ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಕ್ಕೆ ಚಾಲನೆ

ಪುತ್ತೂರು : ಕ್ಯಾಂಪ್ಕೋ ಲಿಮಿಟೆಡ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ನೆಹರೂನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

ರೈತರಿಗೆ ನೀಡುವ ಸಬ್ಸಿಡಿ ವಿಚಾರದಲ್ಲಿ ಹೊಸ ಮಾರ್ಗಸೂಚಿ ತಯಾರಿ : ಶೋಭಾ ಕಂರದ್ಲಾಜೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೃಷಿಯಂತ್ರ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ದೇಶದ ಜಿಡಿಪಿಯಲ್ಲಿ ಶೇ.18 ರಷ್ಟು ರೈತರ ಕೊಡುಗೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ತೆರದಿರುವ ಕೃಷಿಯಂತ್ರ ಬಾಡಿಗೆ ಕೇಂದ್ರಗಳಲ್ಲಿ ರೈತರಿಗೆ ನೀಡುವ ಕೃಷಿ ಸಲಕರಣೆಗಳಿಗೆ ಹೆಚ್ಚಿನ ಸಬ್ಸಿಡಿ ಜತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನು ಸರಕಾರದ ವತಿಯಿಂದ ತಯಾರಿಸಲಾಗಿದೆ ಎಂದು ತಿಳಿಸಿದರು.



































 
 

ಪ್ರಸ್ತುತ ಸನ್ನಿವೇಶದಲ್ಲಿ ಎತ್ತುಗಳನ್ನು ಬಳಸಿ ಹೂಳುವ, ಉತ್ತುವ ಪರಿಸ್ಥಿತಿ ಇಲ್ಲ. ಬದಲಾಗಿದೆ. ಕೃಷಿಕರಿಗೆ ಕೃಷಿಯಂತ್ರ ಪ್ರಮುಖವಾಗಿದೆ. ದೇಶಾದ್ಯಂತ ಒಟ್ಟು ರೈತರ ಪೈಕಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಜಾಸ್ತಿಯಿದ್ದು, ಕೃಷಿಕರಿಗೆ ಯಂತ್ರೋಪಕರಣಗಳ ಕುರಿತು ಜಾಗೃತಿ ಆಂದೋಲನ ಮಾಡಲಾಗುತ್ತಿದೆ ಎಂದ ಅವರು,  ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯುವ ಯೋಜನೆಯನ್ವಯ ಹೋಬಳಿ ಕೇಂದ್ರದಲ್ಲಿ ಕಸ್ಟಮರಿಂಗ್ ಕೇಂದ್ರ ತೆತೆಯಲಾಯಿತು. ಈ ಪೈಕಿ ಕೇವಲ 80 ಸಾವಿರ ಕೋಟಿ ಕೇವಲ ಟ್ರಾಕ್ಟರ್‌ಗೆ ಹೋಗುತ್ತಿದೆ. ಉಳಿದದ್ದಕ್ಕೆ  4  ಸಾವಿರ ಕೋಟಿ ಹೋಗುತ್ತದೆ. ಈ ನಿಟ್ಟಿನಲ್ಲಿ ಸಬ್ಸಿಡಿ ವಿಚಾರದಲ್ಲಿ ಹೊಸ ಮಾರ್ಗಸೂಚಿಗಳನ್ನು ತಯಾರಿಸಲಾಗಿದೆ ಎಂದು ಅವರು ಹೇಳಿದರು.

ಹಿಂದಿನಿಂದಲೂ ಕುಚ್ಚಿಲಕ್ಕಿಯನ್ನು ಬಳಸುತ್ತಿರುವ ದ.ಕ., ಉಡುಪಿ ಜಿಲ್ಲೆಯಲ್ಲಿ ಕುಚ್ಚಲಕ್ಕಿ ಬೆಳೆಯದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಹವಮಾನಕ್ಕನುಗುಣವಾಗಿ ಬೆಳೆಯುವ ಭತ್ತ ಹಣ್ಣುಗಳು ಹೀಗೆ ಸುಮಾರು 1500 ಜಾತಿಯನ್ನು ಹವಮಾನಾಧಾರಿತ ಬೆಳೆಗಳನ್ನು ಕಂಡು ಹಿಡಿಯಲಾಗಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಹೊಸ ಸಂಶೋಧನೆಗೆ ಹೆಚ್ಚಿನ ಅನುದಾನ, ಪ್ರೋತ್ಸಾಹ ನೀಡುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದರು.

ಒಂದೆಡೆ ಅಡಿಕೆಗೆ ರೋಗ ಬಾಧಿಸಿದ್ದು, ಇನ್ನೊಂದೆಡೆ ಅಡಿಕೆ ಹಾನಿಕಾರಕ ಎಂದು ಸುಪ್ರೀಂ ಕೊರ್ಟಿನಲ್ಲಿದೆ. ಈ ಕುರಿತು ಪ್ರಧಾನಮಂತ್ರಿ ಮೋದಿಯವರಲ್ಲಿ ಮನವಿ ಮಾಡಿಕೊಂಡಂತೆ ಅಡಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಮೋದಿಯರು ಒಳ್ಳೆಯ ವಕೀಲರ ತಂಡವನ್ನು ನೇಮಿಸಿ ಅಡಿಕೆಯನ್ನು ರಕ್ಷಿಸುವತ್ತ ಹೊರಟಿದ್ದಾರೆ ಎಂದು ತಿಳಿಸಿದರು.

ಕೃಷಿಯಂತ್ರ ಮೇಳದಿಂದ ರೈತಾಪಿ ವರ್ಗಕ್ಕೆ ಭರಪೂರ ಅನುಕೂಲ : ಸಂಜೀವ ಮಠಂದೂರು

ಮುಖ್ಯ ಅತಿಥಿಯಾಗಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೃಷಿ, ಋಷಿ ಪರಂಪರೆ ಹೊಂದಿದ ನಮ್ಮ ದೇಶದಲ್ಲಿ ಕೃಷಿಯೇ ಪ್ರಧಾನವಾಗಿದೆ. ಈ ನಿಟ್ಟಿನಲ್ಲಿ ರೈತರೊಂದಿಗೆ ನಾವಿದ್ದೇವೆ. ಆಧುನಿಕ ಯಂತ್ರೋಪಕರಣಗಳು ಅಭಿವೃದ್ಧಿಯಾದಂತೆ ರೈತನು ಸ್ವಾವಲಂಬಿ ಜತೆ ಕೃಷಿ ಉತ್ಪನ್ನಗಳ ಬೆಳೆಯುವಿಕೆಯೂ ಜಾಸ್ತಿಯಾಗಿದೆ ಎಂದ ಅವರು ಈಗಾಗಲೇ ಅಡಿಕೆ ಹಾನಿಕಾರ ಎಂದು ಬಿಂಬಿಸಲಾಗಿದೆ. ಅಡಿಕೆ ಮೌಲ್ಯವರ್ಧಿತ ವಸ್ತುಗಳ ಕಜಾನೆ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಲಾಗುವುದು. ಕೃಷಿಯಂತ್ರ ಮೇಳದಿಂದ ಸಾಕಷ್ಟು ರೈತರಿಗೆ ಭರಪೂರ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳ ಮಳಿಗೆಗಳನ್ನು ತೆರೆಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಕೃಷಿಯಿಂದ ಅಧಿಕ ಉದ್ಯೋಗ ಸೃಷ್ಟಿ : ಕಿಶೋರ್ ಕೊಡ್ಗಿ

ಮುಖ್ಯ ಅತಿಥಿಯಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಮಾತನಾಡಿ, ಪ್ರಸ್ತುತ ಕೃಷಿಯಿಂದಲೇ ಉದ್ಯೋಗ ಸೃಷ್ಟಿಯಾಗುವಂತದ್ದು. ಈ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಮೊರೆ ಹೊಗಬೇಕಾದ ಅಗತ್ಯವಿದೆ. ಕೇವಲ ಆತ್ಮನಿರ್ಭರ ವರದಿಗಷ್ಟೇ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು. ಜತೆಗೆ ಬರ್ಮಾ, ಇಂಡೋನೇಷ್ಯಾ ಮುಂತಾದ ಕಡೆಗಳಿಂದ ಇಂಪೋರ್ಟ್ ಆಗುವ ಅಡಿಕೆಯನ್ನು ಸಂಪೂರ್ಣ ನಿಷೇಧಿಸಬೇಕಾಗಿದೆ. ಅಲ್ಲದೆ ಸ್ಮಾರ್ಟ್ ವಿಲೇಜ್ ನಿಟ್ಟಿನಲ್ಲಿ ಹಳ್ಳಿಗಳಲ್ಲೂ ಅಭಿವೃದ್ಧಿ ಕಾರ್ಯ ನಡೆಯುವಂತಾಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದರು.

ಕ್ಯಾಂಪ್ಕೋ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎಂ.ಕೃಷ್ಷ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಮಳಿಗೆಗಳನ್ನು ಕಾಸರಗೋಡು ಐಸಿಎಆರ್-ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಉದ್ಘಾಟಿಸಿದರು. ಕನಸಿನ ಮನೆ ಮಳಿಗೆಯನ್ನು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಎಸ್.ಸುಬ್ರಹ್ಮಣ್ಯ ಎಡಪಡಿತ್ತಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕ್ಯಾಂಪ್ಕೋ ಉಪಾಧ್ಯಕ್ಷ ಶಂಖರನಾರಾಯಣ ಖಂಡಿಗೆ, ಜನರಲ್ ಮೆನೇಜರ್ ರೇಶ್ಮಾ ಮಲ್ಯ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಬುಲಿಂಗ ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಂ ಸರಳಾಯ, ಪದ್ಮರಾಜ್ ಪಟ್ಟಾಜೆ, ರಾಘವೇಂದ್ರ ಭಟ್, ರಾಧಾಕೃಷ್ಣ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ರಾಘವೇಂದ್ರ ಎಚ್.ಎಂ., ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಹ್ಮಣ್ಯ ಭಟ್ ಟಿ.ಎಸ್. ಉಪಸ್ಥಿತರಿದ್ದರು.

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಪ್ರಣೀತ್, ಅನಘ ಕೆ., ಸಿಂಚನಲಕ್ಷ್ಮೀ, ಸುಮನ ಕೆ., ಹರಿಪ್ರಸಾದ್, ಜೀವನ್್ ಪ್ರಾರ್ಥನೆ ಹಾಡಿದರು.  ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣಡಿ. ಕಲ್ಲಾಜೆ ಸ್ವಾಗತಿಸಿದರು. ಅಧ್ಯಕ್ಷ ವಿಶ್ವಾಸ್  ಶಣೈ ವಂದಿಸಿದರು. ಸೌಮ್ಯ, ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top