ಇ-ಸ್ವತ್ತು ತಂತ್ರಾಂಶದಲ್ಲಿ ಆರಂಭಿಕ ದಿನಗಳಲ್ಲೇ ತೊಡಕು | ಗ್ರಾಮೀಣ ಜನರಿಗೆ ಸಂಕಷ್ಟ | ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಲೋನ್, ಡೋರ್ ನಂಬರ್ ಪಡೆಯುವುದು, ವಾಸದ ಕಟ್ಟಡ ಸಹಿತ ವಿವಿಧ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಾರ್ಯ ಸ್ಥಗಿತ

ಗ್ರಾಮ ಪಂಚಾಯತ್ ಮಟ್ಟದಲ್ಲಿ “ಇ-ಸ್ವತ್ತು’ ತಂತ್ರಾಂಶದ ಅಳವಡಿಕೆ ಹೊಸ ಲೆವೆಲ್‌ ಗೆ ತಲುಪಿದೆ. ಮತ್ತೆ ಗ್ರಾಮ ಪಂಚಾಯತ್‌ನಲ್ಲೇ ಫಾರ್ಮ್ ಮತ್ತು 11Aಗೆ ಅರ್ಜಿ ಸಲ್ಲಿಕೆ ಮಾಡಬಹುದು, ಕೆಲಸ ಸುಲಭವಾಗಿ ನಡೆಯಬಹುದು ಎಂದು ಜನರು ಭಾವಿಸಿದ್ದರು. ಆದರೆ, ಇ-ಸ್ವತ್ತು ತಂತ್ರಾಂಶದ ಆರಂಭಿಕ ದಿನಗಳಲ್ಲಿ ತೊಡಕು ಉಂಟಾಗಿದ್ದು, ಗ್ರಾಮೀಣ ಜನರಿಗೆ ಸಂಕಷ್ಟ ತಂದಿದೆ.

ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆ ಅಳವಡಿಸಿದ ಒಂದು ತಿಂಗಳಲ್ಲೇ ತಾಂತ್ರಿಕ ಎಡವಟ್ಟುಗಳು ಕಾಣಿಸಿಕೊಂಡಿವೆ. ಇ-ಸ್ವತ್ತು ತಂತ್ರಾಂಶ ಹೊಸ ಅವತರಣಿಕೆಯ ಕಾರಣಕ್ಕೆ ಜುಲೈ 27ರಿಂದ ಜುಲೈ 29ರ ವರೆಗೆ ಕಾರ್ಯನಿರ್ವಹಿಸಿಲ್ಲ. ಆ ಬಳಿಕ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಹಲವು ಪಂಚಾಯತ್‌ಗಳಲ್ಲಿ ಸಾರ್ವಜನಿಕ ಸೇವೆಗೆ ತಾಪತ್ರಯ ಎದುರಾಗಿದೆ.

ವಿಶೇಷವಾಗಿ, ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಲೋನ್, ಡೋರ್ ನಂಬರ್ ಪಡೆಯುವುದು, ವಾಸದ ಕಟ್ಟಡ ಸಹಿತ ವಿವಿಧ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದು ಇತ್ಯಾದಿ ಕೆಲಸ ಆಗುತ್ತಿಲ್ಲ. ಇಡೀ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯ ಸ್ಥಗಿತಗೊಂಡಿದ್ದು, ಜನರು ಪಡಬಾರದ ಪಾಡು ಪಡುತ್ತಿದ್ದಾರೆ.



































 
 

9/113 ಖಾತೆ ಬದಲಾವಣೆಗಳು ಆಗುತ್ತಿಲ್ಲ. ಇದರಿಂದಾಗಿ ಏಕನಿವೇಶನದ ಅರ್ಜಿಗಳು ಬಾಕಿಯಾಗಿ ಮನೆ ಕಟ್ಟಲು ಪರವಾನಿಗೆ ನೀಡಲು ಕಷ್ಟವಾಗುತ್ತಿದೆ. ಭೂ-ಪರಿವರ್ತನೆಯಾದ ಜಾಗ ಮಾರಾಟ ಮಾಡಲು ಕೆಲವರಿಗೆ ಕಷ್ಟವಾಗುತ್ತಿದೆ. ಇನ್ನು ಕೆಲವರಿಗೆ 9/11a ಹಳೆಯ ಪ್ರತಿ ಪಡೆಯಲು ಆಗುತ್ತಿಲ್ಲ. ತಂತ್ರಾಂಶದಿಂದ ಆಗಾಗ ಲಾಗ್‌ ಔಟ್ ಆಗುತ್ತಿದೆ.

ಹಿಂದೆಲ್ಲ ಸುಲಭವಾಗಿ ಗ್ರಾಮ ಪಂಚಾಯತ್‌ನಲ್ಲಿ ಜನರ ಕೆಲಸಗಳು ಸಲೀಸಾಗಿ ಆಗುತ್ತಿದ್ದವು. ಜಮೀನಿನ ನಕ್ಷೆ ಆಗಿ 9/11a ಕೂಡ ಗ್ರಾಮ ಪಂಚಾಯತ್‌ನಲ್ಲಿ ನೀಡಲಾಗುತ್ತಿತ್ತು. ಆದರೆ, ಈಗ ಎಲ್ಲಕ್ಕಿಂತಲೂ ಈ ಹಿಂದಿನ RTC/ಪಹಣಿ ಪತ್ರವೇ ಪರವಾಗಿಲ್ಲ ಎಂಬಂತಾಗಿದೆ. ಹೊಸ ತಂತ್ರಾಂಶದಿಂದ ನಗರಾಭಿವೃದ್ಧಿ ಪ್ರಾಧಿಕಾರಗಳು ಏಕನಿವೇಶನ ಮಂಜೂರು ಮಾಡಲು ಜನರನ್ನು ಸತಾಯಿಸುತ್ತಿದೆ. ಎಲ್ಲವನ್ನೂ ನಗರಾಭಿವೃದ್ಧಿ ಪ್ರಾಧಿಕಾರಗಳೇ ಮಾಡುವುದಿದ್ದರೆ ಇನ್ನು ಗ್ರಾಮ ಪಂಚಾಯತ್‌ಗಳು ಕೇವಲ ತೆರಿಗೆ ಸಂಗ್ರಹಣೆ ಮಾತ್ರ ಸೀಮಿತವಾಗುತ್ತಿವೆ.

ಭೂ ಪರಿವರ್ತನೆ ಆದ ಜಮೀನಿಗೆ ಖಾತ ಕೊಡಲೇಬೇಕು. ಆದರೆ ಅಧಿಕಾರಿಗಳು ಏಕನಿವೇಶನ ಬೇಕು ಎಂದು ಸತಾಯಿಸಿ ಜನರನ್ನು “ದೋಚುಗರ ಕೂಟ”ವಾದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನ ಹೈರಾಣಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top