ಪುತ್ತೂರು : ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಕಿರುವ ಬ್ಯಾನರ್ ಗಳನ್ನು ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಪಿಡಿಒ ತೆಗೆಸಿದ ವಿಚಾರ ಮುಂದಿಟ್ಟುಕೊಂಡು ಸದಸ್ಯರು ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಘಟನೆ ಶುಕ್ರವಾರ ನಡೆದ ಬೆಟ್ಟಂಪಾಡಿ ಗ್ರಾಪಂನಲ್ಲಿ ನಡೆದಿದೆ.
ಪಂಚಾಯಿತಿ ಅಧ್ಯಕ್ಷೆ ಪವಿತ್ರ ಡಿ. ಅಧ್ಯಕ್ಷತೆ ಸಭೆ ಆರಂಭಗೊಂಡು ಪಿಡಿಒ ಸೌಮ್ಯ ಲೆಕ್ಕಪತ್ರ ವರದಿ ಮಂಡಿಸಲು ಆರಂಭಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಸದಸ್ಯೆ ಉಮಾವತಿ, ಬ್ಯಾನರ್ ತೆಗೆಯಲು ಪಂಚಾಯಿತಿಗೆ ಸುತ್ತೋಲೆ ಬಂದಿದೆಯೇ ಎಂದು ಪ್ರಶ್ನಿಸಿ ಬಂದಿದ್ದರೆ ಅದನ್ನು ಸಭೆಯ ಮುಂದಿಡಿ ಎಂದು. ಇದಕ್ಕೆ ಇತರ ಸದಸ್ಯರಾದ ಪ್ರಕಾಶ್ ರೈ. ಮಹೇಶ್ ಕೆ., ಗಂಗಾಧರ, ಚಂದ್ರಶೇಖರ್ ರೈ, ಪಾರ್ವತಿ, ವಿದ್ಯಾಶ್ರೀ ಧ್ವನಿಗೂಡಿಸಿ ಗದ್ದಲ ಎಬ್ಬಿಸಿದರು. ಬ್ಯಾನರ್ ತೆಗೆಯುಬೇಕಾದರೆ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದು ಬಳಿಕ ತೆರವುಗೊಳಿಸಬೇಕಿತ್ತು. ಕೇವಲ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ತೀರ್ಮಾನ ತೆಗದುಕೊಳ್ಳುವುದಾದರೆ ಸದಸ್ಯರು ಯಾಕೆ, ಸಾಮಾನ್ಯ ಸಭೆ ಯಾಕೆ ಎಂದು ಪ್ರಶ್ನಿಸಿ ಕಲಾಪ ಬಿಟ್ಟು ಹೊರ ನಡೆದರು.
ಏಕಾಏಕಿ ಸದಸ್ಯರ ಗಮನಕ್ಕೆ ತಾರದೆ ಬ್ಯಾನರ್ ಹರಿದು ತೆಗೆದಿರುವುದು ಕಾರ್ಯಕರ್ತರಿಗೆ ಅನುಮಾನ ಮಾಡಿದಂತಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ.
ಸಭೆಯ ಆರಂಭದಲ್ಲಿ ಸದಸ್ಯರಾದ ಪ್ರಕಾಶ್ ರೈ, ಪಾರ್ವತಿ, ಉಮಾವತಿ, ಮಹೇಶ್, ಚಂದ್ರಶೇಖರ ರೈ, ಗಂಗಾಧರ ಎಂ.ಎಸ್., ವಿದ್ಯಾಶ್ರೀ, ಮೊಯಿದುಕುಂಞಿ, ಲಲಿತಾ ಚಿದಾನಂದ, ಲಲಿತಾ, ರಮ್ಯಾ ಕೆ. ಉಪಸ್ಥಿತರಿದ್ದರು.