ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಎಂಬಲ್ಲಿರುವ ಮೃತ್ಯುಂಜಯ ನದಿಯಲ್ಲಿ ಸ್ಥಳದಲ್ಲಿ ಭಾನುವಾರ ಮುಂಜಾನೆ 7 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಇಂದು ಮುಂಜಾನೆ ಪ್ರತ್ಯಕ್ಷವಾಗಿದೆ.
ಜನನಿಬಿಡ ಪ್ರದೇಶದ ಮೂಲಕವೇ ಬಳಿಕ ಸವಾರಿ ನಡೆಸಿ ಹೊಸಮಠ ಕಡೆಗೆ ತೆರಳಿದೆ. ಆದರೆ ಕೃಷಿ ಅಥವಾ ಇತರ ಯಾವುದೇ ಹಾನಿ ಮಾಡಿರುವುದಿಲ್ಲ.
ಚಾರ್ಮಾಡಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಪದೇ ಪದೇ ಕಾಡಾನೆಗಳ ದಾಳಿಯಾಗುತ್ತಲೆ ಇದ್ದು ಆ ಭಾಗದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಸರಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಆಗಮಿಸಿ ಪರಿಶೀಲನೆ ನಡೆಸಿದೆ.