ವಿವೇಕಾನಂದ ಕಾಲೇಜಿನಲ್ಲಿ ಫುಡ್‌ ಕಾರ್ನಿವಲ್-2024 ಉದ್ಘಾಟನೆ

ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು ಅಗತ್ಯ. ಉದ್ಯಮ ಯಾರು ಬೇಕಾದರೂ ಆರಂಭಿಸಬಹುದು. ಅದರಲ್ಲಿ ಲಾಭ ಗಳಿಸಿದಾಗ ಮಾತ್ರವೇ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಸಾಧ್ಯ. ಕಾಲೇಜು ದಿನಗಳಲ್ಲೇ ಹಮ್ಮಿಕೊಳ್ಳುವ ಇಂತಹ ಫುಡ್ ಕಾರ್ನಿವಲ್‌ ಗಳಿಂದ ವ್ಯವಹಾರಜ್ಞಾನ ಅಭಿವೃದ್ಧಿಯಾಗುತ್ತದೆ. ಗ್ರಾಹಕರನ್ನು ಸೆಳೆಯುವ ಕೌಶಲ್ಯವೂ ಕರಗತವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ತೇಜಸ್ ಕೆ. ಹೇಳಿದರು.

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ವ್ಯವಹಾರ ಆಡಳಿತ ನಿರ್ವಹಣಾ ಸಂಘ ಮತ್ತು ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ’ಫುಡ್‌ಕಾರ್ನಿವಲ್’ ಫುಡ್ ಮಾರ್ಕೆಟಿಂಗ್‌ ಎಕ್ಸ್ ಪೋ -2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಿನ್ಸಿಪಾಲ್‍ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಫುಡ್ ಫೆಸ್ಟ್‌ನಲ್ಲಿಆಹಾರ ತಿನ್ನುವುದು ಮಾತ್ರ ಮುಖ್ಯವಲ್ಲ, ವ್ಯವಹಾರದ ವಿಧಾನಗಳು ಪ್ರಮುಖ ಪಾತ್ರವಹಿಸುತ್ತವೆ. ವ್ಯವಹಾರದ ಆಗು ಹೋಗುಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅರಿತುಕೊಂಡರೆ ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದರು.







































 
 

ಕಾಲೇಜಿನ ಬಿಬಿಎ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಶ್ರೀ ನಿರೂಪಿಸಿದರು. ಫುಡ್‌ ಕಾರ್ನಿವಲ್-2024 ಬಿಬಿಎ ವಿಭಾಗದ ಒಟ್ಟು 14 ತಂಡಗಳು ಭಾಗವಹಿಸಿದ್ದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top