ಪುತ್ತೂರು: ಬೀಡಿ ಕಾರ್ಮಿಕರಿಗೆ ಎಲ್ಲಾ ಕಡೆ ಈಗ ಬೋನಸ್ ವಿತರಣೆ ಆಗುತ್ತಿದ್ದು 2024 ರಲ್ಲಿ ಪ್ರತಿ ಒಂದು ಸಾವಿರ ಬೀಡಿಗೆ 41,46 ರೂ. ಅಂದರೆ ಒಂದು ಲಕ್ಷ ಬೀಡಿಗೆ 4,145 ಬೋನಸ್ ಬಿಡುಗಡೆಯಾಗಿದೆ. ಅದನ್ನು ಬೀಡಿ ಕಾರ್ಮಿಕರು ಪಡಕೊಳ್ಳಬೇಕೆಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಪಿ.ಕೆ. ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್, ಖಜಾಂಜಿ ಈಶ್ವರಿ ಹೇಳಿದ್ದಾರೆ.
ಪ್ರತಿ ಒಂದು ಸಾವಿರ ಬೀಡಿಗೆ ರಜಾ ಸಂಬಳ 12.62 ಹಬ್ಬದ ರಜಾ ಸಂಬಳ, 7.82 ಮತ್ತು ಬೋನಸ್ 21.02 ಒಟ್ಟು ಬೋನಸ್ ಜೊತೆ ಪ್ರತಿ ಒಂದು ಸಾವಿರ ಬೀಡಿಗೆ ನೀಡುವ ಮೊತ್ತ ರೂ 41.46 ರೂ. ಬೀಡಿ ಕಾರ್ಮಿಕರಿಗೆ ಸಿಗಬೇಕಿದೆ. ಇದಕ್ಕಿಂತ ಕಡಿಮೆ ಬೋನಸ್ ದೊರೆತಲ್ಲಿ ನಮ್ಮ ಸಿಒಐಟಿಯು ಸಂಘದ ಗಮನಕ್ಕೆ ತರಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೀಡಿ ಕಾರ್ಮಿಕರು ಎಲ್ಲರೂ ಒಂದಾಗಿ ಹೋರಾಟ ನಡೆಸಿದರೆ ಮಾತ್ರ ಈ ಬಾಕಿ ವೇತನವನ್ನು ಪಡೆದುಕೊಳ್ಳಲು ಸಾದ್ಯ. 2018 ರಿಂದ ಇಂದಿನ ತನಕ ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ವರ್ಷದಲ್ಲಿ ಒಂದು ಲಕ್ಷ ಬೀಡಿ ಕಟ್ಟಿದ್ದರೂ ತಲಾ 60 ಸಾವಿರ ರೂ. ವೇತನ ನೀಡಲು ಬಾಕಿ ಇದೆ. ಕಾರ್ಮಿಕರು ಸಂಘಟಿತರಾಗಿ ಈ ಎಲ್ಲಾ ಸುಲಿಗೆಯನ್ನು ನಿಲ್ಲಿಸಿ ನ್ಯಾಯ ಪಡೆಯಲು ಸಿದ್ದರಾಗಬೇಕೆಂದು, ಒಗ್ಗಟ್ಟಾದ ಕಾರ್ಮಿಕರಿಗೆ ಸಿಐಟಿಯು ನಾಯಕತ್ವ ನೀಡಿ ನ್ಯಾಯ ತೆಗೆಸಿಕೊಡಲಿದೆ ಎಂದು ಅವರು ಕರೆ ನೀಡಿದರು.