಉಚಿತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಇನ್ಸರ್‌ವೀಲ್ ಕ್ಲಬ್ 50 ವರ್ಷ ಪೂರೈಸುವ ಮೂಲಕ ಸುವರ್ಣ ಸಂಭ್ರಮ ಆಚರಿಸಿದ ಹಿನ್ನೆಲೆ ಮತ್ತು ಯಶಸ್ವಿಯಾಗಿ 50 ವರ್ಷದಲ್ಲಿ ನಿರಂತರ ಉತ್ತಮ ಸೇವಾ ಚಟುವಟಿಕೆಗಳನ್ನು ನೀಡುತ್ತಾ ಬಂದಿರುವ ಬಹಳ ಹಿರಿಯ ಕ್ಲಬ್ ಆಗಿರುವ ನಿಟ್ಟಿನಲ್ಲಿ ಪುತ್ತೂರು ಇನ್ಸರ್ ವಿಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷೆ ವೈಶಾಲಿ ಕುಟ್ಟಿ ಅವರು ‘ಗೋಲ್ಡನ್ ಕಾಲರ್’ ನೀಡಿದರು.
ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಕ್ಲಬ್‌ನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಅವರಿಗೆ ಜಿಲ್ಲಾಧ್ಯಕ್ಷರು ಗೋಲ್ಡನ್ ಕಾಲರ್ ತೊಡಿಸುವ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರ ಪತಿ ಸುಧೀರ್ ಆಚಾರ್ಯ ಅವರನ್ನು ಗೌರವಿಸಲಾಯಿತು.
ಇನ್ನರ್ ಸ್ಟೀಲ್ ಕ್ಲಬ್‌ನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಮಾತನಾಡಿ, ಕ್ಲಬ್‌ಗೆ ಇಂದು ಮಹತ್ವದ ಮೈಲುಗಲ್ಲು ಈ ಸಂಭ್ರಮ ಸಂಭ್ರಮ ಮಾತ್ರವಾಗದೆ ಕ್ಲಬ್‌ನ ಭವಿಷ್ಯ ರೂಪಿಸಲು ಸಹಕಾರಿಯಾಗಲಿ. ಬಡ ಮಕ್ಕಳಿಗೆ ಶಿಕ್ಷಣ, ಬಡ ಕುಟುಂಬಗಳಿಗೆ ಬೆಳಕಿನ ಆಶಯವಾಗಲಿ ಎಂದರು. ‘ಸೇವೆ ಹಾಗೂ ಸ್ನೇಹ’ ಎಂಬ ಧೈಯ ವಾಕ್ಯದೊದಿಗೆ ಈಐದು ದಶಕಗಳಲ್ಲಿ ಇನ್ಸರ್ ವೀಲ್ ಕ್ಲಬ್ ಪುತ್ತೂರು ಮಹಿಳಾ ಸಬಲೀಕರಣ, ಆರೋಗ್ಯ ಶಿಬಿರ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಇಂತಹ ಅನೇಕ ಸಮಾಜಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ತನ್ನದೇ ಛಾಪನ್ನು ಮೂಡಿಸಿದೆ. ಸದ್ಯ 40 ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯು ಈ ವರ್ಷ ತನ್ನ 50 ವರ್ಷದ ಸವಿನೆನಪಿಗಾಗಿ ‘ಕನಕ ಸಂಭ್ರಮ ವನ್ನು ಆಚರಿಸುತ್ತಿದೆ ಎಂದರು.
ಕ್ಲಬ್‌ನ ಹಿರಿಯ ನಿರ್ದೇಶಕಿ ವಿದ್ಯಾ ಗೌರಿ, ಕ್ಲಬ್ ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.
30 ಮಂದಿ ಹಿರಿಯ ಅಧ್ಕ್ಷಕ್ಷರುಗಳಿಗೆ ಸನ್ಮಾನ :
ಕ್ಲಬ್ ಮುನ್ನಡೆಸುವಲ್ಲಿ ಆರಂಭದಿಂದಲೂ ಸಕ್ರಿಯರಾಗಿದ್ದವರ ಪೈಕಿ 30 ಮಂದಿ ಮಾಜಿ ಅಧ್ಯಕರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 3 ಬಾರಿ ಆಧ್ಯಕರಾಗಿ ಪುಷಾ ಕೆ.ಪಿ, ಪಾರ್ವತಿ ಭಟ್, ವಿದ್ಯಾ ಗೌರಿ, ವಯಲೆಟ್ ಡಿ’ಸೋಜ, ಮೀರಾ ರೈ ವೀಣಾ ಕೊಳತ್ತಾಯ, ರಾಜಿ ಬಲರಾಮ ಆಚಾರ್ಯ, ನಂದಿತಾ ಎಸ್.ರಾವ್, ತಾರಾಮತಿ ಜೆ.ನಾಯಕ್, ನವೀನಾ ರೈ, ಸುಷ್ಮಾ ಜೈನ್, ವಿಜಯಲಕ್ಷ್ಮಿ ಶೇಣೈ, ಪ್ರಮೀಳಾ ರಾವ್, ಮಂಜುಳಾ ಭಾಸ್ಕರ್, ಪದ್ಮಾ ಆಚಾರ್ಯ, ಕವಿತಾ ಪೊನ್ನಪ್ಪ, ಶೋಭಾ ಕೊಳತ್ತಾಯ, ಈಶ್ವರಿ ಗೋಪಾಲ್, ಆತಾ ಭಟ್, ರಮಾ ಭಟ್, ಸೆನೋರಿಟಾ ಆನಂದ್, ಶಂಕರಿ ಎಮ್.ಎಸ್ ಭಟ್, ಲಲಿತಾ ಭಟ್, ಪುಷ್ಪಾ ಕೆದಿಲಾಯ, ಸಹನಾ ಭವೀನ್, ಸೀಮಾ ನಾಗರಾಜ್, ವೀಣಾ ಬಿ.ಕೆ, ಟೈನಿ ದೀಪಕ್, ಅಶ್ವಿನಿಕೃಷ್ಣ ಮುಳಿಯ, ರಾಜೇಶ್ವರೀ ಆಚಾರ್ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ ನ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿ ದಿವಂಗತರಾಗಿರುವ ಕೃಷ್ಣಾಬಾಯಿ, ಡಾ.ನಳೆನಿರೆ, ಪುಷ್ಪಲತಾ ಪ್ರಭು, ಲೀಲಾವತಿ ಆಚಾರ್ಯ, ಕಾವೇರಿ ಭಟ್, ರಮಾ ಭಟ್, ವಸಂತಿ ನಾಯಕ್ ಅವರನ್ನು ಸ್ಮರಿಸಲಾಯಿತು.
ದ್ವಾರದಲ್ಲಿ ಸೆಲ್ಪಿ ಪಾಯಿಂಟ್, ಬಾಲಕರ ಚೆಂಡ ನೃತ್ಯ ಪ್ರದರ್ಶನ, ಒಂದೇ ಬಣ್ಣದ ಸಾರಿಯಲ್ಲಿ ಮಿಂಚಿದ ಸದಸ್ಯೆಯರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
”ಮೆಲುಕು’ ಸವಿ ನೆನಪು ಪುಸ್ತಕ ಬಿಡುಗಡೆ:
ಕನಕ ಸಂಭ್ರಮದ ಸವಿನೆನಪಿನ “ಮೆಲುಕು ಸವಿ” ನೆನಪಿನ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.ಪುಸ್ತಕ ನಿರ್ವಹಣೆ ಮಾಡಿದ ವಿಜಯಲಕ್ಷ್ಮೀ ಶೆಣೈ ಅವರು ಪುಸ್ತಕದ ವಿಷಯದ ಕುರಿತು ಮಾತನಾಡಿ, ಈ ಪುಸ್ತಕ ಹಿರಿಯ ಕಿರಿಯರಿಗೆ ಸಂಪರ್ಕ ಸೇತುವೆಯಾಗಲಿದೆ ಎಂದರು.
ಸದಸ್ಯೆ ವೀಣಾ ಕೊಳತ್ತಾಯ 1 ಲಕ್ಷ ರೂ.ದೇಣಿಗೆಯನ್ನು ಕನ್ಯಾನ ಭಾರತ ಸೇವಾಶ್ರಮಕ್ಕೆ ಗಣ್ಯರ ಮೂಲಕ ಹಸ್ತಾಂತರಿಸಿದರು.
ಅಧ್ಯಕ್ಷೆ ರಾಜೇಶ್ವರಿ ಸ್ವಾಗತಿಸಿದರು. ಉಪಾಧ್ಯಕ್ಷೆಸುಧಾ ಕಾರಿಯಪ್ಪ ವಂದಿಸಿದರು. ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕೋಶಾಧಿಕಾರಿ ಲತಾ ನಾಯಕ್, ಸಂಪಾದಾ ಶ್ರೀದೇವಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ವಚನ ಜಯರಾಮ್, ಲಲಿತಾ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್ ನ ನಿರ್ದೇಶಕರಾದ ಲಲಿತಾ ಭಟ್, ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಪ್ರಮೀಳಾ ರಾವ್, ಸುಶ್ಚಾಜೈನ್, ಲಲಿತಾ ಭಟ್, ಸೆನೋರಿಟಾ ಆನಂದ, ಸೀಮಾನಾಗರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಕ್ಲಬ್ ನ ದೀಪಕ್ ಕೆ.ಪಿ., ರೆಡ್ಡಿ ಎಸ್ ಹೊಳ್ಳ, ವೀಣಾ ಕೊಳತ್ತಾಯ ಅದೃಷ್ಟ ಚೀಟಿಯ ವಿಶೇಷರಾಗಿ ಆಯ್ಕೆಯಾದರು. ಇನ್ನರ್ ವೀಲ್ ಕ್ಲಬ್ ನ ಜಿಲ್ಲಾ ಐಎಸ್. ದೀಪಾ, ಇಎಸ್ ಚಿತ್ರ ರಾವ್, ಶಮೀರ್ ರಾಜಲಕ್ಷ್ಮಿ, ಅನುರಾಧಾ, ರೋಟರಿ ಜಿಲ್ಲೆಯ ಡಾ.ಭಾಸ್ಕರ್ ಎಸ್, ರೋಟರಿ ಕ್ಲಬ್‌ನ ಹಿರಿಯ ಸದಸ್ಯ ರಾಣಿ ಕೆ.ಆರ್.ಚೆಕ್, ಕ್ರಸ್ನ ಹಿರಿಯರಾಣಿ ಜೈರಾಜ್ ಭಂಡಾರಿ, ಸಾಮಮೆತ್ತಡ್ಕ ಗೋಪಾಲಕೃಷ್ಣಭಟ್, ವರ್ತಕ ಸಂಘದ ಮಾಜಿ ಅಧ್ಯಕ್ಷ ಜೋನ್ ಕುಟಿನ್ನಾ, ವೆಂಕಟ್ರಮಣ ಗೌಡ ಕಳುದಾಜೆ, ದೀಪಕ್ ಕೆ.ಪಿ, ಚಿದಾನಂದ ಬೈಲಾಡಿ, ಕಾಂಚನ ಸುಂದರ ಭಟ್, ಎ.ಜೆ.ರೈ, ಬಾಲಕೃಷ್ಣಚಾರ್ಯ, ಜ್ಯೋ ಡಿ’ಸೋಜಾ, ಬಾಲಕೃಷ್ಣಕೊಳತ್ತಾಯ, ಸುಳ್ಯದ ಇನ್ನರ್ ವೀಲ್ * ಕ್ಲಬ್ ನಯೋಗಿತ, ಉಡುಪಿ, ಮೈಸೂರು ಐಸಿರಿ ಕ್ಲಬ್‌ಗಳ ಸದಸ್ಯರು, ಜಿ.ಎಲ್. ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ಶ್ರೀಧರ್ ಆಚಾರ್ಯ, ಅನಿಲ ದೀಪಕ್, ಶರತ್ ರೈ, ಮಾರ್ಟನ್ ಡಿ’ಸೋಜು, ಸೂರಜ್ ಶೆಣೈ, ರಂಜಿತಾ ಶಂಕರ್, ಚೇತನ್ ಪ್ರಕಾಶ್ ಕಜೆ, ಭರತ್ ಪೈ, ಪ್ರೇಮಾನಂದ, ಡಾ. ಶ್ರೀಪ್ರಕಾಶ್, ಸೂರಜ್ ನಾಯರ್, ವಿಕ್ಟರ್ ಮಾರ್ಟಸ್, ಸ್ವರ್ಣ ಗೌರಿ, ಮೌನೇಶ್ ವಿಶ್ವಕರ್ಮ, ಡಾ.ಶಶಿಧರ್ ಕಜೆ ಸಹಿತ ಹಲವಾರು ಮಂದಿ ರೋಟರಿ ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವಿದುಷಿ ಜ್ಞಾನ ಐತಾಳ್ ಅವರಿಂದ ನೃತ್ಯ ಪ್ರದರ್ಶನಗೊಂಡಿತು.