ಸರ್ವೆ: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಸರ್ವೆ, ಒಕ್ಕಲಿಗ ಗೌಡ ಸೇವಾ ಸಂಘ, ಯುವ ಘಟಕ ,ಮಹಿಳಾ ಘಟಕದ ಸಹಯೋಗದಲ್ಲಿ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಭಕ್ತಕೋಡಿ ಶ್ರೀರಕ್ಷಾ ಸಭಾಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕೊಂಡಾಡಿಕೊಪ್ಪ ಶಾಲಾ ಮುಖ್ಯ ಶಿಕ್ಷಕ ಜಯಂತ್ ವೈ, ತುಳುನಾಡಿನ ಆಟಿ ತಿಂಗಳ ಆಚರಣೆಗಳ ಬಗ್ಗೆ ಹಾಡಿನ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸರ್ವೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಜಯಶೀಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್, ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಜನಾರ್ಧನ ಗೌಡ ಭಕ್ತ ಕೊಡಿ, ಸರ್ವೆ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಶೋಕ್ ಸರ್ವೆ, ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ಭಕ್ತಕೊಡಿ ಪಾಲ್ಗೊಂಡಿದ್ದರು.
ಪ್ರತಿಭಾ ಪುರಸ್ಕಾರ/ಪುಸ್ತಕ ವಿತರಣೆ :
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘದ ಸಭೆಗೆ ಸಕ್ರಿಯವಾಗಿ ಭಾಗವಹಿಸುತ್ತಿರುವ ಹಿರಿಯರಾದ ತಿಮ್ಮಪ್ಪ ಗೌಡ ಹಾಗೂ ಎಸ್. ಎಸ್. ಎಲ್. ಸಿ.ಯಲ್ಲಿ ಸರ್ವೆ ಗ್ರಾಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಿ.ಕೆ ರಕ್ಷಿತ್ ರವರನ್ನು ಶಾಲು, ಹಾರ ಹಾಕಿ ಹೂಗುಚ್ಛ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆ:
ಕಾರ್ಯಕ್ರಮದ ಮೊದಲು ಪುರುಷರಿಗೆ, ಮಹಿಳೆಯರಿಗೆ ಮಕ್ಕಳಿಗೆ ವಿವಿಧ ರೀತಿಯ ಒಳಾಂಗಣ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಜ್ಞಾನ ದೀಪ ಸಂಘದ ಸದಸ್ಯರು ಪ್ರಾರ್ಥಿಸಿದರು. ಪ್ರೇರಕಿ ಹೇಮಲತಾ ಒಕ್ಕೂಟದ ವರದಿ ಮಂಡಿಸಿದರು.ಭವ್ಯ ಕರುಂಬಾರು ಸ್ವಾಗತಿಸಿ, ವಸಂತ ಗೌಡ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.