ಪುತ್ತೂರು: ವಿದ್ಯಾರ್ಥಿ ಜೀವನ ಬಂಗಾರವಾಗಲು ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಅಗತ್ಯ. ವೈಫಲ್ಯಗಳು ಯಶಸ್ಸಿನ ಭಾಗವೇ ಆಗಿರುವುದರಿಂದ ವೈಫಲ್ಯಗಳಿಗೆ ಸಿದ್ಧರಾಗಿರಿ ಮತ್ತು ಅದು ಯಶಸ್ಸನ್ನು ಸಾಧಿಸಲು ಸಹಕಾರಿ’ ಎಂದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ನಳಿನಾಕ್ಷಿ ಎ. ಎಸ್ ಹೇಳಿದರು.
ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2024-25ನೇ ಸಾಲಿನ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾl ಆ್ಯಂಟನಿ ಪ್ರಕಾಶ್ ಮೊಂತೇರೊ, ವಿದ್ಯಾರ್ಥಿಗಳು ಸಕಾರಾತ್ಮಕ ಅಂಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ 2022-23ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಬಿಕಾಂ ಪರೀಕ್ಷೆಯಲ್ಲಿ 2 ನೇ ರಾಂಕ್ ಗಳಿಸಿದ ಮತ್ತು ಮೊದಲ ಪ್ರಯತ್ನದಲ್ಲಿಯೇ ಸಿಎ ಇಂಟರ್ ಮೀಡಿಯೇಟ್ ಎರಡೂ ಗುಂಪುಗಳನ್ನು ಪೂರ್ಣಗೊಳಿಸಿದ ರಿತೇಶ್ ರೈ ಎಂ. ಅವರನ್ನು ಸನ್ಮಾನಿಸಲಾಯಿತು. ಸಿಎ ಫೌಂಡೇಶನ್‌ನ ಇತರ ಸಾಧಕರಿಗೆ ಪ್ರಾಂಶುಪಾಲರು ಸ್ಮರಣಿಕೆ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳಾದ ತನ್ವೀರ್ ಪಿಂಟೋ ಸ್ವಾಗತಿಸಿ, ಸಿಮ್ರಾನ್ ತಾಜ್ ವಂದಿಸಿದರು. ಝಕಿಯಾ ಸನಾ ಕಾರ್ಯಕ್ರಮ ನಿರೂಪಿಸಿದರು.