ಗುರುಪ್ರಸಾದ್‌ ಮೊಬೈಲ್‌, ಲ್ಯಾಪ್‌ಟಾಪ್‌ ಎಫ್‌ಎಸ್‌ಎಲ್‌‌ ಪರೀಕ್ಷೆಗೆ ರವಾನೆ

ಸಾವಿನ ನಿಜವಾದ ಕಾರಣ ಇನ್ನೂ ನಿಗೂಢ

ಬೆಂಗಳೂರು: ನಿರ್ದೇಶಕ, ನಟ ಗುರುಪ್ರಸಾದ್ ಆತ್ಮಹತ್ಯೆಯ ಕಾರಣ ನಿಗೂಢವಾಗಿರುವುದ ಹಿನ್ನೆಲೆಯಲ್ಲಿ ಪೊಲೀಸರು ಅವರ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಟ್ಯಾಬ್‌ ಇತ್ಯಾದಿಗಳನ್ನಜು ವಿಧಿವಿಜ್ಞಾನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ ಲ್ಯಾಬ್‌ಗೆ ರವಾನಿಸಿದ್ದಾರೆ.
ಭಾನುವಾರ ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ 72 ತಾಸಿಗೂ ಅಧಿಕ ಸಮಯ ಕಳೆದ ಬಳಿಕ ಮೃತದೇಹ ಸಿಕ್ಕಿದೆ. ಆದರೆ ಆತ್ಮಹತ್ಯೆಐ ಅಸಲಿ ಕಾರಣ ಇನ್ನೂ ನಿಗೂಢವಾಗಿ ಇರುವುದರ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಸುಳಿವು ಹುಡುಕುತ್ತಿದ್ದಾರೆ.
ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡ ಫ್ಲಾಟ್‌ನಲ್ಲಿ ಡೆತ್‌ನೋಟ್‌ ಸಿಕ್ಕಿಲ್ಲ. 4 ಮೊಬೈಲ್, ಎರಡು ಟ್ಯಾಬ್, ಒಂದು ಲ್ಯಾಪ್‌ಟಾಪ್ ಪತ್ತೆಯಾಗಿದೆ. ನಾಲ್ಕು ದಿನಗಳಿಂದ ಚಾರ್ಜ್‌ ಮಾಡದ ಹಿನ್ನೆಲೆ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ. ಈ ಮೊಬೈಲ್‌, ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಒಂದು ವೇಳೆ ಸಾಯುವ ಮುನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದರೆ ಸಾವಿನ ಕಾರಣ ತಿಳಿಯುವ ಸಾಧ್ಯತೆಯಿದೆ. ಸದ್ಯಕ್ಕೆ ಸಾಲದ ಸುಳಿಗೆ ಸಿಲುಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಪತ್ನಿಯ ಹೇಳಿಕೆಯನ್ನೇ ಸಾವಿನ ಕಾರಣವೆಂದು ಪರಿಗಣಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಮಾಡಿಕೊಂಡ ಸಾವು ಸಂಭವಿಸಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನೇಣುಹಾಕಿಕೊಂಡ ಪರಿಣಾಮ ಉಸಿರುಕಟ್ಟಿ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಪ್ರತಿಭಾವಂತ ನಿರ್ದೇಶಕರಾಗಿದ್ದ ಗುರುಪ್ರಸಾದ್ ಇತ್ತೀಚೆಗೆ ನಿರ್ದೇಶಿಸಿದ್ದ ರಂಗನಾಯಕ ಹೀನಾಯ ಸೋಲು ಕಂಡಿತ್ತು. ಇದರಿಂದ ಗುರುಪ್ರಸಾದ್ ಸಾಲದ ಸುಳಿಗೆ ಸಿಲುಕಿದ್ದರು. ಅವರ ವಿರುದ್ಧ ಚೆಕ್‌ಬೌನ್ಸ್ ಕೇಸ್ ಕೂಡ ದಾಖಲಾಗಿತ್ತು. ವಿಪರೀತ ಕುಡಿತದ ಚಟ ಇತ್ತು. ಜೊತೆಗೆ ಅವರ ಆರೋಗ್ಯ ಕೂಡ ಕೈಕೊಟ್ಟಿತ್ತು. ಇದರ ನಡುವೆಯೂ ಗುರುಪ್ರಸಾದ್ ೆರಡನೇ ಮದ್ವೆ ಮಾಡಿಕೊಂಡಿದ್ದರು. ಈ ಎಲ್ಲವನ್ನೂ ಸಂಭಾಳಿಸಲಾಗದೆ ಖಿನ್ನತೆಗೆ ಒಳಗಾಗಿ ಅಕ್ಟೋಬರ್ 28ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. 4-5 ದಿನಗಳ ಹಿಂದೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊರಜಗತ್ತಿಗೆ ಗುರುಪ್ರಸಾದ್ ಶವ ಕೊಳೆತು ಹೋಗಿತ್ತು. ತವರು ಮನೆಯಲ್ಲಿದ್ದ ಎರಡನೇ ಪತ್ನಿಯನ್ನು ಕರೆಯಿಸಿ ಪೊಲೀಸರು, ಅವರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರ ಸಮಕ್ಷಮದಲ್ಲಿ ಸಂಜೆಯೇ ವಿಲ್ಸನ್‌ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ನಟ ಧನಂಜಯ್, ದುನಿಯಾ ವಿಜಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದ್ದರು.

1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006ರಲ್ಲಿ ತೆರೆಕಂಡ `ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರವಾಗಿತ್ತು.



































 
 

2009ರಲ್ಲಿ ಇದೇ ಜೋಡಿ ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಾಮಾಜಿಕ ಕಳಕಳಿಯ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರಡೈರೆಕ್ಟರ್ ಸ್ಪೆಷಲ್’,ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿಮಠ’, ಎದ್ದೇಳು ಮಂಜುನಾಥ’,ಮೈಲಾರಿ’, ಹುಡುಗರು’,ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್ ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top