ಕುದ್ಮಾರು : ದ.ಕ.ಜಿ.ಪಂ.ಸ.ಉ.ಹಿ ಪ್ರಾ ಶಾಲೆ ಕುದ್ಮಾರು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪೂರ್ವಾಹ್ನ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ ಅನ್ಯಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಚದ್ಮವೇಷದೊಂದಿಗೆ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಸಾಗಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಪಾರ್ವತಿ ಮರಕ್ಕಡ ವಹಿಸಿದ್ದರು. ವೇದಿಕೆಯಲ್ಲಿ ದತ್ತಿನಿಧಿ ದಾನಿಗಳಾದ ಶೂರಪ್ಪ ಗೌಡ ಪಟ್ಟೆತ್ತಾನ, ಆನಂದ ಗೌಡ, ರಂಜಿತ್ ಮುದ್ಯಾ, ಮೇದಪ್ಪ ಗೌಡ ಕುವೆತ್ತೋಡಿ, ರೇವತಿ, ಶಾಲಾ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ, ಶಾಲಾ ನಾಯಕ ಮಹಮ್ಮದ್ ತಾಜುದ್ದೀನ್ ಉಪಸ್ಥಿತರಿದ್ದರು.
ಎಸ್ ಡಿ ಎಮ್ ಸಿ ಯ ಮಾಜಿ ಸದಸ್ಯರಾದ ಪ್ರಶಾಂತಿ, ಕವಿತಾ, ಅಬ್ದುಲ್ ಲತೀಫ್, ಪುರಂದರ ಗೌಡ, ಕುಸುಮ ಅವರನ್ನು ಗೌರವಿಸಲಾಯಿತು.
ಆನಂದ ಗೌಡ ಮತ್ತು ಪುಷ್ಪಾವತಿ, ಆನಂದ ಗೌಡ ಬರೆಪ್ಪಾಡಿ, ಸತೀಶ್ ಕುಮಾರ್ ಕೆಡೆಂಜಿ, ವನಮಾಲ ಕಡಂಬ ಮತ್ತು ಮಕ್ಕಳು ಬರೆಪ್ಪಾಡಿ, ನರಸಿಂಹ ಪ್ರಸಾದ್ ಪಾಂಗಣ್ಣಾಯ ಮತ್ತು ಮಧುರಾ ಪ್ರಸಾದ್ ಪಾಂಗಣ್ಣಾಯ ಕುವೆತ್ತೋಡಿ, ರೇವತಿ ನಿವೃತ್ತ ದೈ. ಶಿ. ಶಿ. ಕಾಣಿಯೂರು, ಬೃಂದಾ ಮತ್ತು ರಕ್ಷಿತ್ ವಿ., ವಾಜಪೇಯಿ ಅಭಿಮಾನಿ ಬಳಗ, ಕುದ್ಮಾರು, ಶಾರದ ಮತ್ತು ಮನೆಯವರು ಖಂಡಿಗ, ಶೂರಪ್ಪ ಗೌಡ ಪಟ್ಟೆತ್ತಾನ, ನಿವೃತ್ತ ಜೆ.ಇ., ಬಿಎಸ್‌ಎನ್‌ಎಲ್, ನಿವೃತ್ತ ಮುಖ್ಯ ಶಿಕ್ಷಕಿ ಜುಲಿಯಾನ ಡಿಸೋಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಪಿ.ಎಸ್. ಕೊಡಮಾಡುವ ದತ್ತಿ ನಿಧಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಯೋಗೀಶ್ ಬರೆಪ್ಪಾಡಿ ನೀಡಿದ ಹೊಸ ದತ್ತಿ ನಿಧಿಯನ್ನು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಇದರ ನಿರ್ವಹಣೆಯನ್ನು ಶಿಕ್ಷಕಿಯರಾದ ವೀಣಾ ಮತ್ತು ಪ್ರಿಯಾಂಕ ನೆರವೇರಿಸಿ ಕೊಟ್ಟರು. ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿಯರಾದ ವೀರಾ ಡಿಸೋಜ, ಸುಕನ್ಯ, ಸೌಮ್ಯ, ಭವ್ಯ ಸಹಕರಿಸಿದರು.