ಪುತ್ತೂರು: ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ವೈಭವದ ಶೋಭಾಯಾತ್ರೆ ಶನಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ವೈಭವದ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಮಂಗಳೂರು ಪ್ರಸಾರ ಪ್ರಚಾರ ಪ್ರಮುಖ್‍ಪ್ರದೀಪ್‍ಸರಿಪಲ್ಲ ಧ್ವಜ ಹಸ್ತಾಂತರ ಮಾಡಿದರು.
ಬಳಿಕ ವೈಭವದ ಶೋಭಾಯಾತ್ರೆ ಶ್ರೀಕೃಷ್ಣನ ಸುಂದರ ರಥದೊಂದಿಗೆ, ವಿಟ್ಲ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯವರಿಂದ ಆಕರ್ಷಕ ತಾಲೀಮು, ಕೀಲು ಕುದುರೆ, ನಾಸಿಕ್ ಬ್ಯಾಂಡ್ ಒಳಗೊಂಡು ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಯ್ದ ಪ್ರದೇಶದಲ್ಲಿ ಹಾಕಲಾದ ಅಟ್ಟಿ ಮಡಿಕೆ ಒಡೆಯುವ ಮೂಲಕ ಸಾಹಸ ಪ್ರದರ್ಶನವನ್ನು ತೋರಿದರು. ಬಳಿಕ ಅಂಚೆ ಕಚೇರಿ ಬಳಿಯಿಂದ ದೇವಸ್ಥಾನದ ವಠಾರಕ್ಕೆ ಬಂದು ಸಭಾ ಕಾರ್ಯಕ್ರಮದ ಮುಗಿದ ಬಳಿಕ ಶೋಭಾಯಾತ್ರೆ ಮುಖ್ಯ ರಸ್ತೆಯಾಗಿ ಬಸ್‍ನಿಲ್ದಾಣದಿಂದ ಹೊರಟು ಕಲ್ಲಾರೆ ವರೆಗೆ ಸಾಗಿ ಅಲ್ಲಿಂದ ತಿರುಗಿ ಶ್ರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ, ಸಂಚಾಲಕ ಪುತ್ತೂರು ಉಮೇಶ್ ನಾಯಕ್, ಕಾರ್ಯದರ್ಶಿ ಜಗದೀಶ್ ನೀರ್ಪಾಜೆ, ಕೋಶಾಧಿಕಾರಿ ಹರೀಶ್ ಕುಮಾರ್ ದೋಳ್ಪಾಡಿ, ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಕಾರ್ಯದರ್ಶಿ ಜೀತೇಶ್ ಬಲ್ನಾಡು, ಬಜರಂಗದಳ ಸಂಯೋಜಕ ಜಯಂತ ಕುಂಜೂರುಪಂಜ ಹಾಗೂ ಪ್ರಮುಖರಾದ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀಧರ್ ತೆಂಕಿಲ, ದಿನೇಶ್ ಪಂಜಿಗ, ಭಾಮಿ ಅಶೋಕ್ ಶೆಣೈ, ಕೇಶವ ಪ್ರಸಾದ್ ಮುಳಿಯ, ಮುರಳಿಕೃಷ್ಣ ಹಸಂತಡ್ಕ, ವಿರೂಪಕ್ಷ ಭಟ್, ಮಾಧವ ಪೂಜಾರಿ, ಲಕ್ಷ್ಮಣ ಗೌಡ, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಅಜಿತ್ ರೈ ಹೊಸಮನೆ, ಸಚಿನ್ ಶೆಣೈ, ಪ್ರೇಮಲತಾ ರಾವ್, ಪ್ರಭಾ ಮೊದಲಾದವರು ಪಾಲ್ಗೊಂಡರು.