ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಡಿ.6,7 ರಂದು ನಡೆಯಲಿರುವ ಷಷ್ಠಿ ಮಹೋತ್ಸವದ ಸಮಾಲೋಚನಾ ಸಭೆ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ವಹಿಸಿ ಮಾತನಾಡಿ, ದೇವಳದಲ್ಲಿ ಷಷ್ಠಿ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಊರ ಪರವೂರ ಭಕ್ತರ ಸಹಕಾರದಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಿದ್ದು, ಡಿ. 6ರ ಪಂಚಮಿ ದಿವಸ ಸುಬ್ರಹ್ಮಣ್ಯ ಶ್ರೀ ಅವರಿಂದ ಆಶೀರ್ವಚನ ನಡೆಯಲಿದೆ. ಡಿ. 7ರಂದು ಷಷ್ಠಿ ಉತ್ಸವ ನಡೆಯಲಿದ್ದು, ಷಷ್ಠಿ ವೃತಾಚರಣೆಯಲ್ಲಿ ಭಾಗವಹಿಸುವ ಭಕ್ತರಿಗೆ ಕೆಳಗೆ ಕುಳಿತುಕೊಂಡು ಎಲೆಯಲ್ಲಿ ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು. ಷಷ್ಠಿ ಉತ್ಸವ ದಿವಸ ಮದ್ಯಾಹ್ನ ಸುಮಾರು 5 ಸಾವಿರ ಮಂದಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಮಾಜಿ ಅಧ್ಯಕ್ಷರು, ಆಡಳಿತ ಸಮಿತಿ ಸದಸ್ಯ ಸವಣೂರು ಕೆ.ಸೀತಾರಾಮ ರೈ, ಅನುವಂಶೀಯ ಮೊತ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ ಪಟ್ಟೆತ್ತಾನ, ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಜತೆ ಕಾರ್ಯದರ್ಶಿ ಪದ್ಮನಾಭ ದೋಳ, ಪ್ರಧಾನ ಅರ್ಚಕ ರಮಾನಂದ ಭಟ್ ತೋಟಂತಿಲ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬರೆಪ್ಪಾಡಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆರೆನಾರು, ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ನೂಜಿ, ನಿಟ್ಟೋನಿ ಕೆಡೆಂಜಿ, ಜತ್ತಪ್ಪ ರೈ ಬರೆಪ್ಪಾಡಿ, ಐತ್ತಪ್ಪ ಗೌಡ ಕುವೆತ್ತೋಡಿ, ಉತ್ಸವ ಸಮಿತಿ ಜತೆ ಕಾರ್ಯದರ್ಶಿ ಯೋಗೀಶ್ ಕೆಡೆಂಜಿ, ಮೇದಪ್ಪ ಗೌಡ ಕುವೆತ್ತೋಡಿ, ದಾಮೋದರ ನಾಕಿರಣ, ಜಯಾನಂದ ಕೆಡೆಂಜಿ, ಭರತ್ ಕುಮಾರ್ ನಡುಮನೆ, ಯತೀಶ್ ನಡುಮನೆ, ಚಂದ್ರ ಗೌಡ ನೆಕ್ಕಿತ್ತಡಿ, ನಾಗೇಶ್ ಕೆ ಕೆಡೆಂಜಿ, ಬಾಲಚಂದ್ರ ನೂಜಿ, ಪುಷ್ಪಲತಾ ಬರೆಪ್ಪಾಡಿ, ಪುನೀತ್ ಹೊಸೋಕು, ವಿಠಲ ಗೌಡ, ಲೋಹಿತಾಕ್ಷ ಕೆಡೆಂಜಿಕಟ್ಟ, ಲೋಕೇಶ್, ಮಹೇಶ್ ನೂಜಿ, ಯೋಗೀಶ್ ಬರೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.