ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಸಂಸ್ಥೆಯಲ್ಲಿ ಹಿಂದಿ ದಿವಸ್ ಆಚರಣೆ ನಡೆಯಿತು.
ಪ್ರಸಿದ್ಧ ಸಾಹಿತಿಗಳ ವೇಷ ಧರಿಸಿ ಬಂದು ಅವರನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಹಿಂದಿ ದಿವಸ್ ದಂದು ಕೊಡಮಾಡುವ ಪ್ರಶಸ್ತಿಗಳ ಬಗ್ಗೆ ಹೇಳುತ್ತಾ ಭಾಷಾ ವೈಶಿಷ್ಟ್ಯವನ್ನು ತಿಳಿಸಿದರು.
ಹಿಂದಿ ಶಿಕ್ಷಕಿ ಕುಸುಮ, ಸಂತ ಕಬೀರರ ದೋಹೆಯ ಮೌಲ್ಯವನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳಾದ ಸಾರಿಕಾ ಹಿಂದಿ ಭಾಷೆಯ ಮಹತ್ವದ ಬಗ್ಗೆ, ಶ್ರೀಹರಿ ಸ್ವತಃ ರಚಿಸಿದ ಶಾಯರಿಯನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳು, ಇತರ ವಿದ್ಯಾರ್ಥಿಗಳಿಗೆ ಹಿಂದಿ ಟಂಗ್ ಟ್ವಿಸ್ಟರ್ ಹಾಗೂ ಒಗಟುಗಳ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳಾದ ಅನುಶ್ರೀ ಪ್ರಾರ್ಥಿಸಿದರು. ಅದಿತಿ ರೈ, ವಿದ್ಯಾ ಪೈ ಕಾರ್ಯಕ್ರಮವನ್ನು ನಿರ್ವಹಿಸಿದರು, ಚರಿಷ್ಮ ಸ್ವಾಗತಿಸಿ, ಧನ್ವಿತ್ ವಂದಿಸಿದರು