ಪುತ್ತೂರು: ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಇಂದು ಶ್ರೀ ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳೊಂದಿಗೆ ವಾಹನ ಪೂಜೆ ಹಾಗೂ ವೈದಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.
ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿ ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳ ಮಹತ್ವಗಳನ್ನೂ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಎ.ವಿ. ನಾರಾಯಣರವರು ಎವಿಜಿ ಅಸೋಸಿಯೇಟ್ಸ್’ನ ಹಿರಿಯ ಕಾರ್ಮಿಕರ ಬಗ್ಗೆ ಪರಿಚಯ ನೀಡಿ ಅವರಿಗೆ ಶುಭ ಹಾರೈಸಿದರು.
ಶಾಲಾ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯರವರು ಅಭಿನಂದನ ಭಾಷಣ ಮಾಡಿದರು. ಶಾಲಾ ನಿರ್ದೇಶಕರಾದ ಸೀತಾರಾಮ ಕೇವಳ ಅತಿಥಿಯವರನ್ನು ಪರಿಚಯಿಸಿದರು. ಪ್ರಾಂಶುಪಾಲೆ ಸವಿತಾ ಕುಮಾರಿ ಕೆ. ಸನ್ಮಾನ ಪತ್ರವನ್ನು ವಾಚಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ, ನಿರ್ದೇಶಕಿ ಪುಷ್ಪಾವತಿ ಕಳುವಾಜೆ, ವಾಮನ ಗೌಡ, ಸೀತಾರಾಮ ಪೂಜಾರಿ, ಗಂಗಾಧರ ಗೌಡ , ವನಿತಾ ಎ.ವಿ., ದೀಕ್ಷಾ ವಾಮನ ಗೌಡ, ಡಾ. ಹರಿಣಾಕ್ಷಿ ಸೀತಾರಾಮ ಕೇವಳ, ಉಮಾವತಿ ರಾಧಾಕೃಷ್ಣ, ಗಂಗಯ್ಯ ಗೌಡ ತಾಳಿಪಡ್ಪು ಕೌಶಿಕ್ ಎ.ಜಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ಕುಂಟ್ಯಾನ ಇವರಿಂದ ಭಜನೆ ಹಾಗೂ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಬೆದ್ರಾಳ ಇವರಿಂದ ಕುಣಿತ ಭಜನೆ ನಡೆದವು. ಎವಿಜಿ ಅಸೋಸಿಯೇಟ್ಸ್’ನ ಹಿರಿಯ ಕಾರ್ಮಿಕರಾದ ತಿಮ್ಮಪ್ಪ ಗೌಡ, ಚೆನ್ನಪ್ಪ, ವಿಲಿಯಂ ಸುವಾರೀಸ್ ಮತ್ತು ಬಸವರಾಜರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ರಾಧಾಕೃಷ್ಣ ಇಟ್ಟಿಗುಂಡಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು
ನಿರ್ದೇಶಕಿ ಪ್ರತಿಭಾ ದೇವಿ ಸ್ವಾಗತಿಸಿ, ಕೃಪಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ಶಿಕ್ಷಕಿಯರಾದ ವನಿತಾ ಮತ್ತು ಯಶುಭಾ ರೈ ರವರು ಕಾರ್ಯಕ್ರಮ ನಿರೂಪಪಿಸಿದರು.