ಪುತ್ತೂರು: ಐಶ್ವರ್ಯ ಲಕ್ಷ್ಮಿ ಅವರು ಮಂಡಿಸಿರುವ “ಇಫೆಕ್ಟ್ ಆಫ್ ಸಿಂಥೆಟಿಕ್ ಫೈಬರ್ಸ್ ಆನ್ ಪ್ರೀಸ್ಟ್ರೆಸ್ಡ್ ಕಾಂಕ್ರೀಟ್ ಬೀಮ್ಸ್ ಸಬ್ಜೆಕ್ಟೆಡ್ ಟು ಕೋರೋಸಿವ್ ಎನ್ವಿರಾನ್‌ಮೆಂಟ್” ಮಹಾಪ್ರಬಂಧಕ್ಕೆ ಇತ್ತೀಚಿಗೆ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಐಶ್ವರ್ಯ ಲಕ್ಷ್ಮೀ ಅವರು ಡಾ. ಪೂರ್ಣಚಂದ್ರ ಪಂಡಿತ್ ಪ್ರಾಧ್ಯಾಪಕ – ಸಿವಿಲ್ ಇಂಜಿನಿಯರಿಂಗ್ ಇಲಾಖೆ ಎಮ್.ಐ.ಟಿ ಮಣಿಪಾಲ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿರುತ್ತಾರೆ.
ರಾಮಕೃಷ್ಣ ಮಾಟುಕುಮೇರು ಮತ್ತು ಇಂದಿರಾವತಿ ಅಡ್ವಳ ಅವರ ಪುತ್ರಿಯಾಗಿದ್ದು, ಪುತ್ತೂರು ಪಡೀಲ್ ನಿವಾಸಿಯಾಗಿದ್ದಾರೆ. ಪ್ರಸ್ತುತ NITK ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.