ಕಾಂಗ್ರೆಸ್‌ನಿಂದಾಗಿ ವಕ್ಫ್‌ಗೆ ವಿಶೇಷ ಅಧಿಕಾರ ಎಂದು ಆರೋಪ
ಬೆಂಗಳೂರು: ರೈತರ ಕೃಷಿ ಜಮೀನು ಕಿತ್ತುಕೊಳ್ಳುತ್ತಿರುವ ವಕ್ಫ್ ಮಂಡಳಿಯನ್ನು ನಿಷೇಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ವಕ್ಫ್ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರೈತರಿಗೆ ನೋಟಿಸ್ ನೀಡಿದೆ. ಈ ಮಂಡಳಿಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ.
ಕಳೆದ 70 ವರ್ಷಗಳಿಂದ ವಕ್ಫ್ ಬೋರ್ಡ್‌ಗೆ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ವಕ್ಫ್ ಬೋರ್ಡ್ 16,000 ಎಕರೆಯಲ್ಲಿ ಮಾಲೀಕತ್ವ ಪಡೆದಿರುವ ರೈತರಿಗೆ ನೋಟಿಸ್ ನೀಡಿದೆ. ಈ ನೋಟಿಸ್ ವಿರೋಧಿಸಿ ದಲಿತರು, ರೈತರು ಮತ್ತು ಕೆಲವು ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ವಕ್ಫ್ ಕುರಿತು ಸಂಸತ್ತಿನ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ವಕ್ಫ್ ಮಂಡಳಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.