ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಸಹಯೋಗದಲ್ಲಿ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ 19 ರ ವಯೋಮಿತಿಯಲ್ಲಿ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ ನರೇಂದ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಕ್ಷೇಪ್ ಕೃಷ್ಣ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ದೆಹಲಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಗೆ ಆಯ್ಕೆಯಾಗಿರುತ್ತಾರೆ. ‘
ನಿಕ್ಷೇಪ್ ಕೃಷ್ಣ ಸಂಪ್ಯದ ಕೆ. ಉದಯ್ ಕುಮಾರ್ ಮತ್ತು ಅನ್ನಪೂರ್ಣೇಶ್ವರಿ ಪಿ. ದಂಪತಿ ಪುತ್ರ. ಅವರಿಗೆ ಸಂಸ್ಥೆಯ ಕರಾಟೆ ಶಿಕ್ಷಕ ಜಪಾನ್ ಶೊಟೊಕಾನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ತರಬೇತಿ ಸಂಸ್ಥೆಯ ತರಬೇತುದಾರ ಶಿವಪ್ರಸಾದ್ ಡಿ. ತರಬೇತಿ ನೀಡಿರುತ್ತಾರೆ.
ಈ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ, ಪೋಷಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.