ಮಾಣಿಲ : ಮಾಣಿಲ ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಇಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಯಾದ ಭಾಸ್ಕರ್ ಕಾರ್ಯನಿರ್ವಹಿಸಿದ್ದರು. ಬೆಳಿಗ್ಗೆ ಹತ್ತು ಮೂವತ್ತಕ್ಕೆ ಆರಂಭವಾಗಬೇಕಿದ್ದ ಸಭೆಯು ಹನ್ನೊಂದು ಕಾಲಕ್ಕೆ ಆರಂಭವಾಯಿತು.ಇದರಿಂದ ಗ್ರಾಮಸ್ಥರು ರೊಚ್ಚಿಗೆದ್ದರು.
ಸಭೆಯಲ್ಲಿ ಕುಡಿಯುವ ನೀರಿನ ಅಪಾರ ವಿದ್ಯುತ್ ಬಿಲ್ಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪರ್ಯಾಯ ಮಾರ್ಗದ ಬಗ್ಗೆ ಚಿಂತಿಸುವಂತೆ ಸೂಚಿಸಿದರು. ರಸ್ತೆಯಲ್ಲಿ ಹರಿಯುವ ನೀರು, ಬಗ್ಗೆಯೂ ಪ್ರಸ್ತಾಪ ನಡೆಯಿತು.
ಬಸವ ವಸತಿ ಯೋಜನೆಯ ಮನೆಯು ವಿದ್ಯುತ್ ತಂತಿಯ ಅಡಿಯಲ್ಲಿಯೇ ನಿರ್ಮಾಣ ವಾಗಿದ್ದರೂ ಪಂಚಾಯತ್ ಆಕ್ಷೇಪಿಸಿದೇ ಅನುದಾನ ಕೊಟ್ಟದ್ದು ಆಕ್ಷೇಪಕ್ಕೆ ಕಾರಣವಾಯಿತು. ಮಾತಿನಲ್ಲಿ ಅನೇಕ ವರ್ಷಗಳಿಂದ ಹಿಂದು ರುದ್ರ ಭೂಮಿಗೆ ಒತ್ತಾಯಿಸುತ್ತಿದ್ದರೂ ಕೇಂದ್ರ ಸ್ಥಾನದಲ್ಲಿ ಕಾದಿರಿಸಿದ ರುದ್ರ ಭೂಮಿ ಸುಸಜ್ಜಿತಗೊಳಿಸದ್ದಕ್ಕೆ ಗ್ರಾಮಸ್ಥರು ಸೂಚಿಸಿದರು.
ಬಹುಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ ಗ್ರಾಮ ಸಭೆಯಲ್ಲಿ ಕೃಷಿ,ತೋಟಗಾರಿಕೆ, ವೈದಕೀಯ,ಆರಕ್ಷಕ, ಮೆಸ್ಕಾಂ, ಕಂದಾಯ,ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಇಂಜೀನಿಯರ್ ವಿಭಾಗ ಗೈರುಹಾಜರಾಗಿತ್ತು.
ಮಾಜಿ ಪಂಚಾಯತ್ ಪ್ರಧಾನ ಮುರುವು ಮಹಾಬಲ ಭಟ್,ಪೆರುವಾಯಿ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಸ್.ನಾರಾಯಣ, ಅಶೋಕ ಶೆಟ್ಟಿ, ಬಿರ್ಕಾಪು. ರಾಘವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಸ್ವಾಗತಿಸಿದರು, ಕಾರ್ಯದರ್ಶಿ ರಾಮನಾಯ್ಕ ಹಿಂದಿನ ಸಭೆಯ ನಡಾವಳಿ ಮಂಡಿಸಿದರು, ಸಿಬ್ಬಂದಿ ಭವ್ಯಾ ಜಮಾ ಖರ್ಚಿನ ವರದಿ ಮಂಡಿಸಿದರು.