ಪುತ್ತೂರು; ಇಲ್ಲಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವ್ಯವಹಾರ ನಿರ್ವಹಣಾ ವಿಭಾಗ, ಐಕ್ಯೂಎಸಿ ಘಟಕ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಯುವ ಉದ್ಯಮಿಗಳೊಂದಿಗೆ ಸಂವಹನ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಉದ್ಯಮಿ ಅನಂತ ಕೃಷ್ಣ ಮುಳಿಯ ಉದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆಯ ಅಧ್ಯಯನದ ಕುರಿತು ತಿಳಿಸಿದರು. ತಮ್ಮ ಕುಟುಂಬದ ಉದ್ಯಮ ವ್ಯವಹಾರ, ಅದು ಅವರಿಗೆ ನೀಡಿದ ಅನುಭವ ಮತ್ತು ತಮ್ಮ ವ್ಯವಹಾರ ಪ್ರಕ್ರಿಯೆಯಗಳ ಕುರಿತು ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಮುಖ್ಯಸ್ಥೆ ರೇಖಾ.ಪಿ, ಶೈಕ್ಷಣಿಕ ಕಲಿಕೆಯೊಂದಿಗೆ ವಿಭಾಗದಿಂದ ನಡೆಯುವ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನಗಳಿವೆ. ಶೈಕ್ಷಣಿಕವಾಗಿ ಅಂಕಗಳಿಸುವುದರೊಂದಿಗೆ ಹೆಚ್ಚಿನ ಗುಣಮಟ್ಟದ ಕಲಿಕೆ ಹಾಗೂ ಸೃಜನಶೀಲ ಮತ್ತು ನವೀನ ಕಲ್ಪನೆಗಳು ವಿದ್ಯಾರ್ಥಿಗಳನ್ನು ಉದ್ಯೋಗ ಹುಡುಕುವವರನ್ನಾಗಿ ಮಾಡದೆ, ಉದ್ಯೋಗ ನೀಡುವವರನ್ನಾಗಿ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ ಅನ್ನಪೂರ್ಣ ಪಿ.ಜಿ., ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಯಶಸ್, ಕಾರ್ಯದರ್ಶಿ ತನೀಶಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನುಜ್ಞಾ ಸ್ವಾಗತಿಸಿ, ಶ್ರಾವ್ಯ ವಂದಿಸಿದರು. ಭವ್ಯ ನಿರ್ವಹಿಸಿದರು.