ಸವಣೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರೋಟರಿ ಕ್ಲಬ್ ಎಲೈಟ್ ಪುತ್ತೂರು ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಪ್ರೀತಿ ಇದ್ದರೆ ಸಮಾಜ ಸ್ಪಸ್ಥವಾಗಿರುತ್ತದೆ ಮತ್ತು ಪರಿಸರ ಪ್ರಜ್ಞೆಯು ಶುಧ್ಧ ವಾತಾವರಣ ಮತ್ತು ಉದ್ಯೋಗ ಪಡೆಯುವುದಕ್ಕೂ ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರಿನ ಸಹಾಯಕ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಮಾತನಾಡಿ, ಹಸಿರು ಇದ್ದಲ್ಲಿ ಹೇಗೆ ವಾತಾವರಣದ ಸಮತೋಲನ ಇರುತ್ತದೆ ಎಂದು ತಿಳಿಸಿದರು.
ಮತ್ತೋರ್ವ ಅತಿಥಿ ಮಂಗಳೂರಿನ ಸಹಾಯಕ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮಾತನಾಡಿ, ಹೇಗೆ ಮತ್ತು ಯಾಕೆ ಎಳವೆಯಲ್ಲಿಯೇ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ಸಭಾಧ್ಯಕ್ಷತೆಯನ್ನು ಆಡಳಿತಾಧಿಕಾರಿ ಮತ್ತು ರೋಟರಿ ಕ್ಲಬ್ ಎಲೈಟ್ ಪುತ್ತೂರು ಇದರ ಅಧ್ಯಕ್ಷರೂ ಆಗಿರುವ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ವಹಿಸಿದ್ದರು. ರೋಟರಿ ಕ್ಲಬ್’ನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಮತ್ತು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ. ನಾರಾಯಣ ಮೂರ್ತಿ, ಸೀತಾರಾಮ ಕೇವಳ ಮತ್ತು ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿಯ ಯಶಸ್ವಿ ರೈ ನಿರೂಪಿಸಿದ ಕಾರ್ಯಕ್ರಮದಲ್ಲಿ 10ನೆ ತರಗತಿಯ ಲಾಸ್ಯ ಮತ್ತು ಬಳಗದವರು ಪ್ರಾರ್ಥನೆ, 9ನೆ ತರಗತಿಯ ಫಾತಿಮಾತ್ ಹನಾ ಸಂವಿಧಾನ ಪೀಠಿಕೆ ವಾಚನ, 10ನೆ ತರಗತಿಯ ಆಯಿಷತ್ ಹನಾ ಸ್ವಾಗತ ಮತ್ತು 9ನೆ ತರಗತಿಯ ಶಂತನು ಕೃಷ್ಣ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು.