ಮಂಗಳೂರು : ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ನೀಡಿದ ವಿಚಾರವನ್ನ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಕಾಲ್ನಡಿಗೆ ಜಾಥ ಆರಂಭಿಸಿ. ಸಾವಿರಾರು ಸಂಖ್ಯೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿಯಿಂದ ಕಾರ್ಯಕರ್ತರು ಆಗಮಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ನಾರಾಯಣ ಗುರು ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭವಾಗಿ ಪಾಲಿಕೆ ಮುಂಭಾಗದ ವರೆಗೆ ಆಗಮಿಸಿ. ಸಭೆ ನಡೆಯಿತು.
ಈ ವೇಳೆ ಪ್ರತಿಭಟನೆಯಲ್ಲಿ ಎಂ ಎಲ್ ಸಿ ಐವನ್ ಡಿಸೋಜ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ರು. ಸಭೆಯನ್ನುದ್ದೇಶಿಸಿ ಮಾತನಾಡಿದ ಐವನ್ ಡಿಸೋಜ, ಮಾತು ಆರಂಭಿಸುತ್ತಿದ್ದಂತೆ ರಾಜ್ಯಪಾಲರನ್ನು ಕಿತ್ತು ಹಾಕಲು ಬಾಂಗ್ಲಾ ರೀತಿ ಮಾಡ್ತೀವಿ ಅಂತ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ರು. ಹೇಳಿಕೆ ಬೆನ್ನೆಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಕಿಡಿಗೇಡಿ ಕೃತ್ಯಕ್ಕಿಳಿದ್ರು. ಬಸ್ಸಿಗೆ ಕಲ್ಲು ತೂರಾಟ ಮಾಡಿದ್ರು, ಜೊತೆಗೆ ಟೈರ್ ಗೆ ಬೆಂಕಿ ಹಚ್ಚಿದ್ರು. ಇನ್ನು ಜೋಕಟ್ಟೆಯ ಬಸ್ಸಿಗೆ ಕಲ್ಲೆಸೆದ ಕಾಂಗ್ರೆಸ್ ಕಾರ್ಯಕರ್ತರು ಹಿಂಸಾತ್ಮಕ ಕೃತ್ಯಕ್ಕೆ ಎಡೆಮಾಡಿಕೊಟ್ರು, ಕಲ್ಲೆಸೆದ ರಭಸಕ್ಕೆ ಓರ್ವ ಮಹಿಳೆಗೆ ಗಾಯವಾಗಿದೆ. ಇನ್ನು ಕಿಡಿಗೇಡಿ ಕೃತ್ಯಕ್ಕೆ ಎಡೆಮಾಡಿಕೊಟ್ಟವರನ್ನ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ.