ಆಯುಷ್ಮಾನ್‌ ವಯ ವಂದನಾ : ಹಿರಿಯರಿಗೆ ವರದಾನ

70 ವರ್ಷ ಮೇಲ್ಪಟ್ಟವರಿಗೆ ಉಚಿತ ವೈದ್ಯಕೀಯ ಶುಶ್ರೂಷೆ ಸೌಲಭ್ಯ

ಬೆಂಗಳೂರು: 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಪ್ರಧಾನಿ ನರೇಂದ್ರ ಕಳೆದ ವಾರ ಚಾಲನೆ ನೀಡಿದರು. ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಈಗ 70 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 5 ಲಕ್ಷ ರೂ. ವರೆಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ. ಇಳೀವಯಸ್ಸಿನವರಿಗೆ ಕೇಂದ್ರ ಸರಕಾರದ ಈ ಯೋಜನೆ ವರದಾನವೇ ಆಗಿದೆ. 70ರ ವಯಸ್ಸಿನಲ್ಲಿ ಕಾಯಿಲೆಗಳು ಕಾಡುವುದು ಸಾಮಾನ್ಯ ವಿಚಾರ. ಅನೇಕ ವೃದ್ಧರು ಈ ವಯಸ್ಸಿನಲ್ಲಿ ಸಮರ್ಪಕವಾದ ಶುಶ್ರೂಷೆ ಪಡೆದುಕೊಳ್ಳಲು ಆರ್ಥಿಕ ಸಂಪನ್ಮೂಲದ ಬಲವಿಲ್ಲದೆ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆರ್ಥಿಕ ಸ್ಥಿತಿಗತಿಯ ಮಾನದಂಡವಿಲ್ಲದೆ ಎಲ್ಲರಿಗೂ ಅನ್ವಯವಾಗುವಂತೆ ಆಯುಷ್ಮಾನ್‌ ವಯ ವಂದನಾ ಯೋಜನೆಯನ್ನು ಜಾರಿಗೊಳಿಸಿದೆ.

ಏನೆಲ್ಲಾ ಸೌಲಭ್ಯ?





































 
 

ಉಚಿತ ಆಸ್ಪತ್ರೆ ಚಿಕಿತ್ಸೆ: ಆಯುಷ್ಮಾನ್ ವಯ ವಂದನಾ ಕಾರ್ಡ್ 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು ರಹಿತ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಮೂಲಕ ಹಣಕಾಸಿನ ಸಮಸ್ಯೆಯಿಲ್ಲದಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಿದೆ.
ಆದಾಯದ ಮಿತಿಯಿಲ್ಲದೆ 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಈ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಇದು ಕಡಿಮೆ, ಮಧ್ಯಮ ಅಥವಾ ಉನ್ನತ ಆದಾಯದ ಹಿನ್ನೆಲೆಯ ಎಲ್ಲರಿಗೂ ಮುಕ್ತವಾಗಿದೆ.

ಕುಟುಂಬ ಅವಲಂಬಿತರಿಗೆ ಯೋಜನೆ ಪ್ರಯೋಜನ: ಒಂದೇ ಮನೆಯಲ್ಲಿ ವಯಸ್ಸಾದ ಅನೇಕ ಮಂದಿ ವಾಸಿಸುವ ಸಂದರ್ಭಗಳಲ್ಲಿ ರೂ. 5 ಲಕ್ಷ ಮಿತಿಯೊಳಗೆ ಎಲ್ಲ ಅರ್ಹ ಸದಸ್ಯರು ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು.

ವಿಮಾ ಯೋಜನೆ ಕವರೇಜ್: ಆಯುಷ್ಮಾನ್ ಭಾರತ್ ಯೋಜನೆ ಸುಮಾರು 1,929 ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಳ್ಳುತ್ತದೆ. ಮಿತಿ ಇಲ್ಲದ ಔಷಧಗಳು, ವೈದ್ಯರ ಶುಲ್ಕ, ಆಸ್ಪತ್ರೆ ಪೂರ್ವ ಮತ್ತು ನಂತರದ ರೋಗನಿರ್ಣಯ ಮತ್ತು ಔಷಧಿಗಳು ಇತ್ಯಾದಿ ಎಲ್ಲ ಚಿಕಿತ್ಸೆಯ ಶುಲ್ಕವನ್ನು ಒಳಗೊಂಡಿರುತ್ತದೆ. ಇದು ಹಿರಿಯರು ತಮ್ಮ ಚಿಕಿತ್ಸಾ ಸಮಯದಲ್ಲಿ ಸಂಪೂರ್ಣ ಮತ್ತು ತಡೆರಹಿತ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ, ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಂತಹ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿರುವ ಹಿರಿಯ ನಾಗರಿಕರು ವಯ ವಂದನಾ ಯೋಜನೆಗೆ ಶಿಫ್ಟ್‌ ಆಗುವ ಆಯ್ಕೆಯನ್ನು ಹೊಂದಿದ್ದಾರೆ.

ನೋಂದಾಯಿಸುವುದು ಹೇಗೆ? : ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಆಯುಷ್ಮಾನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಾನುಭವಿಯಾಗಿ ಲಾಗಿನ್ ಆದಾಗ captcha Enter ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, ದೃಢೀಕರಣ ಮಾಡಬೇಕು. ತದನಂತರ enroll senior citizens ಕ್ಲಿಕ್ ಮಾಡಬೇಕು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಹೊಸದಾಗಿ ನೋಂದಾಯಿಸಲು ಆಧಾರ್ ಅಸ್ತಿತ್ವದಲ್ಲಿದ್ದೇಯೆ ಎಂಬುದನ್ನು ಯಾರಾದರೂ ಪರೀಕ್ಷಿಸಿಕೊಳ್ಳಬಹುದು. e-KYC ಮಾಡಬೇಕು. ಪರಿಶೀಲನೆಗಾಗಿ ಮೊಬೈಲ್ ನಂಬರ್ ಮತ್ತು ಆಧಾರ್ OTP ಎಂಟರ್ ಮಾಡಬೇಕು. ಆಯುಷ್ಮಾನ್ ವಯ ವಂದನಾ ಕಾರ್ಡ್ ಡೌನ್ ಲೋಡ್ ಆದ ನಂತರ ಫೋಟೋ ಅಂಟಿಸಿ ಎಲ್ಲ ಹೆಚ್ಚುವರಿ ಮಾಹಿತಿ ಭರ್ತಿ ಮಾಡಬೇಕು. 70 ವರ್ಷಕ್ಕೂ ಮೇಲ್ಪಟ್ಟ ಕುಟುಂಬ ಸದಸ್ಯರ ಹೆಸರನ್ನು ಸೇರಿಸಬೇಕು.

ನಿರ್ಬಂಧಿತ ಆಸ್ಪತ್ರೆ ನೆಟ್‌ವರ್ಕ್: ವಯ ವಂದನಾ ಕಾರ್ಡ್‌ನೊಂದಿಗಿನ ಚಿಕಿತ್ಸೆಯು ಎಂಪನೆಲ್ಡ್ ಆಸ್ಪತ್ರೆಗಳಿಗೆ ಸೀಮಿತವಾಗಿದೆ. ಇದು ವೈಯಕ್ತಿಕ ಆರೋಗ್ಯ ವಿಮಾ ಯೋಜನೆಗಳಲ್ಲಿರುವಂತೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಒದಗಿಸುವುದಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top