ನವದೆಹಲಿ : ಗ್ಯಾನ ವ್ಯಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ಕಾರಣ ಅಲ್ಲಿ ಉತ್ಖನನ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಗ್ಯಾನವ್ಯಾಪಿ ನಿರ್ವಹಣಾ ಸಮಿತಿ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟೀಸ್ ನೀಡಿದೆ.
ಕಳೆದ ಬಾರಿ ಪುರಾತತ್ವ ಇಲಾಖೆಯ ವತಿಯಿಂದ ಮಸೀದಿಯ ವಜುಖಾನಾದಲ್ಲಿ ವಿಡಿಯೋಗ್ರಾಫಿಕ್ ಸಮೀಕ್ಷೆ ನಡೆಸಲಾಗಿತ್ತು. ಆಗ ವಜೂಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು.
ತಕ್ಷಣ ಸಮೀಕ್ಷೆಗೆ ತಡೆಯಾಜ್ಙೆಯನ್ನು ಮಾಡಲಾಯಿತು. ಬಳಿಕ ಮಸೀದಿಯ ಕೆಲವು ಭಾಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಲ್ಲದೇ, ಕೋಣೆಗಳಿಗೆ ಬೀಗ ಹಾಕಲಾಗಿದೆ. ಆಗಿನಿಂದ ಗ್ಯಾನವ್ಯಾಪಿ ಮಸೀದಿಯನ್ನು ಸಮೀಕ್ಷೆ ಮಾಡಬೇಕೆಂದು ಹಿಂದೂಪರ ಸಂಘಟಕರ ಒತ್ತಾಯವಾಗಿದೆ.