ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್‌ಐಟಿ ಕ್ಲಬ್‌ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಐಒಟಿ ಮಾದರಿಗಳ ಪ್ರದರ್ಶನವನ್ನು ಬುಧವಾರ ಆಯೋಜಿಸಲಾಯಿತು.
ಕಾಲೇಜಿನ ಪ್ರಿನ್ಸಿಪಾಲ್ ವಂ.ಡಾ. ಆ್ಯಂಟನಿ ಪ್ರಕಾಶ್‌ಮೊಂತೇರೊ ಅಧ್ಯಕ್ಷತೆ ವಹಿಸಿ, ಸಾಧಿಸುವ ಛಲ ಹಾಗೂ ಒಳ್ಳೆಯ ಮನಸ್ಸಿದ್ದಲ್ಲಿ ಯಾವುದೇ ಕಾರ್ಯವೂ ಕಷ್ಟವೆಂದೆನಿಸುವುದಿಲ್ಲ. ಯಾವುದೇ ಪರಿಸ್ಥಿತಿಯ ಬಗ್ಗೆ ದೂರು ನೀಡಬೇಡಿ ಬದಲಿಗೆ ಪೂರಕವಾಗಿ ಯೋಚನೆ ಮಾಡಲು ಪ್ರಾರಂಭಿಸಿ. ಐಒಟಿ ಮಾದರಿಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಪ್ರಶಂಶಿಸಿದರು.
ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹದಿನೈದಕ್ಕೂ ಹೆಚ್ಚಿನ ಮಾದರಿಗಳನ್ನು ತಯಾರಿಸಿದ್ದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ, ಪರೀಕ್ಷಾಂಗ ಉಪಕುಲ ಸಚಿವ ಅಭಿಷೇಕ್‌ಸುವರ್ಣ, ಸಹಾಯಕ ಪ್ರಾಧ್ಯಾಪಕಿ ಪೂಜಾಶ್ರೀ ವಿ. ರೈ ತೀರ್ಪಗಾರರಾಗಿ ಭಾಗವಹಿಸಿದರು. ವಿದ್ಯಾರ್ಥಿಗಳು ತಮ್ಮ ಮಾದರಿಗಳಲ್ಲಿರುವ ನಾವೀನ್ಯತೆ ಹಾಗೂ ತಾಂತ್ರಿಕತೆ ಮತ್ತು ಅವುಗಳಿಂದ ಸಮಾಜಕ್ಕೆ ಆಗುವ ಉಪಯೋಗಗಳ ಬಗ್ಗೆ ಭೇಟಿನೀಡಿದ ಪ್ರತಿಯೋರ್ವರಿಗೂ ವಿವರಣೆ ನೀಡಿದರು.
ಅನುಷಾ ಭಾರ್ಗವಿ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಗಣಕವಿಜ್ಞಾನ ವಿಭಾಗದ ಡೀನ್‌ಪ್ರೊ.ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿನ್ಯಾಕಲ್‌ಐಟಿ ಕ್ಲಬ್‌ಸಂಯೋಜಕಿ ಗೀತಾ ಪೂರ್ಣಿಮಾ ಕೆ. ವಂದಿಸಿದರು.