ಕಡಬ : ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಸೋಮವಾರ ಮುಂಜಾನೆ ಆನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ನೈಲ ನಿವಾಸಿಗಳಾದ ರಂಜಿತಾ (21) ಹಾಗೂ ರಮೇಶ್ ರೈ(55) ಎಂದು ತಿಳಿದು ಬಂದಿದೆ.
ರಂಜಿತಾ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಮುಂಜಾನೆ ಕರ್ತವ್ಯಕ್ಕೆ ಮನೆಯಿಂದ ಹೋಗುತ್ತಿದ್ದಾಗ ಮೀನಾಡಿ ಸಮೀಪ ರಸ್ತೆಯಲ್ಲಿ ಆನೆಯೊಂದು ಹಠಾತ್ತನಎ ದಾಳಿ ನಡೆಸಿದೆ. ಈ ಸಂದರ್ಭ ಯುತಿಯ ಬೊಬ್ಬೆ ಹೊಡೆದದ್ದನ್ನು ಕೇಳಿ ಆಕೆಯ ನೆರೆಯವರಾದ ರಮೇಶ್ ರೈ ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲೇ ಯುತಿಯನ್ನು ಹೊಡೆದುರುಳಿಸಿದೆ. ರಮೇಶ್ ರೈ ಅವರನ್ನು ಕಂಡ ಆನೆ ಯುವತಿಯನ್ನು ಬಿಟ್ಟು ರಮೇಶ್ ರೈ ಮೇಲೆ ಅಟ್ಯಾಕ್ ಮಾಡಿದೆ. ಬಳಿಕ ಆನೆ ಸ್ಥಳದಿಂದ ಓಡಿ ಹೋಗಿದೆ. ರಮೇಶ್ ರೈ ಸ್ಥಳದಲ್ಲೇ ಮೃತಪಟ್ಟರೆ. ಗಾಯಾಳು ರಂಜಿತಾ ನೆಲ್ಯಾಡಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸಚಿವರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಶವ ತೆಗೆಯಲು ಬಿಡುವುದಿಲ್ಲ :
ಆನೆ ದಾಳಿಗೆ ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಹಾಗೂ ಸಮಸ್ಯೆ ಕುರಿತು ಮಾಡಿದ ವೀಡಿಯೋವನ್ನು ವ್ಯಕ್ತಿಯೋರ್ವರು ಡಿಲೀಟ್ ಮಾಡಿದ ಹಿನ್ನಲೆಯಲ್ಲಿ ಮಾತಿನ ಚಕಮಕಿ ನಡೆದು ಸ್ವಲ್ಪ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿಗಳು ಬಾರದೆ ಶವ ಸಂಸ್ಕಾರಕ್ಕೆ ಅವಖಾಶ ನೀಡವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದು,ಇಲಾಖಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.