ಸವಣೂರು: ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾ.9, 2024 ರಂದು ನಡೆದ ನೇಮೋತ್ಸವದ ಖರ್ಚು ವೆಚ್ಚಗಳನ್ನು ಮಂಡನೆ ಮಾಡಲಾಯಿತು.
ನೇಮೋತ್ಸವಕ್ಕೆ ಒಟ್ಟು 1,57,679 ರೂ. ಜಮೆಯಾಗಿದ್ದು, 1,38,609 ರೂ. ಖರ್ಚಾಗಿರುತ್ತದೆ. 19,070 ರೂ. ಉಳಿಕೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಕಟ್ಟೆ ಹಾಗೂ ದೈವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು.
ನೇಮೋತ್ಸವಕ್ಕೆ ಹಾಗೂ ಈ ವರೆಗೆ ನಡೆದ ಅಭಿವೃದ್ಧಿ ಕೆಲಸಗಳಿಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಮನೆಯವರು ಉತ್ತಮ ರೀತಿಯಲ್ಲಿ ತನು-ಮನ-ಧನಗಳಿಂದ ಸಹಕರಿಸಿದ ನಿಟ್ಟಿನಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಯಶಸ್ವಿಯಾಗಿ ಈ ವರೆಗೆ ನಡೆದಿದೆ ಎಂದು ತಿಳಿಸಲಾಯಿತು. ಮುಂದೆಯೂ ಅಭಿವೃದ್ಧಿ ಮತ್ತು ಇತರ ಕೆಲಸ ಕಾರ್ಯಗಳಿಗೆ ಗ್ರಾಮದ ಎಲ್ಲಾ ಜನರು ಮತ್ತು ಆಡಳಿತ ಮಂಡಳಿಯವರು ಸಹಕಾರ ನೀಡುವಂತೆ ಅಧ್ಯಕ್ಷರು ಕೋರಿದರು.
ಸಭೆಯಲ್ಲಿ ಕೆಡೆಂಜಿಗುತ್ತು ಯಜಮಾನ ಪ್ರವೀಣ್ ಕುಮಾರ್ ಕೆಡೆಂಜಿ ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನ ನೀಡಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆಡೆಂಜಿ ಲೆಕ್ಕಪತ್ರ ಮಂಡನೆ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಆನಂದ್ ಅನ್ಯಾಡಿ, ಅನ್ಯಾಡಿ ಬಾರಿಕೆಯ ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ್ ಕೆಡೆಂಜಿ, ಆಡಳಿತ ಮಂಡಳಿ ಸದಸ್ಯರುಗಳಾದ ಜನಾರ್ದನ ಕೂರ, ಚೆನ್ನಪ್ಪ ಗೌಡ ಅನ್ಯಾಡಿ, ಮೋನಪ್ಪ ಗೌಡ, ಪೂವಣಿ ಅನ್ಯಾಡಿ, ದೇರಣ್ಣ ಗೌಡ ಅನ್ಯಾಡಿ, ಸೋಮಪ್ಪ ಗೌಡ ಅನ್ಯಾಡಿ, ಪವನ್ ಕುಮಾರ್, ಕಮಲ, ರಾಮಚಂದ್ರ ಅನ್ಯಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.