ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಾಧೀಶರಾಗಿ (ಸಿಜೆಐ) ನ್ಯಾ.ಸಂಜೀವ್ ಖನ್ನಾ ಆಯ್ಕೆಯಾಗಿದ್ದು, ಅವರನ್ನು ನೇಮಕ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಸೂಚನೆ ಹೊರಡಿಸಿದ್ದಾರೆ.
ನವೆಂಬರ್ 11ರಂದು ಹಾಲಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ. ಸಂಜೀವ್ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ಹುದ್ದೆಗೆ ನೇಮಿಸಲಾಗಿತ್ತು.
2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್ ಅವರಿಗೂ ಮುನ್ನ ಎನ್.ವಿ.ರಮಣ ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು.