ಪುತ್ತೂರು: ಕಳೆದ ಹತ್ತು ದಿನಗಳಲ್ಲಿ ಪುಡಾದಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ 9/11 ಖಾತೆಯ 72 ಕಡತಗಳು ವಿಲೇವಾರಿಯಾಗಿದೆ ಎಂದು ಪುಡಾ ಕಾರ್ಯದರ್ಶಿ ಅಭಿಲಾಷ್ ಮಾಹಿತಿ ನೀಡಿದ್ದಾರೆ.
9/11 ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಕಂದಾಯ ಅಧಿಕಾರಿಗಳ ಸಭೆ ಕರೆದಿದ್ದ ಶಾಸಕ ಅಶೋಕ್ ರೈ ಅವರು ಪುತ್ತೂರು ತಾಲೂಕು, ಸುಳ್ಯ,ಬೆಳ್ತಂಗಡಿ ಹಾಗೂ ಕಡಬ ತಾಲೂಕು ಕೇಂದ್ರಗಳ ಕಡತ ವಿಲೆವಾರಿ ಮಾಡುವ ಚರ್ಚೆ ನಡೆಸಿ, ನಾಲ್ಕು ತಾಲೂಕು ಕೇಂದ್ರಗಳಲ್ಲಿ ವಾರದಲ್ಲಿ ಒಂದು ದಿನ ಕಡತ ವಿಲೇವಾರಿ ಮಾಡುವಂತೆ ಶಾಸಕರು ಸೂಚನೆ ನೀಡಿದ್ದರು.
ಪುತ್ತೂರಿನಲ್ಲಿ ಕಳೆದ ಹತ್ತು ದಿನಗಳಲ್ಲಿ 72 ಕಡತಗಳು ವಿಲೇವಾರಿಯಾಗಿದೆ. ಒಟ್ಟು 180 ಅರ್ಜಿಗಳು ಬಂದಿದ್ದು ಈ ಪೈಕಿ 72 ವಿಲೇವಾರಿಯಾಗಿದ್ದು, 10 ಕಡತಗಳು ವಿಲೇವಾರಿ ಹಂತದಲ್ಲಿದೆ. 98 ಅರ್ಜಿಗಳು ಬಾಕಿ ಇದೆ ಎಂದು ಅಭಿಲಾಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುಡಾ ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಪಿ ಶೆಟ್ಟಿ ಮತ್ತು ಲ್ಯಾನ್ಸಿಮಸ್ಕರೇನಸ್ ಉಪಸ್ಥಿತರಿದ್ದರು.