ಬೆಳ್ತಂಗಡಿ : ಪಟ್ರಮೆ ಗ್ರಾಮವನ್ನು ಗ್ರಾಮ ವಿಕಾಸದ ಅಡಿಯಲ್ಲಿ ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ ಶೌಚಾಲಯ ನಿರ್ಮಿಸದ ಕಲ್ಲಾಪು ಮನೆ ಅಂಬೋಡಿ ಎಂಬವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಶೌಚಾಲು ನಿರ್ಮಿಸುವಂತೆ ಮನವೊಲಿಸಿತು.
ಇವರಿಗೆ ಗ್ರಾಮದ ಹಲವರು ಅನೇಕ ಸಲ ಶೌಚಾಲಯ ನಿರ್ಮಿಸುವಂತೆ ಮನವೊಲಿಸಿದರೂ ಶೌಚಾಲಯ ನಿರ್ಮಾಣದ ಕಾರ್ಯ ನಡೆದಿರಲಿಲ್ಲ. ಈ ನಿಟ್ಟಿನಲ್ಲಿ ಭೇಟಿ ಮಾಡಿದ ವಿದ್ಯಾಸಂಸ್ಥೆ ಮನವೊಲಿಸಿದ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು.
ಈ ಬಗ್ಗೆ ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ, ದೇರಾಜೆ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್, ಗ್ರಾಮ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ರೈ ಪರಾರ್ತಿಮಾರು, ಗ್ರಾಮ ವಿಕಾಸ ಸಮಿತಿ ಸದಸ್ಯೆ ಸುಗಂಧಿ, ಗ್ರಾಮ ವಿಕಾಸ ಕುರಿತು ಶಾಲೆಯಿಂದ ನಿಯೋಜಿತ ಶಿಕ್ಷಕಿ ಸ್ವಾತಿ ಕೆ.ವಿ. ಅಂಬೋಡಿಯವರ ಮನೆಗೆ ತೆರಳಿ ಶೌಚಾಲಯದ ಮಹತ್ವದ ಕುರಿತು ಅರಿವು ಮೂಡಿಸಿ. ಮನವೊಲಿಸಿ. ಶೌಚಾಲಯ ನಿರ್ಮಾಣ ಮಾಡಲು ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಕೈಗೊಂಡಿತು.
ಈ ಕುರಿತು ಪಂಚಾಯಿತಿ ಅನುದಾನ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಅವರಿಗೆ ಶ್ರೀರಾಮ ವಿದ್ಯಾಸಂಸ್ಥೆ ಗ್ರಾಮ ವಿಕಾಸ ಸಮಿತಿ ಮನವಿ ನೀಡಿದೆ.