ಮಂಗಳೂರು: ದನವೊಂದು ಅನಾರೋಗ್ಯಕ್ಕೆ ತುತ್ತಾಗಿ ಸಾರ್ಜನಿಕರಿಗೆ ತೊಂದರೆ ನೀಡುತ್ತಿದ್ದಾಗ ಸ್ಥಳೀಯರು ಹೇಗಾದರು ಮಾಡಿ ದನವನ್ನು ಹಿಡಿದು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿದರೂ ಸಂಜೆ ವೇಳೆಗೆ ದನ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ನಡೆದಿದೆ.
ಸಾರ್ವಜನಿಕರು ಬಹಳ ಕಷ್ಟ ಪಟ್ಟು ಕಟ್ಟಿಹಾಕಿ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದರಾದರೂ ಫಲ ನೀಡದೆ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ವೇಳೆ ಮೃತಪಟ್ಟಿದೆ.
ಸೋಮೇಶ್ವರದ ದ್ವಾರದ ಬಳಿಯ ಗಣೇಶ್ ಕಾಜವ ಅವರ ಮಾಲೀಕತ್ವದ ದನಕ್ಕೆ ರಾತ್ರಿಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಳಗ್ಗೆ ಸಿಕ್ಕಿಸಿಕ್ಕಿದವರಿಗೆಲ್ಲ ಹಾಯುತ್ತ ಗೋಡೆಗಳಿಗೆ ತನ್ನ ಕೊಂಬನ್ನು ಗುದ್ದುತ್ತಾ ಗೂಳಿಯಂತೆ ವರ್ತಿಸುತ್ತಿತ್ತು. ಸಾರ್ವಜನಿಕರಿಗೆ ಹಾಯುವುದನ್ನು ಕಂಡು ಬೇಸತ್ತ ಜನರು ಹಲವು ಮಂದಿಯ ಸಹಕಾರದಿಂದ ಹಿಡಿದು ಬಳಿಕ ಕೋಟೆಕಾರಿನ ಪಶು ವೈದ್ಯರನ್ನು ಕರೆಸಿ ಅದಕ್ಕೆ ಅನಸ್ತೇಶಿಯಾ ನೀಡಲಾಯಿತು. ದನಕ್ಕೆ ಹುಚ್ಚು ನಾಯಿ ಕಡಿತದಿಂದ ರೇಬಿಸ್ ಬಂದಿರಬಹುದು ಎಂಬ ಭಯ ಸಾರ್ವಜನಿಕರಿಗೆ ಮೂಡಿತ್ತಾದರೂ ವೈದ್ಯರ ಅಭಿಪ್ರಾಯದಂತೆ ದನಕ್ಕೆ ಮೆದುಳು ಜ್ವರ ಬಂದಿರಬಹುದು ಎಂದು
ಶಂಕಿಸಲಾಗಿದ್ದು ಸಂಜೆ ಹೊತ್ತಿಗೆ ದನ ಸಾವಿಗೀಡಾಗಿದೆ. ಬಳಿಕ ಮಾಲೀಕರ ಮನೆಯ ವಠಾರದ ಲ್ಲಿ ದಫನ ಮಾಡಲಾಯಿತು.