ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್ ಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್‌ಮೆಂಟ್ ಐಟಿ ಫೆಸ್ಟ್ ವಿಶನ್ 24ನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಮ್ಮ ವರ್ತನೆಗೆ ಆಂತರಿಕ ತುಮುಲವೇ ಕಾರಣ. ಆದ್ದರಿಂದ ಮನಸ್ಸನು ಆದಷ್ಟು ಶುದ್ಧವಾಗಿರಿಸಿಕೊಳ್ಳಬೇಕು. ನಾವು ಸಮಾಜಕ್ಕೆ ನೀಡುವ ಕೊಡುಗೆಗಳಿಂದಲೇ ಜನರು ನಮ್ಮನ್ನು ನೆನಪಿಸುತ್ತಾರೆ. ಆದುದರಿಂದ ಉತ್ತಮ ಚಿಂತನೆಗಳನ್ನೇ ಮಡಬೇಕು ಎಂದರು.
ಕಾಲೇಜಿನ ಪರೀಕ್ಷಾಂಗ ಕುಲಸಚಿ, ಗಣಕ ವಿಜ್ಞಾನ ವಿಭಾಗದ ಡೀನ್ ಪ್ರೊ| ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಚೈತ್ರಾ ಎನ್.ಪಿ. ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ವಾರಿಜಾ ಎಂ. ಕಾರ್ಯಕ್ರಮ ನಿರೂಪಿಸಿದರು. ಪಿನ್ಯಾಕಲ್ ಐಟಿ ಕ್ಲಬ್ ನ ಸಂಯೋಜಕಿ ಗೀತಾ ಪೂರ್ಣಿಮಾ ಕೆ ಹಾಗೂ ಪಿನ್ಯಾಕಲ್ ಐಟಿ ಕ್ಲಬ್ ನ ಅಧ್ಯಕ್ಷ ಲೆನಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶನ್ 2024ರಲ್ಲಿ ಡಾಕ್ಯುಮೆಂಟರಿ, ಪೇಪರ್ ಪ್ರೆಸೆಂಟೇಶನ್, ಕೊಲ್ಯಾಜ್ ಮೇಕಿಂಗ್, ಐಡಿಯೇಶನ್, ಕೋಡ್ ವಾರ್, ಹ್ಯಾಕಥಾನ್, ವೆಬ್ ಸೈಟ್ ಡಿಜೈನ್, ಫೋಟೋಗ್ರಫಿ, ಐಟಿ ಕ್ವಿಜ್, ಐಒಟಿ ಮೋಡೆಲ್ ಡಿಸೈನ್, ಬ್ರೇಕ್ ದ ಕ್ವೆರಿ, ಐಟಿ ಮ್ಯಾನೇಜರ್, ಗ್ರೂಪ್ ಡ್ಯಾನ್ಸ್, ಫ್ಯಾಶನ್ ಶೋ, ಇ-ಗೇಮ್ಸ್ ಎಂಬ 15 ಸ್ಪರ್ಧೆಗಳನ್ನು ಒಳಗೊಂಡಿದೆ. ಕೋಡ್ ವಾರ್, ವೆಬ್ ಸೈಟ್ ಡಿಸೈನ್, ಪೇಪರ್ ಪ್ರೆಸೆಂಟೇಶನ್, ಫೊಟೋಗ್ರಫಿ, ಐಟಿ ಮ್ಯಾನೇಜರ್ ಮುಂತಾದ ಸ್ಪರ್ಧೆಗಳು ಓರ್ವ ಸ್ಪರ್ಧಾಳುವನ್ನೊಳಗೊಂಡಿದ್ದರೆ ಇತರ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಳು ತಂಡವಾಗಿ ಭಾಗವಹಿಸಲಿದ್ದಾರೆ.