ಪಿಲಿಗೊಬ್ಬು ಕೇವಲ ಸ್ಪರ್ಧೆ ಅಲ್ಲ. ಅದು ಜನರಲ್ಲಿ ಭಾವನೆ, ನಂಬಿಕೆಯನ್ನು ಜೋಡಿಸಿದೆ : ನಳಿನ್ ಕುಮಾರ್ ಕಟೀಲ್‍ |ವಿಜಯ ಸಾಮ್ರಾಟ್ ವತಿಯಿಂದ ‘ಪಿಲಿಗೊಬ್ಬು ಸೀಸನ್-2’ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯುವ ಪುತ್ತೂರುದ ಪಿಲಿಗೊಬ್ಬು-ಸೀಸನ್ 2 ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವೈಭವದ ಚಾಲನೆ ನೀಡಲಾಯಿತು.

ಪಿಲಿಗೊಬ್ಬು ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಏಕೈಕ ಜಿಲ್ಲೆ ಇದ್ದರೆ ಅದು ತುಳುನಾಡು. ತುಳುನಾಡಿನ ಜನ ಕಲೆ, ಕ್ರೀಡೆ, ಕೃಷಿ, ಯಕ್ಷಗಾನದಲ್ಲಿ ದೇವರನ್ನು ಕಂಡವರು. ಧಾರ್ಮಿಕ ನಂಬಿಕೆ ಎಂಬುದು ಪಿಲಿಗೊಬ್ಬ ಹಿಂದೆ ಅಡಗಿದೆ. ಪಿಲಿಗೊಬ್ಬು ಕೇವಲ ಸ್ಪರ್ಧೆ ಅಲ್ಲ. ಅದು ಭಾವನೆ, ನಂಬಿಕೆಯನ್ನು ಜನರಲ್ಲಿ ಜೋಡಿಸುವ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ವಿಜಯ ಸಾಮ್ರಾಟ್ ಸಂಸ್ಥೆ ತುಳುನಾಡಿನ ಜನಪದ ಕಲೆಗಳಿಗೆ ದೃಷ್ಟಿಕೋನ, ಹೊಸ ಆಯಾಮ, ಕಲ್ಪನೆಯನ್ನು ವ್ಯವಸ್ಥಿತವಾಗಿ ಪಿಲಿಗೊಬ್ಬು ಕಾರ್ಯಕ್ರಮದ ಮೂಲಕ ಮಾಡಿದ್ದು, ಈ ಮೂಲಕ ತುಳುನಾಡಿನ ಭವ್ಯ ಪರಂಪರೆ, ಆರಾಧನೆಯನ್ನು ಉಳಿಸುವ ಕೆಲಸ ಮಾಡಿದೆ ಎಂದರು.

ಪಿಲಿಗೊಬ್ಬ ವೇದಿಕೆಯನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ಕತಾರ್ ನ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಮಾತನಾಡಿ, ದೈವೀ ಪ್ರೇರಣೆ, ಸಾಂಸ್ಕೃತಿಕ, ಕ್ರೀಡಾ ಹಿನ್ನಲೆಯಿರುವ ಪಿಲಿಗೊಬ್ಬು ಕಾರ್ಯಕ್ರಮವನ್ನು ಸಾಮಾಜಿಕ ಕಳಕಳಿಯೊಂದಿಗೆ ವಿಜಯ ಸಾಮ್ರಾಟ್ ಮಾಡುತ್ತಿರುವುದು ಅಭಿನಂದನೀಯ. ಪ್ರಸ್ತುತ ಯುಗದಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ. ಈ ನಿಟ್ಟಿನಲ್ಲಿ ಪುಣ್ಯ ಸಂಪಾದನೆಗೆ ಅನುಕಂಪ ಭರಿತ, ಧೀಮಂತ ವ್ಯಕ್ತಿತ್ವದೊಂದಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಕಾರ್ಯಗಳು ಯುವ ಜನತೆಯಿಂದ ನಡೆಯಬೇಕು ಎಂದು ಅವರು, ಇಂದು ಹತ್ತೂರಿನ ಜನತೆಗೆ ಸಾಂಸ್ಕೃತಿಕ ಲೋಕವನ್ನು ಉಣಬಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವ ವಿಜಯ ಸಾಮ್ರಾಟ್ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದರು.

































 
 

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಾಜಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್‍ ಬನ್ನೂರು, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ , ನಗರಸಭೆ ಸದಸ್ಯ ರಮೇಶ್‍ ರೈ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ  ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕರಾದ ಜಯರಾಮ ರೈ ಬಳೆಜ್ಜ, ಶಶಿಕುಮಾರ್ ರೈ ಬಾಲ್ಯೊಟ್ಟು, ಬ್ರೈಟ್ ವೇ ಇಂಡಿಯಾ ಆಡಳಿತ ನಿರ್ದೇಶಕ ಹರ್ಷಕುಮಾರ್ ರೈ ಮಾಡಾವು, ಆರ್‍ ಎಸ್‍ ಎಸ್‍ ನ ಸುನೀಲ್‍ ಆಚಾರ್ಯ, ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ, . ಎ.ಕೆ.ಜಯರಾಮ ರೈ, ಪುತ್ತೂರು ಆರ್‍ ಎಫ್‍ ಒ ಕಿರಣ್‍ ಬಿ.ಎಂ. ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಿಲಿಗೊಬ್ಬು ಸಮಿತಿ ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಸಂಚಾಲಕ ನಾಗರಾಜ್ ನಡುವಡ್ಕ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರಾದ ದೇವಿಪ್ರಸಾದ್ ಭಂಡಾರಿ, ಶಂಕರ ಭಟ್ ಈಶಾನ್ಯ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ಸುರೇಶ್‍ ಪಿದಪಟ್ಲ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ.ಗೌಡ, ಸಂಘಟನಾ ಕಾರ್ಯದರ್ಶಿ ಅರುಣ್‍ ರೈ, ಜತೆ ಕಾರ್ಯದರ್ಶಿ ದಿನೇಶ್‍ ವಾಸುಕಿ, ಸದಸ್ಯರು  ಉಪಸ್ಥಿತರಿದ್ದರು.

ಶಾಂತೇರಿ ಶೆಣೈ ಪ್ರಾರ್ಥನೆ ಹಾಡಿದರು. ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ, ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳೆಜ್ಜ ಸ್ವಾಗತಿಸಿದರು. ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್‍ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್‍ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top