ಅಪೂರ್ಣಗೊಂಡ ಜಲಸಿರಿ ಕಾಮಗಾರಿ ಕುರಿತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆಗೆ ಅವಕಾಶ ನೀಡಬೇಕು : ಜೀವಂಧರ್ ಜೈನ್ | ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬಳಿಕ ನಗರಸಭೆಯ ಪ್ರಥಮ ಸಭೆ

ಪುತ್ತೂರು: ಜಲಸಿರಿ ಯೋಜನೆಯ ಡ್ಯಾಮ್ ಸಹಿತ ವಿವಿಧಕಾಮಗಾರಿಗಳ ನಿರ್ವಹಣೆಯನ್ನು ಜಲಸಿರಿಯವರೇ ಮಾಡಬೇಕು. ಆದರೆ ನಗರಸಭೆ ಎಗ್ರಿಮೆಂಟ್‍ ನಲ್ಲಿ ಡ್ಯಾಮ್‍ ನಿರ್ವಹಣೆಯ ಕುರಿತು ಎಗ್ರಿಮೆಂಟ್‍ ನಲ್ಲಿ ಉಲ್ಲೇಖಿಸಿಲ್ಲ. ಸಾಲದಕ್ಕೆ ಜಲಸಿರಿ ಯೋಜನೆ 2023 ರಲ್ಲೇ ಸಂಪೂರ್ಣಗೊಂಡು ನಗರಸಭೆಗೆ ಬಿಟ್ಟುಕೊಡಬೇಕಿತ್ತು. ಇದೀಗ ಅವಧಿ ಮುಗಿದಿದ್ದು, ಜಲಸಿರಿ ಕುರಿತು ಚರ್ಚೆಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್‍ ಒತ್ತಾಯಿಸಿದರು.

oplus_0

ಮಂಗಳವಾರ ನಗರಸಭೆಯ ಸಭಾಂಗಣದಲ್ಲಿ ನಗರಸಭೆತ ನೂತನ ಆಡಳಿತ ಬಂದ ಬಳಿಕ ನಡೆದ ಪ್ರಥಮ ಸಭೆಯಲ್ಲಿ ಅವರು ಈ ಕುರಿತು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ಲೀಲಾವತಿ ಅವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಜಲಸಿರಿ ಕಾಮಗಾರಿಯ ಕುರಿತು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ, ಜಲಸಿರಿ ಅಧಿಕಾರಿಗಳ ಸಮ್ಮುಖದಲ್ಲಿ ಶೀಘ್ರದಲ್ಲಿ ವಿಶೇಷ ಸಭೆ ಕರೆದು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.





























 
 

ಜಲಸಿರಿ ಯೋಜನೆಯ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕೆಲವು ಕಡೆಗಳಲ್ಲಿ ಆರಂಭವೇ ಆಗಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. 31 ವಾರ್ಡುಗಳಲ್ಲೂ ಸಮರ್ಪಕವಾಗಿ ಆಗ್ತಾ ಇಲ್ಲಾ ಎಂದು ಜೀವಂಧರ್ ಜೈನ್ ಸಭೆಗೆ ತಿಳಿಸಿದರು.

ಡ್ಯಾಮ್‍ ನಿರ್ವಹಣೆ ಕುರಿತು ಎಗ್ರಿಮೆಂಟ್‍ ನಲ್ಲಿ ಯಾಕೆ ನಮೂದಿಸಿಲ್ಲ. ತಕ್ಷಣ ಈ ಕುರಿತು ನಿರ್ಣಯ ಕೈಗೊಳ್ಳಿ ಎಂದು ಸದಸ್ಯ ಅಶೋಕ್ ಶೆಣೈ ಭಾಮಿ ಆಗ್ರಹಿಸಿದರು.

ಜಲಸಿರಿ ಯೋಜನೆ ಕಾಮಗಾರಿ ಸಂದರ್ಭ ರಸ್ತೆ ಕ್ರಾಸ್ ಕಟ್ಟಿಂಗ್ ಮಾಡಲಾಗಿದೆ. ಇದನ್ನು ಸರಿಪಡಿಸುವ ಕೆಲಸ ಶೀಘ್ರದಲ್ಲಿ ಆಗಬೇಕು ಎಂದು ಅಶೋಕ್ ಶೆಣೈ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಸಿರಿ ಅಧಿಕಾರಿಗಳು, ಈಗಾಗಲೇ 125 ಕಡೆಗಳಲ್ಲಿ ಜಲಸಿರಿ ಪೈಪ್‍ ಲೈನ್‍ ಕಾಮಗಾರಿ ಸಂದರ್ಭ ಡ್ಯಾಮೆಜ್ ಆಗಿದ್ದು, ಮುಂದಿನ ಡಿಸೆಂಬರ್, ಜನವರಿಯೊಳಗೆ ದುರಸ್ತಿ ಕಾರ್ಯ ಮುಗಿಸುವುದಾಗಿ ತಿಳಿಸಿದರು.

ಈಗಾಗಲೇ ನಗರಸಭೆಯಲ್ಲಿ ಒಟ್ಟು ಹುದ್ದೆಗಳು ಬೇಕಾಗಿರುವುದು 236. 83 ಮಂದಿ ಪೌರ ಕಾರ್ಮಿಕರ ಬೇಕಾಗಿದಲ್ಲಿ ಕೇವಲ 53 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಮೂರು ಜೂನಿಯರ್ ಇಂಜಿನಿಯರ್‍ ಗಳ ಅವಕಶ್ಯಕತೆಯಿದ್ದು, ಇದು ಮೂರು ಖಾಲಿಯಿದೆ. ಕೇವಲ ಒಬ್ಬರು ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಖಕಾರಣದಿಂದ ಕೆಲಸ ಕಾರ್ಯಗಳು ನಿಧಾನವಾಗುತ್ತಿದೆ. ಈ ಕುರಿತು ಡಿಸಿಗೆ, ಶಾಸಕರು, ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದರು.

ನಗರಸಭೆಯಲ್ಲಿ ಬ್ರೋಕರ್ ಗಳ ಹಾವಳಿ ಜತೆಗೆ ಭ್ರಷ್ಟಾಚಾರಗಳು ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಇದು ಗೊಂದಲಕ್ಕೆ ಎಡೆಮಾಡಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಂದ ಏನಾದರೂ ತೊಂದರೆ ಆಗುತ್ತಿದ್ದರೆ, ಸಾರ್ವಜನಿಕರಿಗೆ ಕೆಲಸ ಕಾರ್ಯಗಳ ಕುರಿತು ಮಾಹಿತಿ ಕೊರತೆ ಇದ್ದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಿ ಎಂದು ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದರು.

ಕಳೆದ ಬಜೆಟ್‍ ನಲ್ಲಿ ಪ್ರತಿ ವಾರ್ಡಿನಲ್ಲಿ ತಲಾ 10 ಲಕ್ಷ ಇಟ್ಟು ಕೆಲಸ ಮಾಡಿದ್ದೇವೆ. ಆದರೆ ಇದೀಗ ಈ ಬಜೆಟ್‍ ನಲ್ಲಿ 5 ಲಕ್ಷಕ್ಕೆ ಇಳಿಸಲಾಗಿದೆ. ಈ ಕುರಿತು ಅಧಿಕಾರಿಗಳೇ ತೀರ್ಮಾನ ಮಾಡಲಿ ಎಂದು ಜೀವಂಧರ್ ಜೈನ್‍ ತಿಳಿಸಿದರು.

ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳು ಸೇರಿದಂತೆ ವಿವಿಧೆಡೆ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ದುರಸ್ತಿಗೆ ಸುಮಾರು ಮೂರು ಕೋಟಿ ರೂ. ವೆಚ್ಚ ಬೇಕಾಗಬಹುದು. ಇದು ನಗರಸಭೆಯಿಂದ ಭರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಅನುದಾನ ಅಥವಾ ಶಾಸಕರ ನಿಧಿಯಿಂದ ವಿಶಷ ಅನುದಾವನ್ನು ಪಡೆಯುವ ಕುರಿತು ಚರ್ಚಿಸೋಣ ಎಂದು ಅಶೋಕ್‍ ಶೆಣೈ ಭಾಮಿ ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿಗೆ 9 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಹೆಸರು ಓದಲಾಯಿತು.

ವೇದಿಕೆಯಲ್ಲಿ ಪೌರಾಯುಕ್ತ ಮಧು ಎಸ್‍.ಮನೋಹರ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top