ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ

ಭಾರತೀಯರಾದ ನಾವು ಗುರುಗಳನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಚಿಕ್ಕದಿನಿಂದಲೇ ಈ ಶ್ಲೋಕಗಳನ್ನು ಹೇಳುತ್ತಾ ಬೆಳೆದಿದ್ದೇವೆ.

ಭಾರತ ದೇಶದ ಆದರ್ಶ ಶಿಕ್ಷಕರಾದ ಡಾ ಸರ್ವಪಲ್ಲಿ ರಾಧಾಕೃಷನ್‌ ರವರನ್ನು ನೆನೆಯುವ ದಿನವಾದ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 5 ರಂದು ಪ್ರತಿ ವರ್ಷ ನಡೆಯುತ್ತದೆ.ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ಕಲ್ಪಿಸುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ರವರು. ಆದ್ದರಿಂದ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೂ ಮೂಡಿಸಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು.







































 
 

ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು, ಅಚ್ಚುಕಟ್ಟಾಗಿ ಕೆತ್ತಿ, ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ ಅವರ ವಿದ್ಯಾರ್ಜನೆ ನೀಡುವ ಮಕ್ಕಳಿಗೆ ಪ್ರೀತಿತೋರಿ ಅವರನ್ನು ಗೌರವಿಸುವುದು ಒಳಿತಾಗಿದೆ. ಹೀಗೆ ಮುಂದೊಂದು ದಿನ ಅವರು ನವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಾಗ ಅವರ ಮನಸ್ಸಿನಲ್ಲಿ “ಇವನು ನನ್ನ ವಿದ್ಯಾರ್ಥಿ” ಎಂಬ ಸಾರ್ಥಕತೆಯ ಮನೋಭಾವನೆ ಅವರ ಮನಗಳಲ್ಲಿ ಮೂಡಿದರೆ ಅದು ಅವರ ಶಿಕ್ಷಕ ವೃತ್ತಿಯ ಸಾರ್ಥಕತೆ. ಎನಿಸುತ್ತದೆ.

ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಬಲ ಪಾತ್ರ ವಹಿಸುವುದು ಶಿಕ್ಷಕರು ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮುಖ್ಯವಾದದ್ದು. ನಾವು ಇಂದು ವಿದ್ಯಾರ್ಥಿಗಳಾಗಿರಬಹುದು. ಆದರೆ ಮುಂದೆ ಸಮಾಜದಲ್ಲಿ ಪ್ರತಿಯೊಬ್ಬರು ಒಂದೊಂದು ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬಹುದು, ದೇಶದ ಸೇವೆ ಸಲ್ಲಿಸಬಹುದು. ಅದಕ್ಕೆ ಮುನ್ನುಡಿ ಬರೆಯುತ್ತಿರುವವರು, ನಮ್ಮನ್ನು ತಿದ್ದುತಿರುವವರು, ಹೊಸ ಹೊಸ ವಿಷಯಗಳನ್ನು ತಿಳಿಸಿ ಕಲಿಸುತ್ತಿರುವವರು ಶಿಕ್ಷಕರೇ. ಆದ್ದರಿಂದ ಶಿಕ್ಷಕರ ಸ್ಥಾನಕ್ಕೆ ಅಷ್ಟೊಂದು ಮಹತ್ವ ಇದೆ.

ವಿದ್ಯಾರ್ಥಿ ಜೀವನದುದ್ದಕ್ಕೂ ಬಹಳಷ್ಟು ಶಿಕ್ಷಕರು ಬಂದು ಹೋಗುತ್ತಾರೆ. ನಮಗೆ ಒಂದೊಂದು ಅಕ್ಷರ ಕಲಿಸಿದವರು ಸಹ ಶ್ರೇಷ್ಠ ಶಿಕ್ಷಕರೇ. ಒಂದೊಂದು ನೀತಿ ಪಾಠ ಕಲಿಸಿದವರು ಸಹ ಶಿಕ್ಷಕರೇ. ಜೀವನದಲ್ಲಿ ನಾವು ಅನುಭವಗಳಿಂದ, ಪ್ರಕೃತಿಯಿಂದ, ನಾವು ಸಾಕುವ ಪ್ರಾಣಿಗಳಿಂದ, ಪಕ್ಷಿಗಳಿಂದಲೂ ಸಹ ಶಿಕ್ಷಣವನ್ನು ಕಲಿಯುತ್ತೇವೆ. ನಾವು ಕಲಿಯುವ ಪಾಠ ಇದೆ. ನಮ್ಮ ಜೀವನಕ್ಕೆ ಉತ್ತಮ ಅನುಭವದ ಶಿಕ್ಷಣವನ್ನು ನೀಡುತ್ತದೆ.

ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ ಮನೆಯಲ್ಲಿರುವ ತಾಯಿ-ತಂದೆ ಹಿರಿಯ ಜೀವಗಳು, ಒಡಹುಟ್ಟಿದವರು, ಬಂಧು ಬಳಗದವರು, ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ವ್ಯಕ್ತಿಗಳು, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು ಮತ್ತು ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವಂತೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನಿಗೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಅರಿಯಲು ಸಾಧ್ಯವಿಲ್ಲ.

ಯಾವಾಗ ಗುರುವಿನಿಂದ ಕಲಿತ ಈ ಎಲ್ಲ ವಿದ್ಯೆಗಳನ್ನು ಉಪಯೋಗಿಸಿಕೊಂಡು ನಾವು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬಿಂಬಿತರಾಗುತ್ತೇವೋ ಅದುವೇ ಗುರುಗಳಿಗೆ ನೀಡುವ ಗುರುದಕ್ಷಿಣೆಯಾಗಿರುತ್ತದೆ. ಗುರುವನ್ನು ಪ್ರೀತಿಸೋಣ ಗುರುವನ್ನು ಗೌರವಿಸೋಣ.

ಜಯಶ್ರೀ.ಸಂಪ 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top