ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್‍ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರುಣ ವರ್ಗದ ಹುಡುಗರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಕೈಂರಂಗಳ ಶಾರದಾ ಗಣಪತಿ ವಿದ್ಯಾಸಂಸ್ಥೆ ಹಾಗೂ ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಮಡಂತ್ಯಾರು ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು.
ತರುಣ ವರ್ಗದ ಹುಡುಗರ ವಿಭಾಗದಲ್ಲಿ ಪೂರ್ವ ಯುಪಿ, ಉತ್ತರ ಕ್ಷೇತ್ರ ತೃತೀಯ ಸ್ಥಾನ ಪಡೆಯಿತು. ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ ದ್ವಿತೀಯ, ರಾಜಸ್ಥಾನ ಕ್ಷೇತ್ರ ತೃತೀಯ ಸ್ಥಾನ ಪಡೆಯಿತು.
ಕಿಶೋರ್ ವರ್ಗದ ಹುಡುಗರ ವಿಭಾಗದಲ್ಲಿ ಪೂರ್ವ ಯುಪಿ ಚಾಂಪಿಯನ್, ದಕ್ಷಿಣ ಮಧ್ಯ ಕ್ಷೇತ್ರ ದ್ವಿತೀಯ, ಪಶ್ಚಿಮ ಯುಪಿ ತೃತೀಯ ಸ್ಥಾನ ಪಡೆಯಿತು. ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ ಚಾಂಪಿಯನ್, ದಕ್ಷಿಣ ಮಧ್ಯ ಕ್ಷೇತ್ರ ದ್ವಿತೀಯ ಹಾಗೂ ರಾಜಸ್ಥಾನ ಕ್ಷೇತ್ರ ತೃತೀಯ ಸ್ಥಾನ ಪಡೆಯಿತು.
ಬಾಲವರ್ಗದ ಹುಡುಗರ ವಿಭಾಗದಲ್ಲಿ ಪಶ್ಚಿಮ ಯುಪಿ ಚಾಂಪಿಯನ್, ದಕ್ಷಿಣ ಮಧ್ಯ ಕ್ಷೇತ್ರ ದ್ವಿತೀಯ ಹಾಗೂ ದಕ್ಷಿಣ ಕ್ಷೇತ್ರ ತೃತೀಯ ಸ್ಥಾನ ಪಡೆಯಿತು. ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ ಚಾಂಪಿಯನ್, ದಕ್ಷಿಣ ಮಧ್ಯ ಕ್ಷೇತ್ರ ದ್ವಿತೀಯ ಹಾಗೂ ಬಿಹಾರ್ ಕ್ಷೇತ್ರ ತೃತೀಯ ಸ್ಥಾನ ಪಡೆಯಿತು.
ಸಮಾರೋಪ : ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ವಾಲಿಬಾಲ್‍ಪಂದ್ಯಾಟ ಸಂಯೋಜಕ್ ಕಿಶೋರ್ ಚೌವಾಣ್, ದಕ್ಷಿಣ ಕ್ಷೇತ್ರ ಖೇಲ್‍ಸಂಯೋಜಕ್ ಯು.ಪಿ.ಹರಿದಾಸ್, ವಿದ್ಯಾಭಾರತಿ ಪ್ರಾಂತ ಸಂಘಟನಾ ಸಂಯೋಜಕ್ ಉಮೇಶ್, ಭಟ್‍ಕ್ರೀಡಾ ಪಟುಗಳಿಗೆ ಪದಕ ತೊಡಿಸಿ, ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್, ವಿವೇಕಾನಂದ ವಿದ್ಯಾಸಂಸ್ಥೆ ಸಂಚಾಲಕ ರವಿನಾರಾಯಣ ಎಂ., ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ರೈ ಸ್ವಾಗತಿಸಿದರು. ಶಿಕ್ಷಕಿಯರಾದ ಕವಿತಾ, ಸುಜಾತ ಕಾರ್ಯಕ್ರಮ ನಿರೂಪಿಸಿದರು.