ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದಲ್ಲಿ ಸದಸ್ಯತ್ವ ಅಭಿಯಾನ ಆಗಬೇಕು, ಸಮಾಜದಲ್ಲಿ ಒಗ್ಗಟ್ಟು ಜತೆಗೆ ಜಿಲ್ಲೆಯಲ್ಲಿ ಎರಡು ಸಂಘಟನೆ ಇದ್ದರೆ ನಮ್ಮ ಬೆಂಬಲವಿಲ್ಲ. ಯಾವುದಾದರು ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘ ಬೆಂಬಲ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಪ್ರಸ್ತಾಪಿಸಿದಂತೆ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ನಮ್ಮ ಸಂಘದಿಂದ ಬೆಂಬಲವಿದೆ ಎಂದು ನಿರ್ಐಯಿಸಲಾಯಿತು.
ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಪುತ್ತೂರು ತಾಲೂಕು ಸಂಘ ಬೆಂಬಲ ನೀಡಲಿವೆ:
ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಸಮಾಜದ ಒಳಿತಿಗಾಗಿ ಸಂಘ ಇರಬೇಕು.. ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಪುತ್ತೂರು ತಾಲೂಕು ಸಂಘ ಬೆಂಬಲ ನೀಡಲಿವೆ ಎಂದ ಅವರು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಒತ್ತು ನೀಡುವ ಕೆಲಸ ಆಗಬೇಕು. ನಾವು ಅದಕ್ಕೆ ಪೂರ್ಣ ಸಹಕಾರ ನೀಡುತ್ತೇವೆ. ನಮ್ಮಲ್ಲಿ ಸ್ವಸಪಾಯ ಸಂಘವಿದೆ. 1468 ಗುಂಪು ಇದೆ. 18 ಸಾವಿರ ಮಂದಿ ಸದಸ್ಯರಿದ್ದಾರೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಬಲಿಷ್ಠವಾಗಿದ್ದು, ಇದನ್ನು ಉಳಿಸುವ ಕೆಲಸ ಆಗಬೇಕಾಗಿದೆ :
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಬಲಿಷ್ಠವಾಗಿದ್ದು, ಇದನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಅಗತ್ಯವಾಗಿ ನಡೆಯಬೇಕು. ಪರಿವರ್ತನೆ ಕಾಲದಲ್ಲಿ ಗೌಡ ಸಮಾಜದಿಂದ ಸದಸ್ಯತ್ವತನ ಸಾಕಾಗುವುದಿಲ್ಲ. ಹೊಸ ಪೀಳಿಗೆ ಬರುವಂತೆ ಮಾಡಬೇಕು.. ತಿಂಗಳಲ್ಲಿ ಒಂದೆರಡು ದಿನ ಗ್ರಾಮಕ್ಕೆ ಹೋಗಿ ಸದಸ್ಯತ್ವ ಅಭಿಯಾನ ಮಾಡಬೇಕು. ಗ್ರಾಮ ಸಮಿತಿಗಳು ಬಲಿಷ್ಠವಾಗಬೇಕು ಮತ್ತು ಅದನ್ನು ಸಕ್ರೀಯಗೊಳಿಸಬೇಕು. ಜಿಲ್ಲೆಯಲ್ಲಿ ಸಂಘ ಬಲಿಷ್ಠ ಎಂದು ಗುರುತಿಸಿಕೊಳ್ಳುವುದಕ್ಕೆ ಎರಡು ವರ್ಷದ ಹಿಂದೆ ಸ್ವಾಮೀಜಿಯವರ ಮುತುವರ್ಜಿಯಲ್ಲಿ ಮಾಜಿಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರ ಉಪಸ್ಥಿತಿಯಲ್ಲಿ ಜಿಲ್ಲಾ ಗೌಡ ಸಮಾಜ ಅಸ್ತಿತ್ವಕ್ಕೆ ಬಂತು ಈ ಸಾಘಟನೆ ಮೂಲಕ ಎಲ್ಲಾ ಗೌಡ ಸಮಾಜವನ್ನು ಒಂದಾಗಿ ಸೇರಿಸುವ ಚಿಂತನೆ ನಡೆದಾಗ ಅಲ್ಲಿ ಇನ್ನೊಂದು ಸಂಘಕ್ಕೆ ನಾಂದಿಯಾಯಿತು. ಜಿಲ್ಲೆಯಲ್ಲಿ ಎರಡು ಸಮಿತಿಯಾದರೆ ಸಂಘಟನೆ ವಿಗಡಣೆಯಾಗುತ್ತೆ ಎಂದು ಹೇಳಿ ಆಗಿದೆ. ಆದರೆ ಈಗ ಎರಡು ಸಂಘಟನೆ ಜಿಲ್ಲೆಯಲ್ಲಿದೆ. ಹಾಗಾಗಿ ಅವರು ಮಾತುಕತೆ ಮಾಡಿ ಒಂದು ಸಂಘ ಮಾಡಲಿ. ನಾವು ಯಾರ ಪರವೂ ಇಲ್ಲ. ಸಂಘ ಒಬ್ಬ ವ್ಯಕ್ತಿಗಾಗಿ ಅಲ್ಲ, ಇಡೀ ಸಮಾಜಕ್ಕೆ ಸಂಘ ಇರಬೇಕು ಎಂದು ಚಿಂತಿಸಬೇಕು. ನಮ್ಮಲ್ಲಿ ಒಂದೇ ಸಂಘ ಇರಬೇಕು ಎಂದರು.
ಪುತ್ತೂರಿನಲ್ಲಿ ಗೌಡ ಸಮುದಾಯ ಭವನಕ್ಕೆ ಸದಸ್ಯರು ಆಗಾಗ ಭೇಟಿ ನೀಡಬೇಕು :
ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಸಂಘ ಆರಂಭದಲ್ಲಿ ಹೆಚ್ಚು ಗ್ರಾಮಗಳನ್ನು ಒಳಗೊಂಡಿತ್ತು. ಆದರೆ ಕಡಬ ತಾಲೂಕು ಪ್ರತ್ಯೇಕವಾದ ಬಳಿಕ ಬಲಾಢ್ಯ ಗ್ರಾಮಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಪಾಲ್ತಾಡು ಗ್ರಾಮದವರು ಪುತ್ತೂರಿಗೆ ಸೇರುವ ಕುರಿತು ಪ್ರಸ್ತಾಪ ಮಾಡಿದ್ದರು. ಇದೀಗ ಸಂಘದ ಸಭೆಯಲ್ಲಿ ಪುತ್ತೂರು ಸಮಿತಿಗೆ ಹಾಲ್ದಾಡು ಗ್ರಾಮವನ್ನು ಸೇರಿಸುವ ನಿರ್ಣಯ ಮಾಡಲಾಗಿದೆ. ಮುಂದೆ ಬೈಲಾ ತಿದ್ದುಪಡಿ ಮಾಡಬೇಕಾದೀತು ಎಂದ ಅವರು, ಪುತ್ತೂರಿನಲ್ಲಿ ಗೌಡ ಸಮುದಾಯ ಭವನಕ್ಕೆ ಸದಸ್ಯರು ಆಗಾಗ ಭೇಟಿ ನೀಡಬೇಕು ಎಂದು ಹೇಳೀದರು. ಪ್ರತೀ ವರ್ಷವಂತೆ ರೂ.10 ಸಾವಿರ ಬೇಣಿಗೆಯನ್ನು ಸಂಘದ ಅಧ್ಯಕ್ಷರಿಗೆ ಚಿದಾನಂದ ಬೈಲಾಡಿ ಹಸ್ತಾಂತರಿಸಿದರು.
ತಾಲೂಕು ಮಟ್ಟದಲ್ಲಿ ನಾವು ಸದಸ್ಯತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು:
ಸಂಘದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ನಾವು ಸದಸ್ಯತ್ವ ಮಾಡುವಲ್ಲಿ ಹಿಂದೆ ಸರಿದಿದ್ದೇವೆ. ಸದಸ್ಯರಾಗಿದ್ದರೆ ಅವರಿಗೆ ಸಮುದಾಯ ಭವನದಲ್ಲಿ ರಿಯಾಯಿತಿ ಸಹಿತ ವಿವಿಧ ಸವಲತ್ತು ನೀಡಲಾಗುತ್ತದೆ. ಹಾಗಾಗಿ ತಾಲೂಕು ಮಟ್ಟದಲ್ಲಿ ನಾವು ಸದಸ್ಯತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮುಂದಿನ ಮಹಾಸಭೆಗೆ ಕನಿಷ್ಠ 1 ಸಾವಿರ ಹೊಸ ಸದಸ್ಯರ ಸೇರ್ಪಡೆಯಾಗಬೇಕು ಎಂದರು.
ಮಹಿಳಾ ಗೌಡ ಸಂಘದ ಅಧ್ಯಕ್ಷ ವಾರಿಜ ಕೆ. ಗೌಡ ಸಂಘದ ಕಾರ್ಯಚಟುವಟಕೆಯನ್ನು ತಿಳಿಸಿದರು,
ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಮಾತನಾಡಿ, ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿನಂತಿಸಿದರು.
ಮಾಜಿ ಸೈನಿಕರಿಗೆ ಸನ್ಮಾನ:
ಸಮಿತಿಯಲ್ಲಿದ್ದು ವಿವಿಧ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್., ಉಪಾಧ್ಯಕ್ಷ ಸುಂದರ ಗೌಡ ನಡುಬೈಲು, ಪಾಲ್ತಾಡಿಯ ಕ್ಯಾ ಸಂಜೀವ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಹಿರಿಯರಾದ ರಾಮಣ್ಣ ಗೌಡ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಇರ್ದೇ ಸಂದರ್ಭ ಮುಖ್ಯಮಂತ್ರಿ ಪದಕ ಪುರಸ್ಕೃತ ಗೃಹರಕ್ಷಕ ಶ್ರೀ ಮಹಾಲಿಂಗೇಶ್ವರ ದೇಪನಾನನ ಭದ್ರತಾ ಸಿಬ್ಬಂದಿ ಜಗನ್ನಾಥ ಪಿ. ಅವರನ್ನು ಸನ್ಮಾನಿಸಲಾಯಿತು. ಲೋಕೇಶ್ ಚಾಕೊಟಿ ಮತ್ತು ಪುರುಷೋತ್ತಮ ಮುಂಗ್ಲಿಮನೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಪುರಸ್ಕಾರ:
ಎಸ್ ಎಸ್ ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ.ಶ್ರೀಧರ ಪಾಣತ್ತಿಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್. ವಾರ್ಷಿಕ ವರದಿ ಮಾಡಿಸಿದರು ಸಂಘದ ಲೆಕ್ಕಪತ್ರವನ್ನು ಖಜಾಂಚಿ ಶಿವರಾಮ ಮತಾವು ಮಂಡಿಸಿದರು ಸಭಾಭವನದ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ ಅವರು ಸಭಾಭವನದ ಲೆಕ್ಕಪತ್ರ ಮಂಡಿಸಿದರು. ಉಪಾಮಣಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರವಿ ಮುಂಗ್ಲಿಮನೆ ಸ್ವಾಗತಿಸಿ, ಒಕ್ಕಲಿಗ ಗೌಡ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಪಿ.ವಿ.ನಾರಾಯಣ ವಂದಿಸಿದರು. ಸಭಾಭವನ ವ್ಯವಸ್ಥಾಪಕ ಸುರೇಶ್ ಮೂವಪ್ಪು ಸಹಕರಿಸಿದರು.