ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು: ಕ್ರೀಡೆ ಕೇವಲ ಸ್ಪರ್ಧೆಗಷ್ಟೇ ಸೀಮಿತವಲ್ಲ. ದೈಹಿಕ, ಮಾನಸಿಕ ಆರೋಗ್ಯ, ಮೆದುಳಿನ ಚುರುಕುತನಕ್ಕೆ  ಅತ್ಯಂತ ಉಪಕಾರಿ. ಅದರಲ್ಲೂ ಶೈಕ್ಷಣಿಕ ಸಾಧನೆಗೆ ಅತಿ ಅವಶ್ಯಕ. ಆದ್ದರಿಂದ ದಿನಕ್ಕೆ 30  ರಿಂದ 90 ನಿಮಿಷಗಳ ವರೆಗೆ ಆಟೋಟ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಈಜು ತರಬೇತುದಾರ ಪಾರ್ಥ ವಾರಣಾಸಿ ಹೇಳಿದರು.

ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರೋಗ್ಯ ಹಾಗೂ ಬಲ ಹೇಗಿದೆ ಎಂದು ಒರೆಗೆ ಹಚ್ಚಲು ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಅಗತ್ಯ. ಇಂದಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಿಂದ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿಯಲ್ಲಿ, ನಮ್ಮ ಬಲ ಅಥವಾ ಶಕ್ತಿಯಲ್ಲಿ ಕೊರತೆ ಕಂಡುಬರುತ್ತದೆ. ಕ್ರೀಡೆಯಿಂದ ಖಂಡಿತ ಇದನ್ನು ಮರಳಿ ಗಳಿಸುವುದು ಸಾಧ್ಯ ಎಂದು ಹೇಳಿದರು.



































 
 

ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆರ್ಯಭಟ, ಕಣಾದ, ಪಾಣಿನಿ, ಪತಂಜಲಿ, ಭಾಸ್ಕರ, ಚರಕ, ಕಪಿಲ, ಸುಶ್ರುತ, ಕೌಟಿಲ್ಯ, ನಲಂದ, ಚಾಣಕ್ಯ, ತಕ್ಷಶಿಲಾ, ಗಾರ್ಗಿ, ಮೈತ್ರೇಯಿ ತಂಡದ ವಿದ್ಯಾರ್ಥಿಗಳು ಆಕರ್ಷಕ ಕವಾಗಿ ಪಥಸಂಚಲನ ನಡೆಸಿದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಡೆದ 3000 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ವಿಜೇತರಾದ ಅನಿಕೇತ್, ಅಶ್ವಿನ್, ಪೂಜಾ, ಮಾನ್ಯ, ಶ್ರೇಯ ಎಸ್. ರೈ ಅವರಿಗೆ ಪಾರ್ಥಾ ವಾರಣಾಸಿ ಪದಕ ಪ್ರದಾನಿಸಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ರಾಷ್ಟ್ರಮಟ್ಟದ ಕ್ರೀಡಾ ವಿಜೇತರಾದ ಧನ್ವಿತ್, ಪ್ರತೀಕ್ಷ ಶೆಣೈ, ಅನಿಕೇತ್, ಅಕ್ಷಯ್, ತ್ರಿಶೂಲ್, ಶ್ರದ್ಧಾ ಲಕ್ಷ್ಮಿ, ಅಶ್ವಿನ್, ಅಕ್ಷತ್, ಜಗನ್, ಕುಟ್ಟಣ್ಣ ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತೆಗೆದುಕೊಂಡು ಬಂದರು. ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು ಕ್ರೀಡಾ ವಿಧಿ ಬೋಧಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top