ಪುತ್ತೂರು: ಅ.31ರಿಂದ ನ.2ರ ತನಕ ನಡೆಯುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟದಲ್ಲಿ ರಾಜ್ಯ ಅಗ್ನಿಶಾಮಕದಳ ಸುತ್ತೋಲೆ ಹೊರಡಿಸಿದೆ.
ಯಾವುದೇ ಅನಾಹುತ ಸಂಭವಿಸುವ ನಿಟ್ಟಿನಲ್ಲಿ ಈ ಸೊತ್ತೋಲೆ ಹೊರಡಿಸಿದ್ದು, ಪುತ್ತೂರು ಹಾಗೂ ಕಡಬದಲ್ಲಿ ಜನ ಸಂಚಾರ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಪಟಾಕಿ ಮಾರಾಟ ಮಳಿಗೆಯನ್ನು ಹಾಕಲು ಸೂಚನೆ ನೀಡಿದೆ. ಪುತ್ತೂರು ಮತ್ತು ಕಡಬದಲ್ಲಿ 69 ಪಟಾಕಿ ಮಳಿಗೆಗಳಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಪಟಾತಕಿ ಮಾರಾಟ ಮಳಿಗೆ ಹಾಕಲು ಅನುಮತಿಗಾಗಿ ಹಲವು ಅರ್ಜಿಗಳು ಅಗ್ನಿಶಾಮಕ ಇಲಾಖೆಗೆ ಬಂದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪುತ್ತೂರು ಮತ್ತು ಕಡಬ ತಹಸೀಲ್ದಾರ್ ಅವರೊಂದಿಗೆ ಸ್ಥಳ ಪರಿಶೀಲಿಸಿದ್ದಾರೆ. ಜೊತೆಗೆ ಸೂಕ್ತ ಮತ್ತು ಸೂಕ್ತವಲ್ಲದ ಮೈದಾನಗಳ ವಿವರಣೆ ನೀಡಿದ್ದಾರೆ.
ಪಟಾಕಿ ಮಳಿಗೆ ತೆರೆಯುವ ಪ್ರದೇಶ ಹೀಗಿದೆ :
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ 4 ಪಟಾಕಿ ಮಳಿಗೆ, ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ 20ರಿಂದ 25 ಪಟಾಕಿ ಮಳಿಗೆ, ಕಡಬ ತಾಲೂಕಿನ ಆಲಂಕಾರು ದುರ್ಗಾಂಬಿಕ ಪದವಿ ಪೂರ್ವ ಕಾಲೇಜು ಎದುರು ಮೈದಾನದಲ್ಲಿ 5ರಿಂದ 10 ಪಟಾಕಿ ಮಳಿಗೆ, ರಾಮಕುಂಜದಲ್ಲಿ 10ರಿಂದ 15 ಮಳಿಗೆ, ಕಡಬ ಪೆಟ್ರೋಲ್ ಪಂಪ್ ಎದುರಿನ ತೆರೆದ ಮೈದಾನದಲ್ಲಿ 10ರಿಂದ 15 ಪಟಾಕಿ ಮಳಿಗೆ ನಿರ್ಮಾಣಕ್ಕೆ ಅವಕಾಶವಿದೆ. ಈ ಬಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಯಾವುದೇ ಅಂಗಡಿಗಳಲ್ಲಿ ಮಟಾಕಿ ಮಾರಾಟ ಮಾಡುವಂತಿಲ್ಲ. ಈಗಾಗಲೇ ಖಾಯಂ ಅಂಗಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ