ಪುತ್ತೂರು: ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಾಗಿದ್ದು ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ಈ ಪ್ರಕರಣದೊಂದಿಗೆ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನ್ಯಾಯಾಧೀಶರೆದುರು 164ರಡಿ ಹೇಳಿಕೆ ನೀಡಿದ ಬಳಿಕದ ಬೆಳವಣಿಗೆಯಲ್ಲಿ ಅತ್ಯಾಚಾರ ಆರೋಪವನ್ನೂ ಸೇರಿಸಲಾಗಿದೆ ಮಾತ್ರವಲ್ಲದೆ, ಘಟನೆ ಬೆಂಗಳೂರುನಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ, ಅರ್ಜಿ ಸಲ್ಲಿಸಿದ್ದಾರೆ.
ಪುತ್ತಿಲ ಅವರ ಹಿಂದುತ್ವದ ಪ್ರತಿಪಾದನೆ ಮತ್ತು ಪ್ರಖ್ಯಾತಿಯನ್ನು ಕಂಡು ತಾನು ಅಭಿಮಾನವನ್ನು ಹೊಂದಿದ್ದು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನೈತಿಕ ಬೆಂಬಲ ನೀಡುತ್ತಿದ್ದ, ನನ್ನನ್ನು ಅವರು ಬೆಂಗಳೂರು ಪೈ ವಿಸ್ಮಾ ಹೊಟೇಲ್‌ಗೆ ಜೂನ್ 2023ಕ್ಕೆ ಕರೆಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿ, ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇತರ ಕಡೆಗಳಲ್ಲಿ ಮುಖತ: ಸಂಪರ್ಕಿಸುತ್ತಿದ್ದು ಎಲ್ಲಾ ಸಂದರ್ಭಗಳಲ್ಲೂ ಕೂಡಾ, ಒಂದೋ ನಿನ್ನ ಪ್ರಾಣ ಹೋಗುತ್ತದೆ ಎಂದು ಹೇಳಿ ಕರೆಸಿಕೊಳ್ಳುತ್ತಿದ್ದರು. ಅಬಲೆಯಾದ ನನ್ನನ್ನು ಮತ್ತು ನನ್ನ ಮಗಳನ್ನು ಜೀವನಪೂರ್ತಿ ಯಾವುದೇ ಕುಂದುಕೊರತೆಗಳಿಲ್ಲದೆ ನೋಡಿಕೊಳ್ಳುತ್ತನೆಂದು ಹೇಳಿ ನನ್ನನ್ನು ನಂಬಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು.
ನಾನು ಆತನೊಂದಿಗಿದ್ದ ಕ್ಷಣಗಳ ಛಾಯಾಚಿತ್ರಗಳು, ಸೆಲ್ಪಿಗಳು, ಆಡಿಯೋ-ವೀಡಿಯೋಗಳು ಅರುಣ್ ಕುಮಾರ್. ಪುತ್ತಿಲ ತನ್ನಲ್ಲಿದೆಯೆಂದು ಹೇಳಿ ನನ್ನನ್ನು ಬೆದರಿಸಿ, ಬ್ಲಾಕ್‌ಮೇಲ್ ಮಾಡಿ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದು 2024ರ ಲೋಕಸಭೆ ಚುನಾವಣೆಯ ನಂತರ ತನ್ನೊಂದಿಗಿನ ಮಾತುಕತೆಯನ್ನು ಕಡಿಮೆಗೊಳಿಸಿ, ನನ್ನನ್ನು ಸಂಪೂರ್ಣ ವಾಗಿ ಶೋಷಣೆಗೊಳಪಡಿಸಿರುವುದಾಗಿಲಿ ಆರೋಪಿಸಿ ಸಂತ್ರಸ್ತ ಮಹಿಳೆ ಸೆ.1 ರಂದು ನೀಡಿದ ದೂರಿನ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.ಆರೋಪಿ ಅರುಣ್ ಕುಮಾರ್ ಪುತ್ತಿಲ ಅವರು ಬಳಿಕ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.
ಅತ್ಯಾಚಾರ ಆರೋಪ ಸೇರ್ಪಡೆ: ಸಂತ್ರಸ್ತೆ ನ್ಯಾಯಾಧೀಶರೆದುರು ಹೇಳಿಕೆ ನೀಡಿದ ಬಳಿಕ ಪೊಲೀಸರು ಇದೀಗ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ(ಐಪಿಸಿ ಸೆಕ್ಷನ್ 376) ಆರೋಪವನ್ನೂ ಪ್ರಕರಣದಲ್ಲಿ ಸೇರ್ಪಡೆಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವುದರಿಂದ ಪುತ್ತೂರು ನ್ಯಾಯಾಲಯದಿಂದ ಈ ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಸುಪರ್ದಿಗೆ ವರ್ಗಾಯಿಸುವಂತೆಯೂ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ಪ್ರಕರಣವನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸಿದರೆ ಮುಂದಿನ ವಿಚಾರಣೆ ಬೆಂಗಳೂರುನಲ್ಲಿಯೇ ನಡೆಯಲಿದೆ.