ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಶ್ರೀ ಗಣೇಶನ ಪ್ರತಿಷ್ಠೆ – ವಿವಿಧ ಕಾರ್ಯಕ್ರಮಗಳಿಗೆ ಚಾಲನೆ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ 58 ನೇ ವರ್ಷದ ಗಣೇಶೋತ್ಸವಕ್ಕೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಟಾರು ಗುರುತಂತ್ರಿಯವರು ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಮಾಡುವ ಮೂಲಕ ಶನಿವಾರ ಚಾಲನೆ ನೀಡಿದರು.

ಬೆಳಿಗ್ಗೆ ಸಮಿತಿ ಪದಾಧಿಕಾರಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ದೇವಳದ  ಎದುರು ಗದ್ದೆಯ ಬೃಹತ್ ಚಪ್ಪರದಲ್ಲಿ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಕಾರ್ಯ ನಡೆಯಿತು.

ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಬಳಿಕ ಸಭಾ ವೇದಿಕೆ ಬಳಿ ಭಗವಧ್ವಜಾರೋಹಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ  ರವೀಂದ್ರ ಪಿ. ನೆರವೇರಿಸಿ ಮಾತನಾಡಿ, ಡಾ. ಎಂ ಕೆ ಪ್ರಸಾದ್ ಅವರು ನನಗೆ ಎಲ್ಲವು ಬೇಕು ಅನ್ನುವುದಕ್ಕಿಂತ ನಾನೆನು ಸಮಾಜಕ್ಕೆ ಕೊಡಬಹುದು ಎಂದು ಚಿಂತನೆಯಿಂದ ತರುಣರನ್ನು ಬೆಳೆಸಿದ್ದಾರೆ‌. ಅವರು ಯಾವುದನ್ನು ಯೋಚಿಸಿದ್ದರೋ ಅದು ಇವತ್ತು ಅದು ಆಗುತ್ತಿದೆ. ಭಾರತ ಉಳಿಯಲು, ಜಗತ್ತು ಉಳಿಯಲು ಹಿಂದುತ್ವ ಉಳಿಯಲೇ ಬೇಕು. ಇದು ಉಳಿಯಬೇಕಾದರೆ ನಮಗೆ ಗಣಪತಿಯೇ ಬುದ್ದಿ ಕೊಡಬೇಕು. ಗಣಪತಿ ಹಿಂದು ಸಮಾಜವನ್ನು ಉಳಿಸುವ ಶಕ್ತಿ‌ಕೊಡುತ್ತದೆ‌. ಗಣಪತಿಯ ಒಂದೊಂದು ಅಂಗವು ಹಿಂದುತ್ಚದ ಶಕ್ತಿ. ಈ ನಿಟ್ಡಿನಲ್ಲಿ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಕಿಚ್ಚನ್ನು ಹರಡಲು ಗಣೇಶೋತ್ಸವನ್ನು ಸಾರ್ವಜನಿಕವಾಗಿ ಆಚರಿಸಿದರು. ಅದೇ ರೀತಿ ಪುತ್ತೂರಿನ ಬಾಲಗಂಗಾಧರ ತಿಲಕರಾಗಿ ಡಾ. ಎಂ ಕೆ ಪ್ರಸಾದ್ ಅವರು ನಮ್ಮ ಮುಂದಿದ್ದಾರೆ ಎಂದರು.



































 
 

ಅಧ್ಯಕ್ಷತೆ ವಹಿಸಿದ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಲು ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿ, ಬಾಲಗಂಗಾಧರ ತಿಲರ ಪಾತ್ರ ಇರಬಹುದು. ಆದರೆ ಹಿಂದುತ್ವ ಬೆಳೆಸಲು ಸರ್ವಸ್ವನ್ನು ತ್ಯಾಗ ಮಾಡಿದ ಡಾ. ಎಂ ಕೆ ಪ್ರಸಾದ್ ಅವರು ಪುತ್ತೂರಿನ ಶಕ್ತಿ ಎಂದರು.

ಗಣೇಶೋತ್ಸವ ಸಮಿತಿ ಹಿರಿಯರಾದ ರಾಮಚಂದ್ರ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯಕ್ಕಾಗಿ ಗಣೇಶೋತ್ಸವ ಪ್ರಾರಂಭಿಸಿದರು. ಡಾ. ಎಂ ಕೆ ಪ್ರಸಾದ್ ಅವರು ಪುತ್ತೂರಿನಲ್ಲಿ ಹಿಂದು ಸಂಘಟನೆಯನ್ನು ಒಗ್ಗೂಡಿಸಲು ಆರಂಭಿಸಿದರು. ಹಾಗಾಗಿ ಅವರು ದೂರ ದೃಷ್ಡಿತ್ವವುಳ್ಖವರು ಎಂದು ಹೇಳಿದರು.

ಈ ಸಂದರ್ಭ ಗಣೇಶೋತ್ಸ ಸಮಿತಿ ಗೌರವಾಧ್ಯಕ್ಷ ಡಾ. ಎಂ ಕೆ ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ,  ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ ಬನ್ನೂರು, ಜೊತೆ ಕಾರ್ಯದರ್ಶಿ ನೀಲಂತ್ ಬೊಳುವಾರು, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಬಜರಂಗದಳದ ಹರೀಶ್ ದೋಳ್ಪಾಡಿ, ಉದಯ ಹೆಚ್, ಸುಧೀರ್ ಶೆಟ್ಟಿ, ರಾಜೇಶ್ ಬನ್ನೂರು, ರಾಮಚಂದ್ರ ಕಾಮತ್, ವಿದ್ಯಾ ಗೌರಿ, ಅಜಿತ್ ರೈ ಹೊಸಮನೆ, ರೂಪೇಶ್, ಕಿರಣ್ ಶಂಕರ್ ಮಲ್ಯ, ವಿಶ್ವನಾಥ ನಾಕ್ ಹಾರಾಡಿ, ಮಾದವ ಪೂಜಾರಿ, ವಿಶ್ವನಾಥ ಕುಲಾಲ್, ದಿನೇಶ್ ಪಂಜಿಗ, ಪೂವಪ್ಪ, ಸುಜೀರ್ ಕುಮಾರ್, ಮಲ್ಲೇಶ್ ಆಚಾರ್ಯ, ಚಂದ್ರಶೇಖರ್, ಗೋಪಾಲಕೃಷ್ಣ, ಗೋಪಾಲ್ ನಾಕ್, ದೇವಿಪ್ರಸಾದ್ ಮಲ್ಯ, ಶ್ರೀಧರ ಪಟ್ಲ, ದಯಾನಂದ, ನಾಗೇಶ್ ಟಿ ಎಸ್, ರಾಮಕೃಷ್ಣ , ಅಪ್ಪಯ್ಯ ಮಣಿಯಾಣಿ,  ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಂಬ್ಳೆ ಉಪಸ್ಥಿತರಿದ್ದರು.

ಅಕ್ಷಯ ಕೆ ಎಲ್ ಗೌಡ ಪ್ರಾರ್ಥಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ ಸ್ವಾಗತಿಸಿದರು. ಪೂವಪ್ಪ ನಾಯ್ಕ್ ವಂದಿಸಿದರು. ಬೆಳಿಗ್ಗೆ ವಜ್ರಮಾತ ಭಜನಾ ಮಂಡಳಿಯಿಂದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಿಂಪಲ್ ಮೆಲೋಡಿಸ್ ಅವರಿಂದ ಭಜಮಾ ಕಾರ್ಯಕ್ರಮ ನಡೆಯಿತು.

ಈ ವರ್ಷ 140 ಕೋಟಿ ಭಾರತೀಯರ ಕನಸು ಸಾಕಾರಗೊಳಿಸಿದ ವರ್ಷ:

ಅಯೋಧ್ಯೆಯಲ್ಲಿ ಶ್ರೀರಮಾನ  ಮಂದಿರ ಸಾಕಾರಗೊಂಡಿದೆ. ಇನ್ನಷ್ಡು ಹಿಂದು ಮಂದಿರಗಳು ಇನ್ನು ಉಳಿದಿದೆ. ನಾವು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಬೇಕು. ಇನ್ನು ನಮ್ಮನ್ನು ಮುಟ್ಟಲು ಬಂದರೆ ದೇವರ ಕೈಯಲ್ಲಿ ಆಯುಧ ಯಾಕೆ ಕೊಟ್ಟದು ಎಂದು ನೆನಪಿಸಬೇಕು. ಜಾತಿ ಬೇಧ ಸ್ವಾರ್ಥದ ಭಾವ, ರಾಜಕಾರಣದ ಕೆಟ್ಟ ದುರಭ್ಯಾಸ ಬಿಟ್ಡು ಹಿಂದುತ್ವಕ್ಕಾಗಿ ಹೊರಬರಬೇಕಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ನೇ ವರ್ಷದ ಸಂಭ್ರಮದಲ್ಲಿ ಪಂಚ ಪರಿವರ್ತನೆಯಾಗಿರುವ ಕುಟುಂಬಪ್ರಬೋದನ್, ಪರಿಸರ ಸಂರಕ್ಷಣೆ,  ಸಾಮಾರಸ್ಯ, ಸ್ವದೇಶಿ ಭಾವ ಜಾಗೃತಿ, ನಾಗರಿಕ ಶಿಷ್ಠಾಚಾರವನ್ನು ಬೆಳೆಸಬೇಕಾಗಿದೆ.

ರವೀಂದ್ರ ಪಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top