ಫೆ.25 : ಒಡ್ಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ಗಡಿನಾಡ ಸಮ್ಮೇಳನ – 2023

ಪುತ್ತೂರು : ಗಡಿನಾಡ ಧ್ವನಿ ಮಾಸಪತ್ರಿಕೆ ಹಾಗೂ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಒಡ್ಯ ುನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಹಕಾರದೊಂದಿಗೆ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ – 2023 .2ಫೆ5 ಶನಿವಾರ ಒಡ್ಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಗಡಿನಾಟ ಸಮ್ಮೇಳನವನ್ನು ಈ ಬಾರಿಯೂ ಸಮಸ್ತ ಕನ್ನಡಾಭಿಮಾನಿಗಳ ಸಹಕಾರದಿಂದ ವಿಶೇಷವಾಗಿ ಅದ್ದೂಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 7.30 ಕ್ಕೆ ವಿವಿಧ ಭಜನಾ ತಂಡಗಳಿಮದ ಭಜನೆ ನಡೆಯಲಿದೆ. ಬಳಿಕ ಶ್ರೀಕೃಷ್ಣ ಭಟ್ ಬಡ್ಯಮೂಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಮಾನಾಥ ರೈ ಪಡ್ಯಂಬೆಟ್ಟು, ಶಂಕರ ರೈ ಬಾಳೆಮೂಲೆ, ದೇವಪ್ಪ ನಾಯ್ಕ ಕೊಂದಲ್ಕಾನ, ವೀಣಾ ಎಸ್ ಭಟ್ ಉಪಸ್ಥಿತರಿರುವರು.



































 
 

ಬೆಳಿಗ್ಗೆ 9 ಕ್ಕೆ ಪಾಣಾಜೆ ಗ್ರಾಪಂ ಅಧ್ಯಕ್ಷೆ ಭಾರತಿ ವೆಂಕಟ್ರಮಣ ಭಟ್ ಮೆರವಣಿಗೆ ಉದ್ಘಾಟಿಸುವರು. ಸಾಹಿತಿ ನಾರಾಯಣ ಭಟ್, ಗ್ರಾಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ವಿಮಲ, ನಾರಾಯಣ ನಾಯಕ್್, ಶುಭಕರ ರೈ ಪಡ್ಯಂಬೆಟ್ಟು, ಮೋಯಿದು ಕುಂಞಿ ಒಡ್ಯ ಉಪಸ್ಥಿತರಿರುವರು.

ಬೆಳಿಗ್ಗೆ 9.30 ಕ್ಕೆ ನಡೆಯುವ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಗಾಳಿಮುಖ ಖಲೀಲ್್ ಸಲಾಹ್ ವಿದ್ಯಾಸಂಸ್ಥೆಯ ಚೇರ್ಮ್ಯಾನ್ ಬಹು ಅಸ್ಸಯ್ಯದ್ ಹಸನ್ ಅಬ್ದುಲ್ಲ ಇಂಬಿಚಿ ಕೋಯ ತಂಙಳ್ ಆದೂರು, ನಿಡ್ಪಳ್ಳಿ ಹೋಲಿ ರೋಝರಿ ಇಗರ್ಜಿ ಧರ್ಮಗುರು ರೆ.ಫಾ.ಲೋಬೋ, ಕಾಟುಕುಕ್ಕೆ ಶ್ರೀ ರಾಮಕೃಷ್ಣ ಶ್ರೀ ಮದ್ವಾಧೀಶ ವಿಠಲದಾಸ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಚೇರ್ ಮ್ಯಾನ್್ ನಾರಾಯಣನ್ ದಿವ್ಯ ಉಪಸ್ಥಿತರಿರುವರು. ಸಮ್ಮೇಳನ ಅಧ್ಯಕ್ಷ ಪತ್ರಕರ್ತ, ಹಿರಿಯ ಸಾಹಿತಿ ಮಲಾರ್ ಜಯರಾಮ ರೈ ಸಮ್ಮೇಳದ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಎಸ್.ಜಿ.ಕೃಷ್ಣ ಸಮ್ಮೇಳನ ಉದ್ಘಾಟಿಸುವರು. ಶಾಸಕ ಸಂಜೀವ ಮಠಂದೂರು ಪುಸ್ತಕ ಬಿಡುಗಡೆ ಮಾಡುವರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಪುಸ್ತಕ ಮಳಿಗೆ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಕಲಾಪ್ರದರ್ಶನ ಮಳಿಗೆ ಉದ್ಘಾಟಿಸುವರು. ಮಂಗಳೂರು ಡಿಡಿಪಿಐ ಸುಧಾಕರ ಕೆ. ಚಿಗುರು ಹಸ್ತಪ್ರತಿ, ಉದ್ಯಮಿ ಅಶೋಕ್ ಕುಮಾರ್ ರೈ ಟ್ರಸ್ಟ್ ಲಾಂಛನ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಂಜೇಶ್ವರ ಶಾಸಕ ಎಂ.ಕೆ.ಅಶ್ರಫ್ ರಾಷ್ಟ್ರೀಯ  ಪ್ರಶಸ್ತಿ ವಿಜೇತರಿಗೆ ಗೌರವ ಪ್ರದಾನ ಮಾಡುವರು. ಬಳಿಕ ನಿಕಟೂರ್ವ ಸಮ್ಮೇಳನಾಧ್ಯಕ್ಷ ನಾರಾಯಣ ರೈ ಕುಕ್ಕುವಳ್ಳಿ ಅವರ ನುಡಿ, ಮುಖ್ಯ ಅತಿಥಿಗಳಾಗಿ ಅಕ್ಷಯ ಸಮೂಹ ಸಂಸ್ಥೆಗಳ ಸಂಚಾಲಕ ಜಯಂತ ನಡುಬೈಲು, ದಾವಣಗೆರೆ ನ್ಯಾಯವಾದಿ ಡಾ.ಎಸ್.ಹೆಚ್. ವಿನಯ್ ಕುಮಾರ್ ಸಾಹುಕಾರ್ ಸೇರಿದಂತೆ ವಿವಿಧ ರಾಜಕೀಯ, ಧಾರ್ಮಿಕ ಮುಖಂಡರು, ಉದ್ಯಮಿಗಳು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ಮಧ್ಯಾಹ್ನ 12 ಗಂಟೆಗೆ ಗಡಿನಾಡು ಹೊರನಾಡು ಕನ್ನಡಿಗ ಸವಾಲು, ಕನ್ನಡ ಭಾಷಾ ಅಲ್ಪಸಂಖ್ಯಾತರ ಮತ್ತು ಗಡಿನಾಡ ಜನತೆಯ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಕಲ್ಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳೂ ಸಾಹಿತಿಗಳೂ ಆದ ಡಾ.ಸದಾನಂದ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಅಬುಧಾಬಿಯ ಮಿತ್ರಂಪಾಡಿ ಜಯರಾಮ ರೈ ಉದ್ಘಾಟಿಸುವರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದ ಕಟ್ಟೆ, ಮಕ್ಕಳ ಸಾಹಿತಿ ರಘುನಾಥ ರೈ ನುಳಿಯಾಲು, ಶಿಕ್ಷಕ ಸೀತಾರಾಮ ಭಟ್ ಮುಖ್ಯ ಅತಿಥಿಗಳಾಗಿರುವರು ಮಧ್ಯಾಹ್ನ 2 ರಿಂದ ಬಹುಭಾಷಾ ಕವಿಗೋಷ್ಠಿ, 3.15 ರಿಂದ ಬಹಿರಂಗ ಅಧಿವೇಶನ ಮತ್ತು ಠರಾವು ಮಂಡನೆ ನಡೆಯಲಿದೆ. 3.45 ರಿಂದ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಥಮ ಗಡಿನಾಡ ಸಮ್ಮೇಳನಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಹಲವಾರು ಗಣ್ಯರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಖೃತಿಕ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕರಾವಳಿ ಪ್ರಾಧಿಕಾರ ಸಹಯೋಗ ನೀಡಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ಸ್ವಾಗತ ಸಮಿತಿ ಗೌರವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ಶ್ರೀ ಕೃಷ್ಣ ಭಟ್ ಬಟ್ಯಮೂಲೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top