ಪುತ್ತೂರು : ಎನ್.ಎನ್.ಎಮ್. ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ತುಳು ಚನಲಚಿತ್ರ “ಪಿಲಿ” ಫೆ.10 ರಂದು ಪುತ್ತೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಚನಲಚಿತ್ರ ನಿರ್ದೇಶಕ ಮಯೂರ್ ಆರ್. ಶೆಟ್ಟಿ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಿನೆಮಾದ ಪ್ರೀಮಿಯರ್ ಶೋ ದುಬೈನಲ್ಲಿ ನಡೆದಿದೆ. ಚಿತ್ರದಲ್ಲಿ ಯುವ ನಟ ಭರತ್ ಭಂಡಾರಿ ಕಥೆ ಬರೆದು ಪ್ರಥಮ ನಾಯಕ ನಟರಾಗಿ ಮಿಂಚಿದ್ದಾರೆ. ಸ್ವಾತಿ ಶೆಟ್ಟಿ ನಾಯಕಿ ನಟಿಯಾಗಿದ್ದಾರೆ. ವಿಜಯ ಕುಮಾರ್ ಕೊಡಿಯಾಲ್‍ಬೈಲ್, ಖ್ಯಾತ ನಟ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸಂತೋಷ್ ಶೆಟ್ಟಿ, ರೂಪ ಡಿ. ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಸಂದೀಪ ಶೆಟ್ಟಿ ಮಾಣಿಬೆಟ್ಟು ಮತ್ತಿರ ಹಲವಾರು ಮಂದಿ ಕಲಾವಿದರು ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದು ಅವರು ಹೇಳಿದರು.
ನಾಯಕನಟ ಭರತ್ ಭಂಡಾರಿ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಆಚರಣೆಯಲ್ಲಿ ಒಂದಾಗಿರುವ ಪಿಲಿ ನಲಿಕೆ ಕಥೆಗೆ ಮಾತ್ರ ಸೀಮಿತವಾಗದೆ “ಪಿಲಿ” ನಂಬಿಕೆಯ ಕುರಿತು ಚಿತ್ರದಲ್ಲಿ ಹಾಸ್ಯದೊಂದಿಗೆ ಕಥೆ ತೋರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚನಲಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.