ಕಾಣಿಯೂರು: ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಒಕ್ಕೂಟ, ಯುವ ಸಂಘ, ಮಹಿಳಾ ಸಂಘ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಒಕ್ಕಲಿಗ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನ.23 ರಂದು ಕುದ್ಮಾರು ಅನ್ಯಾಡಿ ತರವಾಡು ಮನೆಯಲ್ಲಿ 6 ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 50 ವರ್ಷ ಪೂರೈಸಿದ ದಂಪತಿಗಳಾದ ರೇವತಿ ಮತ್ತು ಪದ್ಮಯ್ಯ ಗೌಡ ಕೆಡೆಂಜಿ, ಪೂವಕ್ಕ ಮತ್ತು ಮೋನಪ್ಪ ಗೌಡ ಅನ್ಯಾಡಿ, ಚಿನ್ನಮ್ಮ ಮತ್ತು ಪದ್ಮಯ್ಯ ಗೌಡ ಅನ್ಯಾಡಿ, ಶಿವಮ್ಮ ಮತ್ತು ಬಾಲಣ್ಣ ಗೌಡ ಹೊಸೋಕ್ಲು, ಮೀನಾಕ್ಷಿ ಮತ್ತು ಬೂಚಣ್ಣ ಗೌಡ ಕೆರೆನಾರು, ರಾಜೇಶ್ವರಿ ಮತ್ತು ಸತ್ಯನಾರಾಯಣ ಗೌಡ ಕಾಯರ್ ಮುಗೇರು ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದ್ಮಾರು ಒಕ್ಕಲಿಗ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷ ಶೂರಪ್ಪ ಗೌಡ ಪಟ್ಟೆತ್ತಾನ ವಹಿಸಿದ್ದರು. ಈ ಸಂದರ್ಭದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಡಿ. ವಿ ಮನೋಹರ್, ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಒಕ್ಕಲಿಗ ಸೇವಾ ಸಂಘದ ಸವಣೂರು ವಲಯ ಕಾರ್ಯದರ್ಶಿ ನಾಗೇಶ್ ಕೆ ಕೆಡೆಂಜಿ, ಒಕ್ಕಲಿಗ ಸ್ವ ಸಹಾಯ ಸಂಘದ ಸವಣೂರು ವಲಯ ಅಧ್ಯಕ್ಷೆ ಅನಿತಾ ಲಕ್ಷ್ಮಣ ಗೌಡ, ಮಾಗಣೆ ಗೌಡ ಮುಖ್ಯಸ್ಥ ದೇವಪ್ಪ ಗೌಡ ನಡುಮನೆ, ಅನ್ಯಾಡಿ ಬಾರಿಕೆ ಕುಟುಂಬದ ಆಡಳಿತ ಸಮಿತಿ ಅಧ್ಯಕ್ಷ ಯೋಗೀಶ್ ಕೆಡೆಂಜಿ, ಕುದ್ಮಾರು ಗ್ರಾಮ ಸಮಿತಿ ಅಧ್ಯಕ್ಷ ವಿಠಲ ಗೌಡ ಕಾಪೆಜಲು, ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಪುಷ್ಪಲತಾರವರು ಉಪಸ್ಥಿತರಿದ್ದರು.