ಪುತ್ತೂರು: ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿಮಂಡಲ ರಚಿಸಲಾಯಿತು.
ಶಾಲಾ ವಿದ್ಯಾರ್ಥಿ ನಾಯಕನಾಗಿ 5ನೇ ತರಗತಿಯ ಅದ್ವಿಕ್ ಬಂಜನ್, ಉಪನಾಯಕನಾಗಿ 4ನೇ ತರಗತಿಯ ಅನ್ವಿತ್ ಕೆ ಎಲ್, ಶಿಕ್ಷಣ ಮಂತ್ರಿಯಾಗಿ ನಾಲ್ಕನೇ ತರಗತಿಯ ಗನ್ವಿತ್ ಹೆಚ್, ಕ್ರೀಡಾ ಮಂತ್ರಿಯಾಗಿ 5ನೇ ತರಗತಿಯ ಚ್ಯವನ್ ಜಿ ಗೌಡ, ಸಾಂಸ್ಕೃತಿಕ ಮಂತ್ರಿಯಾಗಿ ಮೂರನೇ ತರಗತಿಯ ಎ. ಎನ್ ಜ್ಯೋಸ್ತ್ನ ಗೌಡ ಹಾಗೂ ಆರೋಗ್ಯಮಂತ್ರಿಯಾಗಿ 5ನೇ ತರಗತಿಯ ವಿಕ್ಯಾತ್ ಎನ್. ಆಯ್ಕೆಯಾದರು.
ಶಾಲೆಯಲ್ಲಿ ನಡೆದ ಪದ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ನೀಡಿ ಶುಭ ಕೋರಿದರು. ಸಂಸ್ಥೆಯ ಪ್ರಾಂಶುಪಾಲೆ ಸವಿತಾ ಕುಮಾರಿ ಕೆ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕಿ ಪುಷ್ಪಾವತಿ ಕಳುವಾಜೆ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸವಿತಾ ಕುಮಾರಿಯವರು ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಪ್ರಕ್ಷುತ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿ, ಶಿಕ್ಷಕಿ ರೀಮ ಲೋಬೋ ವಂದಿಸಿದರು. ಶಿಕ್ಷಕಿಯರಾದ ರಾಧಾ, ಕುಮಾರಿ ಪ್ರಕ್ಷುತ ಕಾರ್ಯಕ್ರಮ ನಿರೂಪಿಸಿದರು.