ಬೆಂಗಳೂರು : ರಾಮಮೂರ್ತಿ ನಗರದಲ್ಲಿರುವ ಜೈಗೋಪಾಲ್ ಗರೋಡಿಯ ರಾಷ್ಟೋತ್ಥಾನ ವಿದ್ಯಾಕೇಂದ್ರದಲ್ಲಿ ಆ. 17ರಂದು ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ಸಿಯಾ ಭಾವಿನ್ ಸವಜಾನಿ ಅವರು 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
100 ಮೀಟರ್ ಬ್ಯಾಕ್ ಸ್ಟ್ರೋಕ್, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ಬಾಲವನದ ಈಜು ತರಬೇತಿದಾರರಾದ ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್ ಅವರಿಂದ 10 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.
ಸಿಯಾ ಅವರು ಪ್ರಸ್ತುತ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ವಾಸವಾಗಿರುವ ಕೋಡಿಂಬಾಡಿಯ ಕೃಷ್ಣಕೃಪಾ’ ಅಡಿಕೆ ಖರೀದಿ ಮತ್ತು ಸಂಸ್ಕರಣಾ ಉದ್ಯಮದ ಮಾಲೀಕ ಭಾವಿನ್ ಅಶೋಕ್ ಭಾಯಿ ಸವಜಾನಿ ಮತ್ತು ಸಹನಾ ಭಾವಿನ್ ಸವಜಾನಿ ದಂಪತಿಯ ಪುತ್ರಿ.