ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ಟಾಫ್ ಡೆವಲಪ್‌ಮೆಂಟ್ ಆ್ಯಂಡ್ ಅಪ್ರೈಸಲ್ ಸೆಲ್‌ನ ಆಶ್ರಯದಲ್ಲಿ ಕಾಲೇಜಿಗೆ ನೂತನವಾಗಿ ಸೇರ್ಪಡೆಗೊಂಡ ಉಪನ್ಯಾಸಕರಿಗಾಗಿ ಹಮ್ಮಿಕೊಳ್ಳಲಾದ ಇಂಡಕ್ಷನ್ ಪ್ರೋಗ್ರಾಂನ ಸಮಾರೋಪಗೊಂಡಿತು.
ನಾಲ್ಕು ದಿನಗಳಲ್ಲಿ ನೂತನ ಉಪನ್ಯಾಸಕರಿಗಾಗಿ ಉನ್ನತ ಶಿಕ್ಷಣಕ್ಷೇತ್ರದಲ್ಲಿ ಅಳವಡಿಸಬಹುದಾದ ಬೋಧನಾ ವಿಧಾನಗಳು, ಸಂಶೋಧನೆಯ ಮಹತ್ವ ಹದಿಹರೆಯದ ವಿದ್ಯಾರ್ಥಿಗಳ ಸಮಸ್ಯೆಗಳು ಮುಂತಾದ ವಿಷಯಗಳ ಕುರಿತು ಒಟ್ಟು 14 ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಅಧ್ಯಾಪಕನಾದವನು ತನ್ನೆಲ್ಲಾ ಸಾಮರ್ಥ್ಯವನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮವಹಿಸಬೇಕು. ವಿದ್ಯಾರ್ಥಿಗಳೊಂದಿಗೆ ಗೌರವಯುತವಾಗಿ ವರ್ತಿಸಿ ಅವರಲ್ಲಿ ಸ್ಪೂರ್ತಿ ತುಂಬಬೇಕು. ಈ ಕಾರ್ಯಕ್ರಮವು ಸೇವೆಗೆ ಹೊಸದಾಗಿ ಸೇರ್ಪಡೆಗೊಂಡವರಿಗೆ ಅಧ್ಯಯನದ ಕಡೆಯಿಂದ ಅಧ್ಯಾಪನದ ಕಡೆಗಿನ ಪರಿವರ್ತನೆಗೆ ಸಹಕಾರಿಯಾದರೆ ಕಾಲೇಜಿನ ಹಿರಿಯ ಅಧ್ಯಾಪಕರಿಗೆ ತಮ್ಮೆಲ್ಲಾ ಅನುಭವಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಈ ರೀತಿಯ ತರಬೇತಿ ಕಾರ್ಯಕ್ರಮಗಳು ನಮ್ಮ ವೃತ್ತಿಜೀವನದ ಪೂರ್ವ ಸಿದ್ಧತೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಡೀನ್, ಐಕ್ಯುಎಸಿ ಸಂಯೋಜಕಿ ಡಾ. ಮಾಲಿನಿ ಶುಭ ಹಾರೈಸಿದರು.
ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಡಾ.ವಿಜಯ ಕುಮಾರ್, ಡಾ. ಮಾಲಿನಿ ಕೆ., ಪ್ರೇಮಲತಾ ಕೆ., ಡಾ.ಚಂದ್ರಶೇಖರ್ ಕೆ., ವಿನಯಚಂದ್ರ, ಡಾ.ರಾಧಾಕೃಷ್ಣ ಗೌಡ, ವಾಸುದೇವ ಎನ್., ಭಾರತಿ ಎಸ್ ರೈ, ಗೀತಾ ಪೂರ್ಣೀಮಾ ಕೆ., ಪ್ರತಿಭಾ, ಶ್ರೀಮಣಿ, ಡಾ. ಎಡ್ವಿನ್ ಡಿಸೋಜ, ವಿಪಿನ್ ನಾಯಕ್ ಪ್ರಶಾಂತ್ ರೈ ಮತ್ತು ಪ್ರತಿಭಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೀಲಮ್ ಕುಟ್ಟಪ್ಪ ಹಾಗೂ ಶಿವಾನಿ ಮಲ್ಯ ತಮ್ಮ ಬೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸೂಕ್ಷ್ಮ ಬೋಧನೆ ನಡೆಸಿದರು. ಉಪನ್ಯಾಸಕಿಯರಾದ ಆಶ್ರಿತಾ, ಅನೀಶಾ ಪ್ರಾರ್ಥಿಸಿದರು. ಸ್ಟಾಫ್ ಡೆವಲಪ್ ಮೆಂಟ್ ಆ್ಯಂಡ್ ಅಪ್ರೈಸಲ್ ಸೆಲ್ ನ ಸಂಯೋಜಕ ಡಾ. ಎಡ್ವಿನ್ ಡಿಸೋಜ ಸ್ವಾಗತಿಸಿದರು. ಶಿವಾನಿ ಮಲ್ಯ, ಮೈತ್ರಿ ಹಾಗೂ ವಿನಿಲ್ ಅನಿಸಿಕೆಗಳನ್ನು ಹಂಚಿಕೊಂಡರು. ಉಪನ್ಯಾಸಕಿ ಪೃಧ್ವಿ ವಂದಿಸಿದರು. ಫಾತಿಮತ್ ಸಾನಿದ ಕಾರ್ಯಕ್ರಮ ನಿರೂಪಿಸಿದರು.