ಪುತ್ತೂರು: ಬಪ್ಪಳಿಗೆ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದ ವತಿಯಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಕೃಷಿಕ ಮಾಧವ ಗೌಡ ಕಾಂತಿಲ ಮಾತನಾಡಿ, ಇಂದಿನ ಕಾಲಘಟ್ಟದ ಕೃಷಿ ಕಾರ್ಯದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಈ ಬದಲಾವಣೆಯು ಮಾನವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಆದುದರಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಪಾಲನೆಯೂ ಅವಶ್ಯಕ ಎಂದರು.
ಅಂಬಿಕಾ ಸಮೂಹ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟೋಜ ಮಾತನಾಡಿ, ಕೋರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಜಗತ್ತಿಗೆ ಅನ್ನವನ್ನು ನೀಡಿ ಮುನ್ನಡೆಸಿದ ಅನ್ನದಾತನಿಗೆ ಸದಾ ನಾವು ಋಣಿಯಾಗಿರಬೇಕು ಎಂದರು.
ಪ್ರಗತಿಪರ ಕೃಷಿಕ ಕೆ. ಮುತ್ತಪ್ಪ ಗೌಡ , ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ನಟೋಜ ಹಾಗೂ ಪ್ರಾಂಶುಪಾಲೆ ಡಿ.ಮಾಲತಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ತನ್ವಿ ರೈ ಹಾಗೂ ಭುವಿ ಕಾರ್ಯಕ್ರಮ ನಿರೂಪಿಸಿದರು. ಶಿವಕೀರ್ತನ್ ಸ್ವಾಗತಿಸಿದರು. ಸಿಂಚನ ಪಿ. ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಪಂದ್ಯಾಟಗಳು ನಡೆದವು.