ಜಗದಗಲ ಇವೆ ಅಚ್ಚರಿಯ ಸಂಗತಿಗಳು!

ನಂಬಲು ಕಷ್ಟವಾದರೂ ನಂಬಲೇ ಬೇಕು

ನಾವು ಕಣ್ಣು ತೆರೆದು ನೋಡಿದರೆ ಜಗತ್ತಿನಲ್ಲಿ ನಮ್ಮ ಊಹೆಗೂ ಮೀರಿದ ಸಂಗತಿಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡೋಣ.

1) ಜಗತ್ತಿನ ಅತಿ ಸಣ್ಣ ದೇಶ ಅಂದರೆ ವ್ಯಾಟಿಕನ್. ಅದರ ಜನಸಂಖ್ಯೆ ಕೇವಲ 453. ಅದರ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿಬರಲು 30 ನಿಮಿಷ ಸಾಕು.







































 
 

2) ವ್ಯಾಟಿಕನ್ ದೇಶದಲ್ಲಿ ಆದಾಯ ತೆರಿಗೆ ಇಲ್ಲ. ಅಲ್ಲಿ ಬಸ್ಸು, ರೈಲು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಇಲ್ಲವೇ ಇಲ್ಲ.

3) ವ್ಯಾಟಿಕನ್ ದೇಶದಲ್ಲಿ ನೀರು, ಆಹಾರ, ವಿದ್ಯುಚ್ಛಕ್ತಿ ಯಾವುದೂ ಉತ್ಪಾದನೆ ಆಗುವುದಿಲ್ಲ. ಅವರು ಎಲ್ಲವನ್ನೂ ಹೊರಗಿನಿಂದ ಆಮದು ಮಾಡುತ್ತಾರೆ.

4) ಚೀನ, ಜಪಾನ್ ದೇಶಗಳ ಹೋಟೆಲ್‌ಗಳಲ್ಲಿ ಸಪ್ಲಾಯರ್‌ಗಳಿಗೆ ಟಿಪ್ ಕೊಡುವುದನ್ನು ನಿಷೇಧಿಸಲಾಗಿದೆ.

5) ಜಗತ್ತಿನಲ್ಲಿ ಮೊದಲು ಬಳಕೆಯಾದ ಲೋಹ ತಾಮ್ರ. ಅದನ್ನು ಹತ್ತು ಸಾವಿರ ವರ್ಷಗಳಿಂದ ಮನುಷ್ಯ ಬಳಕೆ ಮಾಡುತ್ತಿದ್ದಾನೆ.

6) ಜಗತ್ತಿನ ಅತ್ಯಂತ ದುಬಾರಿಯಾದ ವಜ್ರ ಕೊಹಿನೂರ್. ಅದು ಭಾರತದಲ್ಲಿ ಇತ್ತು. ಅದರ ಈಗಿನ ಬೆಲೆ 20
ಬಿಲಿಯನ್ ಅಮೆರಿಕನ್ ಡಾಲರ್‌. ಅಂದರೆ ಭಾರತದ ಕರೆನ್ಸಿಯಲ್ಲಿ 1.64 ಲಕ್ಷ ಕೋಟಿ ರೂಪಾಯಿ. ಅದು ಎಷ್ಟೋ ದೇಶಗಳ ಜಿಡಿಪಿಗಿಂತ ಹೆಚ್ಚು. ಬ್ರಿಟಿಷರು ಭಾರತದಿಂದ ಲೂಟಿ ಹೊಡೆದ ಅನರ್ಘ್ಯ ವಸ್ತುಗಳಲ್ಲಿ ಕೊಹಿನೂರ್ ಕೂಡ ಒಂದು.

7) ಜಗತ್ತಿನ ಅತ್ಯಂತ ಹೆಚ್ಚು ಜನನಿಬಿಢ ವಿಮಾನ ನಿಲ್ದಾಣ ಎಂದರೆ ಜಾರ್ಜಿಯಾ ಅಟ್ಲಾಂಟ ನಿಲ್ದಾಣ. ಅದು ಅಮೆರಿಕದಲ್ಲಿ ಇದೆ. ಅಲ್ಲಿ 2023ರ ಒಂದೇ ವರ್ಷದಲ್ಲಿ 104.7 ಮಿಲಿಯನ್ ಪ್ರಯಾಣಿಕರು ಹಾದುಹೋಗಿದ್ದರು.

8) ಜಗತ್ತಿನ ಅತಿ ದೊಡ್ಡ ಖಾಸಗಿ ವಿಮಾನ ಹಾರಾಟ ಕಂಪೆನಿ ಅಂದರೆ ಇಂಡಿಗೋ. ಅದು ಭಾರತದ್ದು ಎನ್ನುವ ಹೆಮ್ಮೆ ನಮ್ಮದು. ಇಂಡಿಗೋದಲ್ಲಿ 360+ ವಿಮಾನಗಳು ಇದ್ದು 2000 ದೈನಂದಿನ ವಿಮಾನ ಹಾರಾಟಗಳು ಇವೆ. 122 ದೇಶ ಮತ್ತು ವಿದೇಶಗಳ ಡೆಸ್ಟಿನೇಶನ್ ಇವೆ. 2023ರ ಒಂದೇ ವರ್ಷದಲ್ಲಿ 100 ಮಿಲಿಯನ್ ಪ್ರಯಾಣಿಕರು ಹಾರಾಟ ನಡೆಸಿದ್ದು ವಿಶ್ವದಾಖಲೆ.

9) ಕುಡಿಯುವ ನೀರಿನ ಬಾಟಲಿಗೆ ನಾವು ಸುರಿಯುವ ದುಡ್ಡಿನಲ್ಲಿ ಶೇ.90ರಷ್ಟು ದುಡ್ಡು ಪ್ಲಾಸ್ಟಿಕ್ ಬಾಟಲಿಯ ಖರ್ಚಿಗೆ ಹೋಗುತ್ತದೆ.

10) ಇಂಡಿಯಾ ಹೆಸರಿನ ಅನೇಕ ನಗರಗಳು ಪ್ರಪಂಚದಲ್ಲಿ ಇವೆ. ಅಮೆರಿಕ ದೇಶ ಒಂದರಲ್ಲಿ 4 ಇಂಡಿಯಾ ನಗರಗಳು ಇವೆ.

11) ಅಮೆರಿಕದ ಶಿಕಾಗೊದಲ್ಲಿ ಅತ್ಯಂತ ಎತ್ತರವಾದ ವಿಲ್ಲಿಸ್ ಟವರ್ ಇದೆ. ಅದರ ಮೇಲೆ ನಿಂತರೆ ಶಿಕಾಗೊ ಮಾತ್ರವಲ್ಲ ಇನ್ನೂ 4 ನಗರಗಳು ಕಾಣುತ್ತವೆ. ಯಾಕಂದರೆ ಅದರ ಎತ್ತರ 1451 ಅಡಿ ಇದೆ.

12) ವಿಮಾನಗಳು ಆಕಾಶದಲ್ಲಿ ಯಾವಾಗಲೂ ಹಿಂದಕ್ಕೆ ಚಲಿಸುವ ಸೌಲಭ್ಯ ಹೊಂದಿಲ್ಲ. ಆದರೆ ಅದು ರಿವರ್ಸ್ ಗೇರ್ ಹೊಂದಿದೆ. ಅದು ಭೂಮಿಯಲ್ಲಿ ರಿವರ್ಸ್ ಪ್ರಯಾಣ ಮಾಡಲು ಉಪಯುಕ್ತವಾಗಿದೆ.

13) ಹಾಂಕಾಂಗ್‌ ದೇಶದ ಪ್ರಜೆಗಳು ಪ್ರತಿದಿನ 7000 ಹೆಜ್ಜೆ ಇಡುವುದು ದಾಖಲೆ. ಬೇರೆ ಯಾವ ರಾಷ್ಟ್ರದ ಜನರು ಅಷ್ಟು ನಡೆಯುವುದಿಲ್ಲ.

14) ಆಸ್ಟ್ರೇಲಿಯದಲ್ಲಿ ಯಾವುದೇ ವಾಹನದಿಂದ ಕೈ ಹೊರಹಾಕಿ ಟಾಟಾ ಹೇಳುವುದು ಶಿಕ್ಷಾರ್ಹ ಅಪರಾಧ.

15) ಉತ್ತರ ಕೊರಿಯಾದಲ್ಲಿ ನೀಲಿ ಬಣ್ಣದ ಜೀನ್ಸ್ ಧರಿಸುವುದು ನಿಷೇಧ. 1990ರಿಂದ ಈ ಬಗ್ಗೆ ಬಿಗಿಯಾದ ಕಾನೂನು ಅಲ್ಲಿ ಜಾರಿಯಲ್ಲಿದೆ.

16) ಜಪಾನ್ ದೇಶದಲ್ಲಿ ಅಲ್ಲಿನ ರೋಬೋಟ್‌ಗಳು ಕೇಂದ್ರ ಸರಕಾರಕ್ಕೆ ತೆರಿಗೆ ಕಟ್ಟುತ್ತವೆ.

17) ಫ್ರೆಂಚ್ ಜನರು ವರ್ಷಕ್ಕೆ ಸರಾಸರಿ 500 ಬಸವನ ಹುಳು (SNAILS) ತಿನ್ನುತ್ತಾರೆ.

18) ರೋಮ್ ನಗರದಲ್ಲಿ ಪ್ರತಿಮೆಗಳನ್ನು ನಿರ್ಮಿಸುವಾಗ ಅವುಗಳ ತಲೆ ಕಳಚುವ ರೀತಿ ವ್ಯವಸ್ಥೆ ಮಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ಪ್ರತಿಮೆಗಳ ತಲೆಯನ್ನು ನಿಯತಕಾಲಿಕವಾಗಿ ಬದಲಾಯಿಸುವ ವ್ಯವಸ್ಥೆ ಅಲ್ಲಿದೆ.

19) ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಅಂದರೆ 17ನೇ ಶತಮಾನದವರೆಗೂ ಭಾರತ ಜಗತ್ತಿನ ಅತ್ಯಂತ ಶ್ರೀಮಂತವಾದ ರಾಷ್ಟ್ರವಾಗಿತ್ತು.

20) ನ್ಯೂಜಿಲ್ಯಾಂಡ್ ಮತ್ತು ಅಯರ್ಲ್ಯಾಂಡ್ ದೇಶಗಳಲ್ಲಿ ಒಂದೇ ಒಂದು ಹಾವು ಇಲ್ಲ.

21) ಇಂಗ್ಲಂಡ್ ಪಾರ್ಲಿಮೆಂಟಿನಲ್ಲಿ ಸ್ಪೀಕರ್ ಎಲ್ಲರ ವಾದಗಳನ್ನು ಆಲಿಸುತ್ತಾರೆ. ಆದರೆ ಅವರಿಗೆ ಮಾತಾಡುವ ಅಧಿಕಾರ ಇರುವುದಿಲ್ಲ. ಅವರು ಲಿಖಿತವಾಗಿ ಮಾತ್ರ ತೀರ್ಪು ಕೊಡುತ್ತಾರೆ.

22) ನೆದರ್‌ಲ್ಯಾಂಡ್ ದೇಶದಲ್ಲಿ 2013ರ ಹೊತ್ತಿಗೆ ಕೆಲವೇ ಸೆರೆಮನೆಗಳು ಇದ್ದವು. ಆದರೆ 2018ರ ನಂತರ ಅಲ್ಲಿ ಯಾವ ಸೆರೆಮನೆಗಳೂ ಇಲ್ಲ.

23) ಜಗತ್ತಿನಲ್ಲಿ ಅತಿಹೆಚ್ಚು ಇರುವ ಕೀಟಗಳು ಅಂದರೆ ಇರುವೆಗಳು.ಜಗತ್ತಿನಾದ್ಯಂತ ಅವುಗಳ ಸಂಖ್ಯೆ 1,00, 000 ಟ್ರಿಲಿಯನ್ ಆಗುತ್ತದೆ. ಅವುಗಳಲ್ಲಿ ಕನಿಷ್ಠ 10,000 ಪ್ರಬೇಧಗಳು ಇವೆ.

24) ವರ್ಜೀನಿಯ ದೇಶದಲ್ಲಿ ಕೋಳಿಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಮೊಟ್ಟೆ ಇಡುತ್ತವೆ.

25) ದನಗಳಿಗೆ 5 ಮೈಲು ದೂರದ ವಸ್ತುಗಳ ವಾಸನೆ ಕಂಡು ಹಿಡಿಯುವ ಶಕ್ತಿ ಇದೆ. ಈ ಸಾಮರ್ಥ್ಯ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ.

26) ಬೆನ್ನಿನ ಮೇಲೆ ಮಲಗುವ ಸಾಮರ್ಥ್ಯ ಜಗತ್ತಿನ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ. ಅದು ಇರುವುದು ಮನುಷ್ಯನಿಗೆ ಮಾತ್ರ. ಕುದುರೆಗಳು ನಿಂತುಕೊಂಡು ನಿದ್ರಿಸುತ್ತವೆ. ಮೀನುಗಳು ಕಣ್ಣು ತೆರೆದೇ ನೀರಿನಲ್ಲಿ ನಿದ್ರಿಸುತ್ತವೆ.

ಈ ವಿಸ್ಮಯಗಳು ಜಗತ್ತಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹೌದಲ್ವಾ?

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top