ಭಜನೆ ಇದ್ದಲ್ಲಿ ವಿಭಜನೆ ಇಲ್ಲ : ಸಂತೋಷ್ ಪಿ ಅಳಿಯೂರು | ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆ

ಪುತ್ತೂರು: ಸಮರ್ಪಣಾಭಾವ, ಭಕ್ತಿ ಶ್ರದ್ಧೆಯಿಂದ ಮಾಡುವ ಭಗವಂತನ ಸ್ಮರಣೆ  ಭಗವಂತನಿಗೇ ತಲುಪುತ್ತದೆ. ಭಜನೆ, ನಾಮಾವಳಿಗಳಿಂದ ಮಾಡಿದ ಭಗವತ್ಸೇವೆ ನಾವು ಮಾಡಿದ ಕರ್ಮಗಳಿಂದ ಮುಕ್ತವಾಗಿಸುತ್ತದೆ ಎಂದು ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಂಚಾಲಕ ಸಂತೋಷ್ ಪಿ. ಅಳಿಯೂರು ಹೇಳಿದರು.

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಚಟುವಟಿಕೆಗಳಲ್ಲಿ ಪರಸ್ಪರ  ಕೈಜೋಡಿಸಿ ಮುಂದುವರಿದಾಗ ಸಂಘಟನೆ ಯಶಸ್ವಿಯಾಗಿ ಬೆಳೆಯುತ್ತದೆ.  ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಪರಮಪೂಜ್ಯ ಡಿ ವೀರೇಂದ್ರ ಹೆಗ್ಗಡೆಯವರಿಂದ ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ ಪ್ರಶಸ್ತಿ ಪಡೆದು, ತಂಡದ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳಿದರು.





































 
 

ಇನ್ನೋರ್ವ ಅತಿಥಿ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಭಜನೆಯ ಭಾವ, ಗುಣಮಟ್ಟ ಕಾಯ್ದುಕೊಂಡು ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು ಸಂಘದ ಬೆಳವಣಿಗೆಗೆ ಪೂರಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚೆನ್ನೈ ಯ ಅಮೇರಿಕನ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಟ್ರಸ್ಟ್ ನ ಸಂಚಾಲಕ ಗೋಪಾಲಕೃಷ್ಣ ಅವರನ್ನು ಭಜನಾ ತಂಡದ ವತಿಯಿಂದ ಪೇಟ, ಶಾಲು ಹೊದೆಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಶುಭಹಾರೈಸಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ, ತನ್ನ ಸಾಧನೆಯ  ಹಿಂದಿನ ಶ್ರಮ, ಲಭಿಸಿದ ಸಹಕಾರ, ಮಾರ್ಗದರ್ಶನ ಇತ್ಯಾದಿಗಳನ್ನು ಸಭೆಯಲ್ಲಿ ಹಂಚಿಕೊಂಡರು. 

ಟ್ರಸ್ಟ್ ನ ಅಧ್ಯಕ್ಷೆ ಶಾರದಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ : 2024-25ನೇ ಸಾಲಿಗೆ ಅಧ್ಯಕ್ಷರಾಗಿ ಶಾರದಾಕೃಷ್ಣ, ಉಪಾಧ್ಯಕ್ಷರಾಗಿ ಕುಸುಮಾಕರ್,  ಕಾರ್ಯದರ್ಶಿಯಾಗಿ ವೆಂಕಟೇಶ್ ಪ್ರಸಾದ್,  ಜತೆ ಕಾರ್ಯದರ್ಶಿಯಾಗಿ ಜಯಂತಿ ಹೆಗ್ಡೆ, ಕೋಶಾಧಿಕಾರಿಯಾಗಿ ಪ್ರೇಮ ಅಜ್ಜಿಕಲ್ಲು ಆಯ್ಕೆಯಾದರು.

ನಿಕಟಪೂರ್ವ ಕಾರ್ಯದರ್ಶಿ  ಪ್ರಭಾವತಿ, ನಿಕಟಪೂರ್ವ ಕೋಶಾಧಿಕಾರಿ ಧನುಷಾ  ವರದಿ ಮಂಡಿಸಿದರು. ಪ್ರೇಮಲತಾ ಪ್ರಾರ್ಥಿಸಿದರು. ಟ್ರಸ್ಟಿನ ಹಿರಿಯ ಸದಸ್ಯ ವಿಷ್ಣು ಪ್ರಭು ಸ್ವಾಗತಿಸಿ, ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ವಂದಿಸಿದರು. ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top